ಮಲೈಕಾ ದಿಂದ ಗ್ರಾಹಕರಿಂದ ಕೋಟ್ಯಂತರ ರೂ. ವಂಚನೆ

Thursday, November 19th, 2020
Malaika

ಮಂಗಳೂರು : ಮಲೈಕಾ ಸೊಸೈಟಿ ಹೆಸರಲ್ಲಿ ಗ್ರಾಹಕರಿಗೆ ಕೋಟ್ಯಂತರ ರೂ. ಠೇವಣಿ ಸಂಗ್ರಹಿಸಿ ಅವಧಿ ಪೂರ್ಣಗೊಂಡಾಗ ಅದನ್ನು ಹಿಂತಿರುಗಿಸದೆ ವಂಚನೆ ಮಾಡಿದ ಬಗ್ಗೆ  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲೆಯ ಮಂಗಳೂರು, ತೊಕ್ಕೊಟ್ಟು, ಬಂಟ್ವಾಳ, ಪುತ್ತೂರು, ಸುಳ್ಯ, ವಿಟ್ಲ, ಮೂಡುಬಿದಿರೆ ಮೊದಲಾದ ಕಡೆ ಮಲೈಕಾ ಎಲೆಕ್ಟ್ರಾನಿಕ್ಸ್ ಮಳಿಗೆಗಳಿವೆ. ಇದರ ಜೊತೆ ಮುಂಬೈ, ಮಂಗಳೂರು, ಉಡುಪಿ ಮತ್ತಿತರ ಕಡೆ ಮಲೈಕಾ ಮಲ್ಟಿ ಸ್ಟೇಟ್ ಕೋ ಆಪರೇಟಿವ್ ಸೊಸೈಟಿ ಶಾಖೆಗಳನ್ನು ಸ್ಥಾಪಿಸಿ ಅದರಲ್ಲಿ ಸಂಗ್ರಹವಾದ ಠೇವಣಿ ಹಣವನ್ನು ಮಾಲಕರು ತಮ್ಮ ಖಾತೆಗೆ ಜಮೆ ಮಾಡಿರುವುದು ಬೆಳಕಿಗೆ […]

65 ವರ್ಷದ ದಲಿತ ವೃದ್ಧನ ಮೇಲೆ ಹಲ್ಲೆಗೈದು, ಮೂತ್ರ ಕುಡಿಸಿ ವಿಕೃತಿ ಮೆರೆದ ಯುವಕ

Tuesday, October 13th, 2020
amar

ಲಕ್ನೋ: ಮಗನ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿದಕ್ಕೆ ಪೊಲೀಸರಿಗೆ ದೂರು ನೀಡಿದ 65 ವರ್ಷದ ದಲಿತ ವೃದ್ಧನ ಮೇಲೆ ಹಲ್ಲೆಗೈದು, ಬಲವಂತವಾಗಿ ಮೂತ್ರ ಕುಡಿಸಿ ವಿಕೃತಿ ಮೆರೆದ ಘಟನೆ ಉತ್ತರಪ್ರದೇಶದ ಲಲಿತಪುರ ಗ್ರಾಮದ ರೊಡಾ ಎಂಬಲ್ಲಿ ನಡೆದಿದೆ. ಮೂತ್ರ ಕುಡಿಸಿದ  ಆರೋಪಿಯನ್ನು ಸೋನು ಯಾದವ್ ಎಂದು ಗುರುತಿಸಲಾಗಿದೆ. ಈತ ಕೆಲ ದಿನಗಳ ಹಿಂದೆ ವೃದ್ಧನ ಮಗನ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿದ್ದನು. ಹೀಗಾಗಿ ತಂದೆ- ಮಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಸೋನು ವಿರುದ್ಧ ದೂರು ದಾಖಲಿಸಿದ್ದರು. ದೂರು ದಾಖಲಾಲಾದ  […]

ಹುಡುಗಿಯರನ್ನು ಚುಡಾಯಿಸುತ್ತಿದ್ದುದಲ್ಲದೆ, ಬಾಲಕಿಯೊಬ್ಬಳಿಗೆ ಲೈಂಗಿಕ ದೌರ್ಜನ್ಯವೆಸಗಿದ ಬಾಲಕನ ಬಂಧನ

Thursday, October 1st, 2020
Girl

ಬಂಟ್ವಾಳ : ಫರಂಗಿಪೇಟೆ ಸಮೀಪದ ಕುಂಪಜಲು ಎಂಬಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವಾರಗಳ ಹಿಂದೆ ಪ್ರಕರಣ ದಾಖಲಾಗಿತ್ತು. ಆದರೆ ಅಪರಿಚಿತ ಆರೋಪಿ ಪತ್ತೆಯಾಗಿರಲಿಲ್ಲ. ಕಳೆದ ಕೆಲವು ತಿಂಗಳಿನಿಂದ ಕುಂಪಣಮಜಲು ಪರಿಸರದಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುವ ಯುವತಿಯರಿಗೆ ಈತ ಕಿರುಕುಳ ನೀಡುತ್ತಿದ್ದ ಬಗ್ಗೆ ಸಾರ್ವಜನಿಕ ದೂರುಗಳು ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣದ ಜಾಡು ಹಿಡಿದ ಬಂಟ್ವಾಳ ಗ್ರಾಮಾಂತರ ಠಾಣಾ ಎಸ್.ಐ. ಪ್ರಸನ್ನ ನೇತೃತ್ವದ ತಂಡ ಅಪ್ರಾಪ್ತ ಬಾಲಕನೊಬ್ಬನನ್ನು […]

25 ವರ್ಷದ ಮಹಿಳೆಯ ಮೇಲೆ 139 ಮಂದಿ ಅತ್ಯಾಚಾರ

Sunday, August 23rd, 2020
rape

ಹೈದರಾಬಾದ್: ಎಡಪಂಥೀಯ ವಿದ್ಯಾರ್ಥಿ ಸಂಘಟನೆ ಸದಸ್ಯರು, ಸಿನಿಮಾ ಕ್ಷೇತ್ರದವರು, ಪತ್ರಕರ್ತರು, ವೈದ್ಯರು ಸೇರಿದಂತೆ 139 ಮಂದಿ ನನ್ನ ಮೇಲೆ 5000ಕ್ಕೂ ಹೆಚ್ಚು ಬಾರಿ ಅತ್ಯಾಚಾರ ನಡೆಸಿದ್ದಾರೆ ಎಂದು 25 ವರ್ಷದ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದಾಳೆ. ಇವರ ಪೈಕಿ ಹಲವರು ಅಮೆರಿಕಾ ಮತ್ತು ಬೆಂಗಳೂರಿನಲ್ಲಿ ಇರುವುದಾಗಿ ಹೈದರಾಬಾದ್ ನ ಪಂಜಗುಟ್ಟ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತ ಮಹಿಳೆ ದೂರು ನೀಡಿದ್ದಾರೆ. ಗಂಡನ ಮನೆಯವರಿಂದ 2009ರಲ್ಲಿ ಲೈಂಗಿಕ ದೌರ್ಜನ್ಯ, ಹಿಂಸೆ ಆರಂಭವಾಗಿತ್ತು. ಈ ಹಿನ್ನೆಲೆಯಲ್ಲಿ ಆಕೆ 2010ರಲ್ಲಿ ಗಂಡನಿಗೆ ವಿಚ್ಛೇದನ […]

ಸೇತುವೆಯಿಂದ ಜಿಗಿದು ಪ್ರೇಮಿಗಳಿಬ್ಬರು ಆತ್ಮಹತ್ಯೆ

Friday, August 14th, 2020
Tunga River

ಶಿವಮೊಗ್ಗ: ಇಲ್ಲಿನ ಬೈಪಾಸ್ ರಸ್ತೆಯ ಸೇತುವೆಯಿಂದ ಪ್ರೇಮಿಗಳಿಬ್ಬರು ತುಂಗಾ ನದಿಗೆ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹುರುಳಿ ಹಳ್ಳಿ ಗ್ರಾಮದ ಸಂತೋಷ್ (25) ಹಾಗೂ ಕಾಕನಹಸುಡಿ ಗ್ರಾಮದ ಅನುಷಾ (20) ಅವರೇ ಆತ್ಮಹತ್ಯೆಗೆ ಶರಣಾಗಿರುವವರೆಂದು ತಿಳಿದುಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.  ನಗರದಲ್ಲಿರುವ ವಿಧಾತ್ರಿ ಭವನ ಹೊಟೇಲ್ ನಲ್ಲಿ ಸಂತೋಷ ಕೆಲಸಮಾಡುತ್ತಿದ್ದ. ಅನುಷಾ ಇತ್ತೀಚೆಗಷ್ಟೇ ಪಿ.ಯು. ಶಿಕ್ಷಣವನ್ನು ಮುಗಿಸಿದ್ದಳು. ಇವರಿಬ್ಬರು ಕೆಲವು ಸಮಯಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇಂದು ಮಧ್ಯಾಹ್ನದ ಸಮಯದಲ್ಲಿ ಇವರಿಬ್ಬರು ಇದ್ದಕ್ಕಿದ್ದಂತೆಯೇ ತುಂಗಾ ನದಿಗೆ ಹಾರಿದ್ದಾರೆ, ಕೂಡಲೇ […]

ವಿಷವುಣಿಸಿ ತಂದೆಯನ್ನು ಕೊಲ್ಲಲು ಮುಂದಾದ ಮಕ್ಕಳು

Sunday, July 26th, 2020
sullia

ಸುಳ್ಯ : ಸಾಕಿ ಬೆಳೆಸಿದ ಮಕ್ಕಳೇ ತಂದೆಯನ್ನು ವಿಷ ಹಾಕಿ ಕೊಲ್ಲಲು ಯೋಚಿಸುತ್ತಾರೆಂದರೆ ಅವರ  ಮನಸ್ಥಿತಿ ಹೇಗಿರಬೇಕು ನೀವೇ ಯೋಚಿಸಿ, ಸುಳ್ಯ ತಾಲೂಕಿನ  ನಾಲ್ಕೂರು ಗ್ರಾಮದ ಅಂಜೇರಿ ಎಂಬಲ್ಲಿ ಮಕ್ಕಳಿಬ್ಬರು ಸೇರಿ ಆಹಾರಕ್ಕೆ ವಿಷ ಬೆರೆಸಿ ತಂದೆಯ ಹತ್ಯೆಗೆ ಮುಂದಾದ ಘಟನೆಯೊಂದು ಜು.24 ರ ಗುರುವಾರ ನಡೆದಿದೆ. ಮಕ್ಕಳಾದ ದೇವಿಪ್ರಸಾದ್ ಮತ್ತು ಲೋಕೇಶ್ ಎಂಬಿಬ್ಬರು ತಂದೆಗೆ ವಿಷವುಣಿಸಿದ್ದು, ತಂದೆ, ಹೊನ್ನಪ್ಪ ನಾಯ್ಕ ಅಂಜೇರಿ ವಿಷಯುಕ್ತ ಆಹಾರ ಸೇವಿಸಿ ಅಸ್ವಸ್ಥಗೊಂಡ ವ್ಯಕ್ತಿ.  ಪೊಲೀಸರು ಮಕ್ಕಳನ್ನು  ವಶಕ್ಕೆ ಪಡೆದಿದ್ದಾರೆ. ಪುತ್ರ ಲೊಕೇಶ್ […]

ಮುಖ್ಯ ಪೇದೆಗೆ ಕೋವಿಡ್ ಸೋಂಕು, 48 ಗಂಟೆ ಪೊಲೀಸ್‌ ಠಾಣೆ ಬಂದ್

Monday, May 25th, 2020
Vitla-police

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್‌ ಅವರು ಪ್ರತಿಕ್ರಿಯಿಸಿ “ವಿಟ್ಲ ಪೊಲೀಸ್‌ ಠಾಣೆಯನ್ನು ವಿಟ್ಲ ಪಟ್ಟಣ ಪಂಚಾಯತ್‌ ವತಿಯಿಂದ ಸಂಪೂರ್ಣವಾಗಿ ಸ್ಯಾನಿಟೈಸ್‌ ಮಾಡಲಾಗಿದೆ ಹಾಗೂ ರವಿವಾರದಿಂದ ಎರಡು ದಿನಗಳ ಕಾಲ ಪೊಲೀಸ್‌ ಠಾಣೆಯನ್ನು ಮುಚ್ಚಲಾಗಿದೆ ಎಂದಿದ್ದಾರೆ. ವಿಟ್ಲ ಪೊಲೀಸ್‌ ಠಾಣೆಯಲ್ಲಿ ಒಟ್ಟು 40 ಮಂದಿ ಸಿಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೊರೊನಾ ಸೋಂಕಿತ ವ್ಯಕ್ತಿಯ ಜತೆ ಪ್ರಾಥಮಿಕ ಸಂಪರ್ಕ ಇರುವವರನ್ನು ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತದೆ. ಉಳಿದವರನ್ನು ಗೃಹ ನಿಗಾವಣೆಗೆ ಸೂಚನೆ ನೀಡಲಾಗಿದೆ. ಎಷ್ಟು ಮಂದಿ ಸಂಪರ್ಕಿತರು […]

ಬೆಂಗಳೂರು : ಮಾದಕ ವಸ್ತುಗಳ ಮಾರಾಟ ದಂಧೆ ಮೇಲೆ ಮುಗಿಬಿದ್ದ ಪೊಲೀಸರು

Thursday, March 19th, 2020
drugs

ಬೆಂಗಳೂರು : ನಗರದಲ್ಲಿ ಮಾದಕ ವಸ್ತುಗಳ ಮಾರಾಟ ಜಾಲದ ಹಾವಳಿ ತೀವ್ರಗೊಂಡಿದೆ. ಇದರ ವಿರುದ್ಧ ಸಮರ ಸಾರಿರುವ ಪೊಲೀಸರು, ನಗರದಾದ್ಯಂತ 21 ಪ್ರಕರಣಗಳನ್ನು ಪತ್ತೆ ಹಚ್ಚಿದ್ದಾರೆ. ಮಾದಕ ವಸ್ತುಗಳನ್ನು ಮಾರಾಟ ಮಾಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ನಗರ ಪೊಲೀಸ್ ಆಯುಕ್ತರು ನೀಡಿದ್ದ ಕಟ್ಟುನಿಟ್ಟಿನ ಆದೇಶ ಮೇರೆಗೆ ನಗರದಾದ್ಯಂತ ಕಾರ್ಯಾಚರಣೆ ನಡೆಸಲಾಗಿದೆ. ಬೆಂಗಳೂರು ದಕ್ಷಿಣ ವಿಭಾಗದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮಾರ್ಚ್‌ 09 ರಿಂದ ಮಾರ್ಚ್‌ 17ರವರೆಗೆ ಸತತವಾಗಿ ಕಾರ್ಯಾಚರಣೆ ಕೈಗೊಂಡು, ಮಾದಕವಸ್ತು ಸೇವನೆ […]

ಅತ್ಯಾಚಾರಿಗಳನ್ನು ಬಂಧಿಸದೆ ನಿರ್ಲಕ್ಷ್ಯ : ಪೊಲೀಸ್ ಠಾಣೆಯೆದುರೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಯುವತಿ

Tuesday, December 24th, 2019
Lacknow

ಲಕ್ನೋ : ತನ್ನ ಮೇಲೆ ಮೂವರು ಅತ್ಯಾಚಾರ ಎಸಗಿದ್ದಾರೆ ಎಂದು ದೂರು ನೀಡಿದರೂ ಕ್ರಮ ಕೈಗೊಳ್ಳದ ಪೊಲೀಸರ ನಿರ್ಲಕ್ಷ್ಯ ಧೋರಣೆಗೆ ಬೇಸತ್ತ ಅಪ್ರಾಪ್ತ ಯುವತಿ ತನ್ನ ತಂದೆ-ತಾಯಿಯೊಂದಿಗೆ ವಾರಾಣಸಿಯ ಪೊಲೀಸ್ ಅಧಿಕಾರಿಯಕಚೇರಿಯ ಎದುರೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ತಕ್ಷಣ ಮೂವರನ್ನೂ ಆಸ್ಪತ್ರೆಗೆ ಸೇರಿಸಲಾಗಿದ್ದು, ಪ್ರಾಣಾಪಾಯದಿಂದ ಬಚಾವಾಗಿದ್ದಾರೆ. ವಾರಾಣಸಿಯ ಪೊಲೀಸ್ ಅಧಿಕಾರಿಯ ಆಫೀಸ್ ಎದುರು ವಿಷಯ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಯುವತಿ ತನ್ನ ಮೇಲಾದ ಸಾಮೂಹಿಕ ಅತ್ಯಾಚಾರದ ಆರೋಪಿಗಳಿಗೆ ಶಿಕ್ಷೆ ಆಗಬೇಕೆಂದು ಹಲವು ಬಾರಿ ಪೊಲೀಸ್ ಠಾಣೆಗೆ […]

ಆಕಸ್ಮಿಕ ಬೆಂಕಿ : ಕರಕಲಾದ ವಾಹನ

Friday, November 8th, 2019
virajpete

ಮಡಿಕೇರಿ : ವಿವಾಹ ಸಮಾರಂಭಕ್ಕೆ ಆಗಮಿಸುತ್ತಿದ್ದ ವಾಹನದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು, ಸಂಪೂರ್ಣ ವಾಹನವೇ ಕರಕಲಾದ ಘಟನೆ ನಗರದ ಹೊರವಲಯದಲ್ಲಿ ನಡೆದಿದೆ. ವೀರಾಜಪೇಟೆ ತಾಲ್ಲೂಕಿನ ಕಂಡಂಗಾಲ ಗ್ರಾಮದವರಾದ ನಂಬುಡುಮಾಡ ಮನು ಅವರು ಮೈಸೂರಿನಲ್ಲಿ ನೆಲೆಸಿದ್ದು, ಇವರು ಸಂಬಂಧಿಕರ ಮದುವೆಗೆಂದು ತಮ್ಮ ಸ್ವಗ್ರಾಮಕ್ಕೆ ಆಗಮಿಸಿದ್ದರು. ಇವರು ನಿನ್ನೆ ಸಂಜೆ ಕಂಡಂಗಾಲದಿಂದ ವೀರಾಜಪೇಟೆಯಲ್ಲಿ ಆಯೋಜಿತ ಮದುವೆಗೆ ಆಗಮಿಸುತಿದ್ದ ವೇಳೆ ಕಂಡಂಗಾಲ – ಬಿ.ಶೆಟ್ಟಿಗೇರಿ ಮುಖ್ಯ ರಸ್ತೆ ಬಳಿ ವಾಹನದಲ್ಲಿ ಹೊಗೆ ಕಾಣಿಸಿಕೊಂಡಿದೆ. ತಕ್ಷಣವೆ ಮನು ಅವರು ವಾಹನದಿಂದಿಳಿದಿದ್ದಾರೆ. ಕ್ಷಣ ಮಾತ್ರದಲ್ಲಿ […]