ಬಾಡಿಗೆ ಮನೆ ಯಿಂದ ಹೊರಗೆ ಹೋದ ಯುವತಿ ನಾಪತ್ತೆ

Wednesday, October 4th, 2023
ಬಾಡಿಗೆ ಮನೆ ಯಿಂದ ಹೊರಗೆ ಹೋದ ಯುವತಿ ನಾಪತ್ತೆ

ಉಡುಪಿ : ಉಡುಪಿ ತಾಲೂಕು 76-ಬಡಗುಬೆಟ್ಟು ಗ್ರಾಮದ ಬೀಡಿನಗುಡ್ಡೆ ಶಂಕರಶೆಟ್ಟಿ ಕಂಪೌಂಡ್‌ನ ಬಾಡಿಗೆ ಮನೆಯ ನಿವಾಸಿ ಜಯಶ್ರೀ ರಾಠೋಡ್ ಅಲಿಯಾಸ್ ಪೂಜಾ ಎಂಬ ಯುವತಿಯು ಅಕ್ಟೋಬರ್ 1 ರಂದು ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿದ್ದಾರೆ. 5 ಅಡಿ 4 ಇಂಚು ಎತ್ತರ, ಸಪೂರ ಶರೀರ, ಗೋಧಿ ಮೈಬಣ್ಣ, ಕೋಲು ಮುಖ ಹೊಂದಿದ್ದು, ಕನ್ನಡ ಹಾಗೂ ಲಂಬಾಣಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣಾಧಿಕಾರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ […]

ಪಡುಪಣಂಬೂರು : ಮಗು ಸಹಿತ ಒಂದೇ ಕುಟುಂಬದ ಮೂವರ ಮೃತದೇಹ ಪತ್ತೆ

Monday, December 14th, 2020
vinod Saliyan

ಮುಲ್ಕಿ : ಒಂದೇ ಕುಟುಂಬದ ಮೂವರ ಮೃತದೇಹಗಳು ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಪಡುಪಣಂಬೂರು ಕಲ್ಲಾಪು ಬಳಿ ಸೋಮವಾರ ಮನೆಯೊಳಗೆ ಪತ್ತೆಯಾಗಿದೆ. ವಿನೋದ್ ಸಾಲ್ಯಾನ್ (38), ಪತ್ನಿ ರಚನಾ (38), ಪುತ್ರ ಸಾಧ್ಯ (10) ಮೃತಪಟ್ಟವರು. ವಿನೋದ್ ಅವರು ಪತ್ನಿ ಹಾಗೂ ಮಗನಿಗೆ ವಿಷವುಣಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಸೋಮವಾರ ಮಧ್ಯಾಹ್ನ ಕೃತ್ಯ ಬೆಳಕಿಗೆ ಬಂದಿದ್ದು ಶನಿವಾರ ರಾತ್ರಿ ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ. ಪಡುಪಣಂಬೂರು ಪರಿಸರದಲ್ಲಿ ರಿಯಲ್ ಎಸ್ಟೇಟ್ ಉದ್ಯಮ […]

ಹುಬ್ಬಳ್ಳಿ : ಸಿಎಂ ಕುಮಾರಸ್ವಾಮಿ ಬಾಡಿಗೆ ಮನೆ ಮಾರಾಟಕ್ಕೆ!

Wednesday, August 1st, 2018
HD kumaraswamy

ಹುಬ್ಬಳ್ಳಿ : ಉತ್ತರ ಕರ್ನಾಟಕ‌ ಭಾಗದಲ್ಲಿ ಜೆಡಿಎಸ್ ಪಕ್ಷ ಸಂಘಟನೆಗೋಸ್ಕರ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹುಬ್ಬಳ್ಳಿಯ ಭೈರಿದೇವರಕೊಪ್ಪದಲ್ಲಿ ಮನೆ ಮಾಡಿ ಅದ್ಧೂರಿ ಗೃಹ ಪ್ರವೇಶ ಮಾಡಿದ್ರು. ಆದರೆ ಈಗ ಅದೇ ಮನೆಯನ್ನು ಮನೆ ಮಾಲೀಕರು ಮಾರಾಟಕ್ಕಿಟ್ಟಿದ್ದಾರೆ. ಇದು ಕುಮಾರಸ್ವಾಮಿ ಅವರನ್ನು ಮುಜುಗರಕ್ಕೀಡು ಮಾಡಿದೆ. ಸಿಎಂ ಆದಾಗಿನಿಂದಲೂ ಒಂದಲ್ಲ ಒಂದು ಸಮಸ್ಯೆಗಳಿಗೆ ಸಿಲುಕುತ್ತಲೇ ಇರುವ ಕುಮಾರಸ್ವಾಮಿ ಅಧಿಕಾರ ವಹಿಸಿಕೊಂಡ ಹೊಸತರಲ್ಲಿ ಸಾಲ ಮನ್ನಾ ವಿಚಾರವಾಗಿ ಮುಜುಗರಕ್ಕೀಡಾಗಿದ್ದದರು. ಈಗ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ವಿವಾದಕ್ಕೆ ಸಿಲುಕಿದ್ದಾರೆ. ಇದೆಲ್ಲದರ ನಡುವೆ […]