ಐಷಾರಾಮಿ ಕಳ್ಳರು : ಕಾರಲ್ಲಿ ತೆರಳಿ ಕಳವು ನಡೆಸುವ ಮೂವರ ಬಂಧನ

Sunday, July 3rd, 2016
thieves

ಬದಿಯಡ್ಕ: ರಾತ್ರಿ ಹೊತ್ತು ಕಾರಲ್ಲಿ ಸಂಚರಿಸಿ ಅಡಿಕೆ ಸಹಿತ ಕೃಷಿ ಉತ್ಪನ್ನಗಳನ್ನು ಕಳವು ನಡೆಸುವ ತಂಡದ ಮೂವರು ಐಷಾರಾಮಿ ಕಳ್ಳರನ್ನು ಬದಿಯಡ್ಕ ಪೋಲೀಸರು ಬಂಧಿಸಿದ್ದಾರೆ. ನೆಲ್ಲಿಕಟ್ಟೆ ಮೀನಾಡಿಪಳ್ಳದ ಅಬ್ದುಲ್ ರಹಿಮಾನ್(58),ಮಂಗಳೂರು ಜೋಕಟ್ಟೆಯ ಉಮರುಲ್ ಫಾರೂಖ್(44),ಉಳ್ಳಾಲ ಬಿ.ಸಿ.ರೋಡಿನ ಮೊಹಮ್ಮದ್ ಹನೀಫಾ(45)ಎಂಬವರನ್ನು ಬಂಧಿಸಲಾಗಿದೆ. ಬದಿಯಡ್ಕ ಬಾರಡ್ಕ ನಿವಾಸಿ, ಬದಿಯಡ್ಕದ ವ್ಯಾಪಾರಿ ಯೂಸುಫ್ ರವರ ಮನೆ ಬಳಿಯ ಅಡಿಕೆ ಕಳವು ನಡೆಸಲೆತ್ನಿಸಿದ ಪ್ರಕರಣದಲ್ಲಿ ಈ ಮೂವರನ್ನು ಬಂಧಿಸಲಾಗಿದೆ.ಜೂ.23 ರಂದು ರಾತ್ರಿ ಇನ್ನೋವಾ ಕಾರಲ್ಲಿ ಬಂದಿದ್ದ ಈ ಮೂವರ ತಂಡ ಬಾರಡ್ಕ ತಲಪಿ […]

ಕುತ್ಯಾಳ ಸಂತಾನ ಶ್ರೀಗೋಪಾಲಕೃಷ್ಣ ಕ್ಷೇತ್ರದಲ್ಲಿ ಪುತ್ರಕಾಮೇಷ್ಠಿ ಯಾಗ, ಧನ್ವಂತರಿ ಹವನ

Saturday, December 26th, 2015
Kutyala

ಕಾಸರಗೋಡು: ಭಾರತೀಯ ಸಂಸ್ಕೃತಿ,ಪರಂಪರೆಯ ಆಚರಣೆ ಹಾಗೂ ನಂಬಿಕೆಗಳು ತಾತ್ವಿಕವಾಗಿ ವೈಜ್ಞಾನಿಕ ಹಿನ್ನೆಲೆಯ ಮಹತ್ವ ಹೊಂದಿರುವುದರಿಂದ ಪ್ರಕೃತಿಗೆ ಹತ್ತಿರವಾಗಿದೆ.ಆದರೆ ಇಂದಿನ ಪರಿಸ್ಥಿತಿಯಲ್ಲಿ ಕ್ಷಣಿಕ ವಿಷಯಾಸಕ್ತತೆಯ ಮೋಹಕ್ಕೊಳಗಾಗಿ ನಮ್ಮ ಪರಂಪರೆಯ ತತ್ವ,ನಿಷ್ಠೆ,ನಂಬಿಕೆಗಳಿಗೆದುರಾಗಿ ವರ್ತಿಸುವ ಕಾರಣ ಅಸಮತೋಲನಗಳು,ದುಖಃ ನಮ್ಮನ್ನು ಹಿಂಬಾಲಿಸುತ್ತಿರುವುದರ ಬಗ್ಗೆ ಜಾಗೃತರಾಗಬೇಕಾಗ ಅಗತ್ಯವಿದೆಯೆಂದು ಹಿಂದೂ ಐಕ್ಯವೇದಿಯ ರಾಜ್ಯ ಉಪಾಧ್ಯಕ್ಷ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಅಭಿಪ್ರಾಯ ವ್ಯಕ್ತಪಡಿಸಿದರು. ಕೂಡ್ಲು ಕುತ್ಯಾಳ ಸಂತಾನ ಶ್ರೀಗೋಪಾಲಕೃಷ್ಣ ಕ್ಷೇತ್ರದಲ್ಲಿ ನಡೆದ ಅತ್ಯಪೂರ್ವ ಪುತ್ರಕಾಮೇಷ್ಠಿ ಯಾಗ ಹಾಗೂ ಧನ್ವಂತರಿ ಹವನದ ಸಮಾರೋಪ ಕಾರ್ಯಕ್ರಮದಂಗವಾಗಿ ಆಯೋಜಿಸಲಾಗಿದ್ದ ಧಾರ್ಮಿಕ […]