ಸುಳ್ಯ ಕೆವಿಜಿ ಪಾಲಿಟೆಕ್ನಿಕ್‌ ಪ್ರಾಂಶುಪಾಲ ಪ್ರೊ. ಎ.ಎಸ್‌ ರಾಮಕೃಷ್ಣ ಅವರ ಕೊಲೆ ಪ್ರಕರಣದಲ್ಲಿ, 6 ಮಂದಿ ದೋಷಿ ಎಂದು ಕೋರ್ಟ್ ತೀರ್ಪು

Thursday, September 28th, 2023
Ramakrishna-R

ಸುಳ್ಯ : ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಸುಳ್ಯ ಕೆವಿಜಿ ಪಾಲಿಟೆಕ್ನಿಕ್‌ ಪ್ರಾಂಶುಪಾಲರಾಗಿದ್ದ ಪ್ರೊ. ಎ.ಎಸ್‌ ರಾಮಕೃಷ್ಣ ಅವರ ಕೊಲೆ ಪ್ರಕರಣಕ್ಕೆ ಮಹತ್ವದ ತಿರುವು ದೊರೆತಿದೆ. ಪ್ರೊ. ಎ. ಎಸ್. ರಾಮಕೃಷ್ಣ ಕೊಲೆ ಪ್ರಕರಣದಲ್ಲಿ ಆರು ಮಂದಿ ಆರೋಪಿಗಳನ್ನು ಖುಲಾಸೆಗೊಳಿಸಿ ಅಧೀನ ನ್ಯಾಯಾಲಯ ನೀಡಿದ್ದ ತೀರ್ಪು ರದ್ದುಗೊಳಿಸಿರುವ ಹೈಕೋರ್ಟ್ ಅವರನ್ನು ದೋಷಿಗಳೆಂದು ತೀರ್ಪು ನೀಡಿದೆ. ಪ್ರಕರಣದಲ್ಲಿ ರೇಣುಕಾ ಪ್ರಸಾದ್‌ ಸೇರಿದಂತೆ ಏಳು ಮಂದಿ ಆರೋಪಿಗಳನ್ನು ಖುಲಾಸೆಗೊಳಿಸಿ ಪುತ್ತೂರಿನ 5ನೇ ಹೆಚ್ಚುವರಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯ ಈ […]

ಬಸ್ಸು ಕಾರು ಅಪಘಾತ – ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಮೃತ್ಯು

Saturday, December 28th, 2019
Bus-car accident

ಮಂಗಳೂರು :  ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆತ್ತಿಕಲ್ ನಲ್ಲಿ ಮಂಗಳೂರಿನಿಂದ ಮೂಡಬಿದಿರೆಯ ಕಡೆ  ಚಲಿಸುತ್ತಿದ್ದ ಬಸ್ಸು ಚಾಲಕ ನಿಯಂತ್ರಣ ತಪ್ಪಿಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಡಿ.28 ರ ಶನಿವಾರ ಸಂಜೆ ನಡೆದಿದೆ. ಅಪಘಾತದ ಪರಿಣಾಮ ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದು ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಮೃತರನ್ನು ಡಾ.ವೆರ್ನಾನ್ ಡಿ ಸಿಲ್ವಾ, ಪ್ರಾಂಶುಪಾಲರು, ಎಂಎಲ್ಟಿ (ಮೆಡಿಕಲ್ ಲ್ಯಾಬ್ ಟೆಕ್ನಾಲಜಿ) ಆಳ್ವಾಸ್  ಕಾಲೇಜು, ಮೂಡಬಿದ್ರಿ ಎಂದು ಗುರುತಿಸಲಾಗಿದೆ. ಶ್ರೀರಾಮ್ ಟ್ರಾವೆಲ್ಸ್ ಗೆ ಸೇರಿದ ಬಸ್ ಇದಾಗಿದ್ದು ಮಂಗಳೂರಿನಿಂದ […]

ಪ್ರಾಂಶುಪಾಲರ ಮೇಲೆ ಹಲ್ಲೆ ನಡೆಸಿದ ವಿದ್ಯಾರ್ಥಿ ಮೊಹಮ್ಮದ್ ಶಹನಾವಾಜ್ ಬಂಧನ

Tuesday, October 25th, 2016
Mohammed-shahnawaz

ಮಂಗಳೂರು: ಜಿಲ್ಲೆಯಾದ್ಯಂತ ವ್ಯಾಪಕ ಖಂಡನೆಗೆ ಕಾರಣವಾದ ಪ್ರಾಂಶುಪಾಲರ ಮೇಲೆ ಹಲ್ಲೆ ನಡೆಸಿದ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ. ಪಾಂಡೇಶ್ವರ ನಿವಾಸಿ ಮೊಹಮ್ಮದ್ ಶಹನವಾಜ್ (20) ಬಂಧಿತ ಆರೋಪಿ. ಸಂಜೆ ಪಂಪ್‌ವೆಲ್‌ ಸರ್ಕಲ್ ಬಳಿ ಈತನನ್ನು ಬಂಧಿಸಲಾಗಿದೆ. ಮಿಲಾಗ್ರಿಸ್ ಕಾಲೇಜಿನ ಮೂರನೇ ವರ್ಷದ ಬಿಬಿಎಂ ವಿದ್ಯಾರ್ಥಿಯಾದ ಮೊಹಮ್ಮದ್ ಶಹನಾವಾಜ್, ಪ್ರಾಂಶುಪಾಲ ಫಾ.ಮೈಕಲ್ ಸಾಂತುಮಾಯರ್ ಮೇಲೆ ಅ. 20ರಂದು ಹಲ್ಲೆ ನಡೆಸಿ ಪರಾರಿಯಾಗಿದ್ದ. ತರಗತಿಗೆ ಸರಿಯಾಗಿ ಹಾಜರಾಗದ ಮೊಹಮ್ಮದ್‌ಗೆ ಸಮರ್ಪಕ ಹಾಜರಾತಿ ಇಲ್ಲದೆ ಪರೀಕ್ಷೆ ಬರೆಯಲು ಅವಕಾಶ ನೀಡುವುದಿಲ್ಲ ಎಂದು ಪ್ರಾಂಶುಪಾಲರು […]

ಪ್ರಾಂಶುಪಾಲರ ಮೇಲೆ ಹಲ್ಲೆ: ವಿದ್ಯಾರ್ಥಿಯನ್ನು ಬಂಧಿಸುವಂತೆ ಒತ್ತಾಯಿಸಿ ಪೋಷಕರು ಹಾಗೂ ಸಿಬಂದಿ ವರ್ಗದಿಂದ ಪ್ರತಿಭಟನೆ

Monday, October 24th, 2016
Milagress-collage

ಮಂಗಳೂರು: ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲರ ಮೇಲೆ ಹಲ್ಲೆ ನಡೆಸಿದ ವಿದ್ಯಾರ್ಥಿಯನ್ನು ಬಂಧಿಸುವಂತೆ ಒತ್ತಾಯಿಸಿ ಪೋಷಕರು ಹಾಗೂ ಸಿಬಂದಿ ವರ್ಗ ಕಾಲೇಜು ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ದೀಪಕ್, ಪ್ರಾಂಶುಪಾಲರ ಮೇಲೆ ಹಲ್ಲೆ ನಡೆಸುವ ಮೂಲಕ ವಿದ್ಯಾರ್ಥಿ ಕಾಲೇಜಿನಲ್ಲಿ ಭಯೋತ್ಪಾದನೆಯನ್ನು ಸೃಷ್ಟಿಸುತ್ತಿದ್ದಾನೆ. ಮೂರು ದಿನಗಳಿಂದ ಈತ ತಲೆಮರೆಸಿಕೊಂಡಿದ್ದಾನೆ. ಪೊಲೀಸರಿಗೆ ಈವರೆಗೂ ಈತನನ್ನು ಹಿಡಿಯಲು ಆಗಿಲ್ಲ. ಆರೋಪಿಯ ರಕ್ಷಣೆಗೆ ಯಾರೋ ನಿಂತಿದ್ದಾರೆ. ಇದನ್ನು ತಕ್ಷಣ ಪತ್ತೆ ಹಚ್ಚಬೇಕು. ಕಾಲೇಜಿನಲ್ಲಿ ನಡೆದ ಈ ಘಟನೆಯಿಂದ […]

ದೈಹಿಕ ಶ್ರಮ ಮಹತ್ವದ್ದು, ಅದನ್ನು ಗೌರವಿಸಬೇಕು : ಮೋಸೆಸ್

Friday, March 6th, 2015
Mangalore University college

ಮಂಗಳೂರು : ಶಿಕ್ಷಣದಲ್ಲಿ ಸಾಮಾಜಿಕ ಉಪಯೋಗಿ ಉತ್ಪಾದನಾ ಕಾರ‍್ಯ (ಕಾರ‍್ಯಾನುಭವ) ದ ಮಹತ್ವವನ್ನು ಅರಿತು ವಿದ್ಯಾರ್ಥಿಗಳನ್ನು ಅದರಲ್ಲಿ ತೊಡಗಿಸಬೇಕು. ತನ್ಮೂಲಕ ಅವರ ಸರ್ವಾಂಗೀಣ ಅಭಿವೃದ್ಧಿಗೆ ಪೂರಕ ವಾತಾವರಣವನ್ನು ಶಾಲೆಯಲ್ಲಿ ಸೃಷ್ಟಿಸಬೇಕು. ಚಿತ್ರಕಲೆ, ಬಣ್ಣದ ಕಾಗದಗಳಲ್ಲಿ ರಚನೆ, ಕಸದಿಂದ ರಸ ಇವುಗಳು ವಿದ್ಯಾರ್ಥಿಗಳ ಬಿಡುವಿನ ವೇಳೆಯ ಸದಪಯೋಗಕ್ಕೆ ಪೂರಕವಾಗಿ ಪರಿಣಮಿಸುತ್ತವೆ ಎಂದು ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಸೇವಾ ಪೂರ್ವ ತರಬೇತಿ ವಿಭಾಗದ ಮುಖ್ಯಸ್ಥರಾದ ಶ್ರೀ ಮೋಸೆಸ್ ಜಯಶೇಖರ್ ನುಡಿದರು ಅವರು ಕಾಲೇಜಿನ ಸಂಭ್ರಮ ಕಾರ‍್ಯಕ್ರಮದ ಆಧ್ಯಕ್ಷತೆಯನ್ನು ವಹಿಸಿ […]