ತಾಯಿ-ಮಗಳನ್ನು ಒಳಗೆ ಕರೆದುಕೊಂಡು ಹೋಗಿ ಸಮಸ್ಯೆ ಕೇಳಿದ್ದೇ ತಪ್ಪಾಯಿತು : ಯಡಿಯೂರಪ್ಪ

Friday, March 15th, 2024
yedyurappa

ಬೆಂಗಳೂರು : ಮಾಜಿ ಸಿಎಂ ಯಡಿಯೂರಪ್ಪ ವಿರುದ್ದ ಪೋಕ್ಸೋ ಕಾಯ್ದೆ ದಾಖಲಾದ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿದ್ದಾರೆ. ಒಂದು-ಒಂದೂವರೆ ತಿಂಗಳ ಹಿಂದೆ ಮಹಿಳೆಯೊಬ್ಬರು ಕಣ್ಣೀರು ಹಾಕುತ್ತಿದ್ದರು ಎಂದು ಒಳಗೆ ಕರೆದುಕೊಂಡು ಹೋಗಿ ಏನಮ್ಮಾ ಸಮಸ್ಯೆ ಎಂಂದು ತಾಯಿ-ಮಗಳು ಇಬ್ಬರನ್ನೂ ಕೇಳಿದೆ. ನಮಗೆ ತುಂಬಾ ಅನ್ಯಾಯ ಆಗಿದೆ ಎಂದು ಹೇಳಿದ್ರು. ಅಮ್ಮ-ಮಗಳ ಕತೆ ಕೇಳಿ ನಾನು ಪೊಲೀಸ್ ಕಮಿಷನರ್‌ ದಯಾನಂದ್‌ ಗೆ ಫೋನ್ ಮಾಡಿ ಮಾತನಾಡಿ. ಇವರಿಗೆ ಅನ್ಯಾಯ ಆಗಿದೆಯಂತೆ ನ್ಯಾಯ ಒದಗಿಸಿಕೊಡಿ ಎಂದು ತಾಯಿ-ಮಗಳು ಇಬ್ಬರನ್ನೂ ಕಳುಹಿಸಿಕೊಟ್ಟಿದ್ದೆ. ಅದಾದ […]

ಅಂಗಡಿಯೊಳಗೆ ಕರೆದು ಬಾಲಕಿ ಅತ್ಯಾಚಾರ, ಮಾಲೀಕನ ಪುತ್ರನ ಬಂಧನ

Sunday, October 10th, 2021
Konaje Rape

ಮಂಗಳೂರು  : ಅಂಗಡಿಗೆ ಖರೀದಿಗೆ ಬಂದಿದ್ದ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅತ್ಯಾಚಾರ  ಮಾಡಿದ ಆರೋಪದಲ್ಲಿ ಕೊಣಾಜೆ ಪೊಲೀಸರು ಅಂಗಡಿ ಮಾಲೀಕನ ಪುತ್ರನನ್ನು  ಬಂಧಿಸಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಕೊಣಾಜೆ ಸೂಪರ್ ಸ್ಟೋರ್ಸ್ ಮತ್ತು ಸ್ವೀಟ್ಸ್ ಮಾಲೀಕನ ಪುತ್ರ ಉಸ್ಮಾನ್(35) ಬಂಧಿತ ಆರೋಪಿ. ಭಾನುವಾರ ಸಂಜೆ 13 ವರ್ಷದ ಬಾಲಕಿ ಖರೀದಿಗೆಂದು ಅಂಗಡಿಗೆ ಬಂದಿದ್ದು, ಈ ಸಂದರ್ಭ ಆರೋಪಿ ಆಕೆಯನ್ನು ಪುಸಲಾಯಿಸಿ ಒಳಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದೆ. ಇದರಿಂದ ಬೆದರಿದ ಬಾಲಕಿ ಅಲ್ಲಿಂದ ಓಡಿ […]

10ನೇ ತರಗತಿ ವಿದ್ಯಾರ್ಥಿನಿಯನ್ನು ಅಪಹರಿಸಿ ಇಬ್ಬರಿಂದ ಅತ್ಯಾಚಾರ, ಪ್ರಕರಣ ದಾಖಲು

Friday, October 1st, 2021
Rapist

ಬೆಳ್ತಂಗಡಿ : ಇಬ್ಬರು ಆರೋಪಿಗಳು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿ, ಆಕೆ ಗರ್ಭಧರಿಸಲು ಕಾರಣರಾದ ಆರೋಪದ ಮೇಲೆ ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ. ಬಾಲಕಿ ನೀಡಿದ ದೂರಿನನ್ವಯ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಜೆಸಿಬಿ ಚಾಲಕ ರವೀಂದ್ರ ಹಾಗೂ ಕೊಕ್ರಾಡಿಯ ಯೋಗೀಶ್ ಎಂಬುವರು ಬಂಧಿತ ಆರೋಪಿಗಳಾಗಿದ್ದಾರೆ. ಬೆಳ್ತಂಗಡಿ ತಾಲೂಕಿನ ಗ್ರಾಮವೊಂದರ 10ನೇ ತರಗತಿ ವಿದ್ಯಾರ್ಥಿನಿಯನ್ನು ಇವರಿಬ್ಬರು ಬಲತ್ಕಾರವಾಗಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಬಳಿಕ ಈ ವಿಚಾರವನ್ನು ಯಾರಿಗೂ ತಿಳಿಸದಂತೆ ಬೆದರಿಸಿದ್ದಾರೆ ಎಂದು ದೂರಲಾಗಿದೆ. […]

ಪ್ಯಾಂಟ್‌ ಜಿಪ್ ಜಾರಿಸಿದರೆ ಲೈಂಗಿಕ ದೌರ್ಜನ್ಯವಲ್ಲ: ಬಾಂಬೆ ಹೈಕೋರ್ಟ್

Thursday, January 28th, 2021
posco act

ಮುಂಬೈ: ಐದು ವರ್ಷದ ಬಾಲಕಿಯ ಮೇಲೆ 50 ವರ್ಷದ ವ್ಯಕ್ತಿ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಪೋಕ್ಸೋ ಕಾಯ್ದೆಯಡಿ ಸಲ್ಲಿಸಲಾದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪುಷ್ಪ ಗನೇಡಿವಾಲ ತೀರ್ಪು ನೀಡಿದ್ದು,  ಅಪ್ರಾಪ್ತ ಬಾಲಕಿಯ ಕೈ ಹಿಡಿಯುವುದು ಹಾಗೂ ಪ್ಯಾಂಟ್ ಜಿಪ್‌ ತೆಗೆಯುವುದನ್ನು ಪೋಕ್ಸೋ ಕಾಯ್ದೆಯಡಿ ಲೈಂಗಿಕ ದೌರ್ಜನ್ಯ ಎಂದು ಪರಿಗಣಿಸುವಂತಿಲ್ಲ ಎಂದು ಹೇಳಿದ್ದಾರೆ. ಇತ್ತೀಚಿಗಷ್ಟೇ ಚರ್ಮಕ್ಕೆ ಚರ್ಮ ತಾಗದಿದ್ದರೆ ಲೈಂಗಿಕ ಕಿರುಕುಳವಾಗುವುದಿಲ್ಲ ಎಂದು ವಿವಾದಾತ್ಮಕ ತೀರ್ಪು ನೀಡಿದ್ದ ಬಾಂಬೆ ಹೈಕೋರ್ಟ್ ನ ನಾಗ್ಪುರ್ ಪೀಠ, ಈಗ ಮತ್ತೊಂದು ವಿವಾದಾತ್ಮಕ […]

ಪೋಕ್ಸೋ ಕಾಯ್ದೆಗೆ ಜುಲೈ ನಂತರ ಮತ್ತಷ್ಟು ಬಲ

Monday, May 29th, 2017
kripa Alva

ಮಂಗಳೂರು : ಪೋಕ್ಸೋ ಕಾಯ್ದೆಯನ್ನು ಇನ್ನಷ್ಟು ಬಲಪಡಿಸಿ ಮಕ್ಕಳ ದೌರ್ಜನ್ಯ ಎಸಗುವ ಆರೋಪಿಗಳಿಗೆ ಶಿಕ್ಷೆಯಾಗುವ ನಿಟ್ಟಿನಲ್ಲಿ ಜುಲೈನಲ್ಲಿ ಎಸ್‌ಒಪಿ ಜಾರಿಗೆ ಬರಲಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಡಾ. ಕೃಪಾ ಅಮರ್ ಆಳ್ವ ತಿಳಿಸಿದರು. ಪತ್ರಿಕಾಭವನದಲ್ಲಿ ಸೋಮವಾರ  ಪತ್ರಕರ್ತರ ಜತೆ ಮಾಧ್ಯಮ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪೋಕ್ಸೋ ಕಾಯ್ದೆಗೆ ಸಂಬಂಧಿಸಿ ಪ್ರಕರಣ ನಡೆದ ಎಷ್ಟೋ ಸಮಯದ ಬಳಿಕ ವಿಚಾರಣೆ ನಡೆಯುತ್ತದೆ. ಇದರಿಂದ ದೌರ್ಜನ್ಯದ ಘಟನೆಯನ್ನು ಸಮರ್ಪಕವಾಗಿ ವಿವರಿಸುವುದು ಕಷ್ಟ. ಇದರಿಂದ ಪ್ರಕರಣ […]