ಸಮುದ್ರಕ್ಕೆ ಹಾರಿದ ಪ್ರಿಯತಮೆಯನ್ನು ರಕ್ಷಿಸಲು ಹೋಗಿ ಪ್ರಾಣಕಳಕೊಂಡ ಯುವಕ

Saturday, January 29th, 2022
loyd

ಉಳ್ಳಾಲ : ಸಮುದ್ರಕ್ಕೆ ಹಾರಿದ ಪ್ರಿಯತಮೆಯನ್ನು ರಕ್ಷಿಸಲು ಮುಂದಾದ ಆಕೆಯ ಪ್ರಿಯಕರ ಸಮುದ್ರದಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ಸೋಮೇಶ್ವರ ಕಡಲ ಕಿನಾರೆಯಲ್ಲಿ‌ ಶುಕ್ರವಾರ ಸಂಜೆ ವರದಿಯಾಗಿದೆ. ಈ ನಡುವೆ ಯುವತಿಯನ್ನು ಸ್ಥಳೀಯ ಜೀವರಕ್ಷಕ ಈಜುಗಾರರು ರಕ್ಷಿಸಿದ್ದಾರೆ. ಮೃತರನ್ನು ಮುನ್ನೂರು ಗ್ರಾಮದ ಸೋಮನಾಥ ಉಳಿಯ ನಿವಾಸಿ ಲಾಯ್ಡ್ ಡಿಸೋಜ(28) ಯಾನೆ ಲಾಯ್ ಎಂದು ಗುರುತಿಸಲಾಗಿದೆ. ಕೋಟೆಕಾರು ಪಾನೀರು ನಿವಾಸಿ ಅಶ್ವಿತ ಫೆರಾವೊ(22)ಆತ್ಮ ಹತ್ಯೆಗೆ ಯತ್ನಿಸಿ ಪಾರಾದ ಯುವತಿ. ಅಶ್ವಿತಾ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಲಾಯ್ಡ್ ಡಿಸೋಜ ಮತ್ತು ಅಶ್ವಿತಾ […]

ಪ್ರಿಯಕರನ ಜತೆ ಓಡಿ ಹೋದ ಮಾಜಿ ಕಾರ್ಪೋರೇಟರ್ ಮಗಳು, ಹುಡುಕಿ ಸುಸ್ತಾದ ಪೊಲೀಸರು

Saturday, July 3rd, 2021
monal

ಹುಬ್ಬಳ್ಳಿ: ಪ್ರಿಯಕರನ ಜತೆ ಓಡಿಹೋಗಿದ್ದ ಹುಬ್ಬಳ್ಳಿಯ ಮಾಜಿ ಕಾರ್ಪೋರೇಟರ್ ಪುತ್ರಿಯನ್ನು ಪತ್ತೆಹಚ್ಚುವಲ್ಲಿ ಪೊಲೀಸರು ಕೊನೆಗೂ ಯಶಸ್ವಿ ಆಗಿದ್ದಾರೆ. ಇಬ್ಬರನ್ನು ಹುಡುಕಿ ಠಾಣೆಗೆ ವಾಪಸ್ಸು ಕರೆತಂದಿದ್ದಾರೆ. ಮಾಜಿ ಕಾರ್ಪೋರೇಟರ್ ರಾಜಣ್ಣ ಕೊರವಿ ಅವರ ಪುತ್ರಿ ಮೊನಾಲ್, ಪ್ರಿಯಕರ ರಾಹುಲ್ ಜತೆ ಓಡಿಹೋಗಿದ್ದಳು. ಪ್ರೇಮಿಗಳಿಗಾಗಿ ಪೊಲೀಸರು ಮೂರ್ನಾಲ್ಕು ಜಿಲ್ಲೆಗಳಲ್ಲಿ ತಲಾಶ್ ನಡೆಸಿದ್ದರು. ಕೊನೆಗೆ ಗದಗ ಜಿಲ್ಲೆಯಲ್ಲಿ ಪ್ರೇಮಿಗಳನ್ನು ಪತ್ತೆ ಹಚ್ಚಿದ್ದಾರೆ. ಮೋನಾಲ್ ಹಾಗು ರಾಹುಲ್ ಪರಸ್ಪರ ಐದು ವರ್ಷದಿಂದ ಪ್ರೀತಿಸುತ್ತಿದ್ದರು. ಮಗಳ ಪ್ರೇಮಕ್ಕೆ ಮಾಜಿ ಕಾರ್ಪೋರೇಟರ್ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಕಾರ್ಪೋರೇಟರ್  ಮಗಳನ್ನು […]

ಮಾಜಿ ಪ್ರಿಯಕರ ನೀಡುತ್ತಿದ್ದ ಕಿರುಕುಳಕ್ಕೆ ನೊಂದು ಯುವತಿ ಆತ್ಮಹತ್ಯೆ

Thursday, October 29th, 2020
Madhusree

ಪುತ್ತೂರು : ಮಾಜಿ ಪ್ರಿಯಕರ ನೀಡುತ್ತಿದ್ದ ಕಿರುಕುಳ ತಾಳಲಾರದೆ ಖಾಸಗಿ ಆಸ್ಪತ್ರೆಯಲ್ಲಿ ಉದ್ಯೋಗಿಯಾಗಿರುವ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ಪುತ್ತೂರಿನ ಸಂಪ್ಯದಲ್ಲಿ ನಡೆದಿದೆ. ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಸ್ವಾಗತಕಾರಿಣಿಯಾಗಿದ್ದ ಮಧುಶ್ರೀ(26) ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಅವಿವಾಹಿತ ಯುವತಿ. ನಿನ್ನೆ ಮಧ್ಯಾಹ್ನ ತನ್ನ ಅಜ್ಜಿ ಮನೆಯ ಪಕ್ಕದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಾಜಿ ಪ್ರಿಯಕರ ನೀಡುತ್ತಿದ್ದ ಮಾನಸಿಕ ಕಿರುಕುಳ ಹಾಗೂ ಜೀವ ಬೆದರಿಕೆಯಿಂದ ಮನನೊಂದು ಅತ್ಮಹತ್ಯೆ ಮಾಡಿಕೊಂಡಿರುವುದಾಗಿ ಆಕೆ ಡೈರಿಯಲ್ಲಿ ಬರೆದುಕೊಂಡಿರುವ ಅಧಾರದಲ್ಲಿ ಹಾಗೂ […]

ಡೆತ್ ನೋಟಲ್ಲಿ ಪ್ರಿಯಕರನ ಹೆಸರು ಬರೆದಿಟ್ಟು ವಿಷ ಸೇವಿಸಿದ ಯುವತಿ

Thursday, July 23rd, 2020
uma

ತೆಲಂಗಾಣ : ಕಾಲೇಜಿನಲ್ಲಿ ಓದುತ್ತಿರುವ ಸಂದರ್ಭದಲ್ಲಿ ಸಹಪಾಠಿಯಾಗಿದ್ದವನನ್ನು ಪ್ರೀತಿಸಿ ನಂತರ ಮದುವೆ ಮಾಡಿಕೊ ಎಂದಿದಕ್ಕೆ ಯುವತಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತೆಲಂಗಾಣದಲ್ಲಿ ನಡೆದಿದೆ. ತೆಲಂಗಾಣದ ಪೋಥರಂ ಗ್ರಾಮದ 19 ವರ್ಷದ ಯುವತಿ ಉಮಾ ಎಂಬ ಹುಡುಗಿ ಕಾಲೇಜಿನಲ್ಲಿ ಓದುತ್ತಿರುವ ಸಂದರ್ಭದಲ್ಲಿ ಸಹಪಾಠಿಯಾಗಿದ್ದ ರಂಜಿತ್ ಎಂಬ ಯುವಕನ ಪ್ರೇಮಕ್ಕೆ ಬಿದ್ದಿದ್ದಾಳೆ. ಆತನೂ ಇವಳನ್ನು ಪ್ರೀತಿಸುವುದಾಗಿ ಹೇಳಿದ್ದು, ಅದನ್ನು ಉಮಾ ನಂಬಿದ್ದಾಳೆ. ಈ ಬಗ್ಗೆ ಅರಿವು ಇಲ್ಲದಿದ್ದ ಉಮಾ ಪಾಲಕರು ಮಗಳಿಗೆ ಹುಡುಗನನ್ನು ನೋಡಲು ಶುರು ಮಾಡಿದ್ದಾರೆ. ಮನೆಯವರಿಗೆ […]

ಗೆಳತಿಯ ಜೊತೆ ತೆರಳಿ ನಾಪತ್ತೆಯಾಗಿದ್ದ ಯುವತಿ ಪ್ರಿಯಕರನೊಂದಿಗೆ ಪತ್ತೆ

Monday, June 15th, 2020
kiran

ವಿಟ್ಲ : ಇತ್ತೀಚೆಗೆ ಪೆರುವಾಯಿ ಗ್ರಾಮದ ಕಂಬಕೋಡಿ ಮನೆಯಿಂದ ತನ್ನ ಸ್ನೇಹಿತೆಯೊಂದಿಗೆ ತೆರಳಿ ನಾಪತ್ತೆಯಾಗಿದ್ದ ಯುವತಿ  ಪ್ರಿಯಕರನ ಜತೆ ಬೆಂಗಳೂರಿನಲ್ಲಿ ಮದುವೆಯಾಗಿದ್ದಾಳೆ ಎಂಬ ಮಾಹಿತಿ ವಿಟ್ಲ ಪೊಲೀಸರಿಗೆ ಲಭ್ಯವಾಗಿದೆ. ಪೆರುವಾಯಿ ಗ್ರಾಮದ ಕಂಬಕೋಡಿ ನಿವಾಸಿಯಾಗಿರುವ ಯುವತಿಯನ್ನು ಮೇ 29ರಂದು ಆಕೆಯ ಸ್ನೇಹಿತೆ ಕರೆದುಕೊಂಡು ತೆರಳಿದ್ದಳು. ಬಳಿಕ ಆಕೆ ನಾಪತ್ತೆಯಾಗಿದ್ದಳು. ಈ ಬಗ್ಗೆ ಆಕೆಯ ತಂದೆ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ವಿಟ್ಲ ಪೊಲೀಸರು ನಾಪತ್ತೆ ಪ್ರಕರಣದ ಬೆನ್ನು ಬಿದ್ದಿದ್ದರು. ನಿರಂತರ ಸೋಧ ನಡೆಸಿದ ಬಳಿಕ ಇದೀಗ […]