ಸತ್ಕರ್ಮಗಳ ಮೂಲಕ ಭಗವಂತನ ಕೃಷೆಗೆ ಪಾತ್ರರಾಗಬೇಕು-ಆನೆಗೊಂದಿ ಶ್ರೀ.
Tuesday, April 12th, 2016ಉಪ್ಪಳ: ಕ್ಷೇತ್ರಗಳಲ್ಲಿ ಭಗವಂತನ ಸಾನ್ನಿಧ್ಯ ನಿರಂತರವಾಗಿರಬೇಕಾದರೆ ನಿಷ್ಠೆಯ ಪೂಜೆ,ಅರ್ಚನೆಗಳು,ವೇದ ಪಾರಾಯಣಗಳು ಸದಾ ನಡೆಯುತ್ತರಬೇಕು.ಶುದ್ದ ಹೃದಯದ ಆರಾಧನೆಗೆ ಭಗವಂತ ಒಲಿದು ಅನುಗ್ರಹಿಸುತ್ತಾನೆಯೆಂದು ಕಟಪಾಡಿ ಆನೆಗೊಂದಿ ಸಂಸ್ಥಾನದ ಶ್ರೀಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ ಆಶೀರ್ವಚನವಿತ್ತರು. ಐಲ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯುತ್ತಿರುವ ಅಷ್ಟಬಂಧ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗವಾಗಿ ಭಾನುವಾರ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ದಿವ್ಯ ಉಪಸ್ಥಿತರಿದ್ದು ಮಾತನಾಡುತ್ತಿದ್ದರು. ಜೀವನದ ಸುಖವೆಂದರೆ ತ್ಯಾಗ ಮತ್ತು ಕರ್ಮಗಳ ಅನುಸಂಧಾನವಾಗಿದೆ.ಐಶಾರಾಮಿ ಬೇಕುಗಳನ್ನು ತ್ಯಜಿಸಿ ಸತ್ಕರ್ಮಗಳ ಮೂಲಕ ಭಗವಂತನ ಕೃಪೆಗೆ ಪಾತ್ರರಾಗುವುದು ನೈಜ ಸುಖವೆಂದು ನಾವು […]