ಕೋಳಿ ಫಾರಂನಲ್ಲಿ ಕೂಡಿಹಾಕಿ 17 ವರ್ಷದ ಬಾಲಕಿಯ ಸಾಮೂಹಿಕ ಅತ್ಯಾಚಾರ

Thursday, October 15th, 2020
Rape

ಕಟಕ್ : ಮನೆಯಿಂದ ಓಡಿಹೋಗಿದ್ದ 17 ವರ್ಷದ ಬಾಲಕಿಯನ್ನು ಕೋಳಿ ಫಾರಂನಲ್ಲಿ ಕೂಡಿಹಾಕಿ 22 ದಿನಗಳ ಕಾಲ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಒಡಿಶಾದಲ್ಲಿ ನಡೆದಿದೆ. ಕಟಕ್ ನಲ್ಲಿ ಕೋಳಿ ಸಾಕಣೆ ಕೇಂದ್ರಕ್ಕೆ ಹುಡುಗಿಯನ್ನು ಕರೆದೊಯ್ದು ಕೂಡಿಹಾಕಿ ಅತ್ಯಾಚಾರ ಎಸಗಲಾಗಿದೆ. ಜಗತ್ ಸಿಂಗ್ ಪುರ್ ಜಿಲ್ಲೆಯ ಟಿರ್ಟಾಲ್ ನಿವಾಸಿಯಾಗಿರುವ ಹುಡುಗಿ ಪೋಷಕರೊಂದಿಗೆ ಜಗಳವಾಡಿ ಮನೆಯಿಂದ ಓಡಿ ಹೋಗಿದ್ದಾಳೆ. ಓಎಂಸಿ ಸ್ಕ್ವೇರ್ ನಲ್ಲಿರುವ ಬಸ್ ನಿಲ್ದಾಣದ ಬಳಿ ವ್ಯಕ್ತಿಯೊಬ್ಬ ಆಕೆಯನ್ನು ಮನೆಗೆ ಕರೆದುಕೊಂಡು ಹೋಗುವುದಾಗಿ ಭರವಸೆ ನೀಡಿದ್ದಾನೆ. ಆದರೆ […]

ಉದ್ಯಮಿ ಮನೆಯಿಂದ ತಪ್ಪಿಸಿಕೊಂಡ ಜೀತಕ್ಕೆ ಇಟ್ಟುಕೊಂಡಿದ್ದ ಬಾಲಕಿ, ಸಹಾಯಕ್ಕೆ ಬಂದ ಚೈಲ್ಡ್‌ಲೈನ್

Monday, October 5th, 2020
child jeeta

ಮಂಗಳೂರು: ಉದ್ಯಮಿಯೊಬ್ಬರು ಬಾಲಕಿಯೊಬ್ಬಳನ್ನು ಜೀತಕ್ಕೆ ಇಟ್ಟುಕೊಂಡಿದ್ದು ಆಕೆ ತಾನು ಕೆಲಸ ಮಾಡುತ್ತಿದ್ದ ಮನೆಯಿಂದ ತಪ್ಪಿಸಿಕೊಂಡಿದ್ದಲ್ಲದೆ, ರಸ್ತೆಗೆ ಬಂದು ಸಹಾಯ ಮಾಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಳು. ಇದನ್ನು ಗಮನಿಸಿದ ಸ್ಥಳೀಯರು ಚೈಲ್ಡ್‌ಲೈನ್‌ಗೆ ಕರೆ ಮಾಡಿ ತಿಳಿಸಿದ್ದರು. ಆ ಪ್ರಕಾರ ಬರ್ಕೆ ಪೊಲೀಸರು ಬಾಲಕಿಯನ್ನು ಜೀತಕ್ಕಿಟ್ಟುಕೊಂಡಿದ್ದ ಮನೆಗೆ ತೆರಳಿದ್ದು, ಯಾವುದೇ ಕ್ರಮ ವಹಿಸದೆ ಹಿಂದಿರುಗಿದ್ದಾರೆ ಎಂದು ಒಡನಾಡಿ ಎನ್ಜಿಒ ಸಂಸ್ಥೆ ಆರೋಪಿಸಿದೆ. ಬಳಿಕ ಬಾಲಕಿ ಒಡನಾಡಿ ಸಂಸ್ಥೆಗೆ ತೆರಳಿ ದೂರು ನೀಡಿದ್ದಳು. ಮೈಸೂರಿನ ಈ ಬಾಲಕಿಯನ್ನು ಜೀತದಾಳು ಆಗಿ ಇರಿಸಿಕೊಂಡಿರುವುದರ ನಗರದ ಉದ್ಯಮಿಯೊಬ್ಬರ ವಿರುದ್ಧ […]

ಹುಡುಗಿಯರನ್ನು ಚುಡಾಯಿಸುತ್ತಿದ್ದುದಲ್ಲದೆ, ಬಾಲಕಿಯೊಬ್ಬಳಿಗೆ ಲೈಂಗಿಕ ದೌರ್ಜನ್ಯವೆಸಗಿದ ಬಾಲಕನ ಬಂಧನ

Thursday, October 1st, 2020
Girl

ಬಂಟ್ವಾಳ : ಫರಂಗಿಪೇಟೆ ಸಮೀಪದ ಕುಂಪಜಲು ಎಂಬಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವಾರಗಳ ಹಿಂದೆ ಪ್ರಕರಣ ದಾಖಲಾಗಿತ್ತು. ಆದರೆ ಅಪರಿಚಿತ ಆರೋಪಿ ಪತ್ತೆಯಾಗಿರಲಿಲ್ಲ. ಕಳೆದ ಕೆಲವು ತಿಂಗಳಿನಿಂದ ಕುಂಪಣಮಜಲು ಪರಿಸರದಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುವ ಯುವತಿಯರಿಗೆ ಈತ ಕಿರುಕುಳ ನೀಡುತ್ತಿದ್ದ ಬಗ್ಗೆ ಸಾರ್ವಜನಿಕ ದೂರುಗಳು ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣದ ಜಾಡು ಹಿಡಿದ ಬಂಟ್ವಾಳ ಗ್ರಾಮಾಂತರ ಠಾಣಾ ಎಸ್.ಐ. ಪ್ರಸನ್ನ ನೇತೃತ್ವದ ತಂಡ ಅಪ್ರಾಪ್ತ ಬಾಲಕನೊಬ್ಬನನ್ನು […]

ಬಾಲಕರಿಗೆ ಹೊಯ್ಸಳ ಮತ್ತು ಬಾಲಕಿಯರಿಗೆ ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ – ಅರ್ಜಿ ಆಹ್ವಾನ

Tuesday, August 4th, 2020
hoisala

ಮಂಗಳೂರು : 2020-21 ನೇ ಸಾಲಿಗೆ ಬಾಲಕರಿಗಾಗಿ “ಹೊಯ್ಸಳ” ಮತ್ತು ಬಾಲಕಿಯರಿಗಾಗಿ “ಕೆಳದಿ ಚೆನ್ನಮ್ಮ” ಶೌರ್ಯ ಪ್ರಶಸ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 6 ರಿಂದ 18 ವರ್ಷದೊಳಗಿನ ಮಕ್ಕಳು ತಮ್ಮ ಪ್ರಾಣದ ಹಂಗನ್ನು ತೊರೆದು ಇತರರ ಪ್ರಾಣ ರಕ್ಷಣೆಗಾಗಿ ಅಸಾಧಾರಣ ಧೈರ್ಯ ಸಾಹಸ ಪ್ರದರ್ಶಿಸಿದ ಕಾರ್ಯಕ್ಕೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಪ್ರಶಸ್ತಿಯು ತಲಾ ರೂ. 10,000 ಗಳ ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ. ಶೌರ್ಯ ಪ್ರದರ್ಶಿಸಿದ ಅವಧಿಯು ಆಗಸ್ಟ್ 2019 ರಿಂದ ಜುಲೈ 2020 ರೊಳಗೆ ನಡೆದಿರಬೇಕು […]

ಮ್ಯಾಗ್ನೆಟ್‌‌‌‌‌‌ ನುಂಗಿದ ಬಾಲಕಿ… ಕೆಎಂಸಿ ಆಸ್ಪತ್ರೆ ವೈದ್ಯರಿಂದ ಯಶಸ್ವಿ ಚಿಕಿತ್ಸೆ

Tuesday, May 29th, 2018
magnet

ಮಂಗಳೂರು: ಒಂಭತ್ತು ವರ್ಷ ವಯಸ್ಸಿನ ಬಾಲಕಿಯ ಶ್ವಾಸನಾಳದಲ್ಲಿ ಸಿಲುಕಿಕೊಂಡಿದ್ದ ಮ್ಯಾಗ್ನೆಟ್(ಆಯಸ್ಕಾಂತ)ವೊಂದನ್ನು ಹೊರತೆಗೆಯುವ ಮೂಲಕ ಇಲ್ಲಿನ ಕೆಎಂಸಿ ಆಸ್ಪತ್ರೆ ಬಾಲಕಿಯನ್ನು ಪ್ರಾಣಾಪಾಯದಿಂದ ಪಾರು ಮಾಡಿದೆ. ಬಾಲಕಿ ಮನೆಯಲ್ಲಿ ಆಟವಾಡುವಾಗ ಸಣ್ಣ ಮ್ಯಾಗ್ನೆಟ್‌ವೊಂದನ್ನು ನುಂಗಿದ್ದ ಕಾರಣ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಳು. ಬಲ ಶ್ವಾಸಕೋಶದ ನಾಳದಲ್ಲಿ ಮ್ಯಾಗ್ನೆಟ್ ಇರುವುದನ್ನು ಎಕ್ಸ್-ರೇ ತೋರಿಸಿತ್ತು. ಕೆಎಂಸಿ ಆಸ್ಪತ್ರೆಯ ಮಕ್ಕಳ ಶಸ್ತ್ರಚಿಕಿತ್ಸಾ ತಜ್ಞರಾದ ಡಾ. ಜಯತೀರ್ಥ ಜೋಷಿ ಅವರು ತಕ್ಷಣ ಮಗುವನ್ನು ಶಸ್ತ್ರಚಿಕಿತ್ಸಾ ಕೊಠಡಿಗೆ ವರ್ಗಾಯಿಸಿ ಬ್ರಾಂಕೊಸ್ಕೋಪ್‌ನಿಂದ ಮ್ಯಾಗ್ನೆಟ್ ಹೊರತೆಗೆಯುವ ಚಿಕಿತ್ಸಾ ಪ್ರಕ್ರಿಯೆ ಕೈಗೆತ್ತಿಕೊಂಡಿದ್ದರು. […]