ಸುಳ್ಯದಲ್ಲಿ ಪ್ರಾಕೃತಿಕ ವಿಕೋಪ ಪರಿಹಾರ ಯೋಜನೆಯಡಿ ಫಲಾನುಭವಿಗಳಿಗೆ ಚೆಕ್ ವಿತರಣೆ

Thursday, July 8th, 2021
S Angara

ಸುಳ್ಯ  : ಪ್ರಾಕೃತಿಕ ವಿಕೋಪ ಪರಿಹಾರ ಯೋಜನೆ ಮತ್ತು ರಾಷ್ಟೀಯ ಕುಟುಂಬ ನೆರವು ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಚೆಕ್ ವಿತರಣೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆಯಿತು. ಸಚಿವ ಎಸ್.ಅಂಗಾರ ಫಲಾನುಭವಿಗಳಿಗೆ ಚೆಕ್ ವಿತರಿಸಿ ಮಾತನಾಡಿ ಕೋವಿಡ್ ಕಾಲದಲ್ಲಿ ಜನರು ಎಚ್ಚರಿಕೆಯಿಂದ ಇರಬೇಕಾಗಿದೆ. ಕೊರೋನಾ ನಿಯಮಗಳನ್ನು ಪಾಲನೆ ಮಾಡುವ ಮೂಲಕ ಕೋವಿಡ್ ಮುಕ್ತ ತಾಲೂಕುವನ್ನಾಗಿ ಮಾಡಬೇಕು. ಗ್ರಾಮ ಪಂಚಾಯಿತಿಗಳ ಮೂಲಕ ಲಸಿಕೆ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು. ಸಭೆಯಲ್ಲಿ ಹರೀಶ್ ಕಂಜಿಪಿಲಿ, ವೆಂಕಟ್ ವಳಲಬೆ, ತಹಸೀಲ್ದಾರ್ […]

ಪ್ರಾಕೃತಿಕ ವಿಕೋಪ : ಸಚಿವ ರೈ ಯವರಿಮದ ಫಲಾನುಭವಿಗಳಿಗೆ ಪರಿಹಾರ ಚೆಕ್ ವಿತರಣೆ

Saturday, June 27th, 2015
Rai Cheque

ಬಂಟ್ವಾಳ : ಮುಖ್ಯ ಮಂತ್ರಿಗಳ ಪರಿಹಾರ ನಿಧಿಯಿಂದ ಬಂಟ್ವಾಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿಟ್ಲ ಹೋಬಳಿಗೆ ಸೇರಿದ 11 ಗ್ರಾಮಗಳ ವಿವಿಧ ಫಲಾನುಭವಿಗಳಿಗೆ ಪರಿಹಾರ ಧನದ ಚೆಕ್ ಅನ್ನು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಬಿ.ಸಿ.ರೋಡ್ ನ ಕಚೇರಿಯಲ್ಲಿ ಶನಿವಾರ ವಿತರಿಸಿದರು. ಪೆರಾಜೆ ಗ್ರಾಮದಲ್ಲಿ ಭಾರೀ ಮಳೆಗೆ ಕೊಚ್ಚಿ ಹೋಗಿ ಮೃತಪಟ್ಟ ಆನಂದ ಗೌಡ ರ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಮಂಜೂರಾದ 1.5 ಲಕ್ಷ ಸೇರಿದಂತೆ ಪ್ರಾಕೃತಿಕ ವಿಕೋಪದ ಹಾನಿಗೆ ಸಂಭವಿಸಿ ಪೆರಾಜೆ, […]

ವಿಶ್ವ ಪರಿಸರ ದಿನಾಚರಣೆ : ಮಾನವ ಪರಿಸರದ ಹೊರತಾಗಿ ಬಾಳಲಾರ

Tuesday, June 9th, 2015
Parisara

ಧರ್ಮಸ್ಥಳ : ಇಲ್ಲಿನ ಶ್ರೀ.ಧ.ಮಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರತಿವರ್ಷದಂತೆ ಜೂನ್5 ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ದಿನದ ಮಹತ್ವವನ್ನುವಿದ್ಯಾರ್ಥಿಗಳಿಗೆ ಅರುಹಿದ ಸಹಶಿಕ್ಷಕಿ ಕುಮಾರಿ ರಮ್ಯಾಎನ್. ಪ್ರಾಕೃತಿಕ ಅಸಮತೋಲನ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಪರಿಸರದ ಬಗ್ಗೆ ಕಾಳಜಿ ವಹಿಸಬೇಕಾದುದು ಪ್ರತಿಯೊಬ್ಬ ನಾಗರಿಕನ ಪ್ರಮುಖಕರ್ತವ್ಯ.ಪರಿಸರ ಮಾನವನ ಹೊರತಾಗಿ ಬದುಕ ಬಲ್ಲುದು, ಆದರೆ ಮಾನವ ಪರಿಸರದ ಹೊರತಾಗಿ ಬಾಳಲಾರಎಂಬ ಪ್ರಮುಖ ವಿಚಾರವನ್ನು ತಿಳಿಯಪಡಿಸಿದರು. ಆದ್ದರಿಂದಭಗವಂತನಿಂದ ಸೃಷ್ಟಿಸಲ್ಪಟ್ಟ ಸ್ವಚ್ಛ, ಸುಂದರ ಹಾಗೂ ಸಮತೋಲಿತ ಪ್ರಾಕೃತಿಕ ಪರಿಸರವನ್ನು ನಾವೂ ಅನುಭವಿಸಿ, ಸಂರಕ್ಷಿಸಿ […]

ಮುಂಗಾರು ಮಳೆಯಿಂದ ಉಂಟಾಗಬಹುದಾದ ಪ್ರಾಕೃತಿಕ ವಿಕೋಪಕ್ಕೆ ಸೂಕ್ತ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸೂಚನೆ

Thursday, May 23rd, 2013
N Prakash

ಮಂಗಳೂರು : ಮುಂಗಾರು ಶೀಘ್ರವೇ ಜಿಲ್ಲೆಗೆ ಕಾಲಿಡಲಿದ್ದು, ಅದಕ್ಕೂ ಮುನ್ನ ಪಾಲಿಕೆ ವ್ಯಾಪ್ತಿಯಲ್ಲಿನ ಚರಂಡಿ ಮತ್ತು ಕಾಲುವೆಗಳನ್ನು ಶುಚಿಗೊಳಿಸಿ ಕೃತಕ ನೆರೆ ಉಂಟಾಗದಂತೆ ಎಚ್ಚರವಹಿಸಿ ಎಂದು ಜಿಲ್ಲಾಧಿಕಾರಿ ಎನ್. ಪ್ರಕಾಶ್ ಹೇಳಿದರು. ಅವರು ಬುಧವಾರ ತಮ್ಮ ಕಚೇರಿಯಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಹಾಗು ತಾಲೂಕು ಮಟ್ಟದ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದರು. ಪಾಲಿಕೆ ಮತ್ತು ತಾಲೂಕು ವ್ಯಾಪ್ತಿಯಲ್ಲಿ, ಮುಂಬರುವ ಮುಂಗಾರು ಮಳೆಯಿಂದ ಸಂಭವಿಸಬಹುದಾದ ಪ್ರಾಕೃತಿಕ ವಿಕೋಪದ ಬಗ್ಗೆ ಮುಂಜಾಗ್ರತೆ ವಹಿಸುವಂತೆ ತಿಳಿಸಿದ ಅವರು ಮೇ 25 ರೊಳಗೆ ಸಹಾಯಕ ಕಮೀಷನರ್ […]