ಬಜಾಲ್ : ಬಾವಿಗೆ ಬಿದ್ದ ಸ್ಕೂಟರ್ ಸವಾರರು, ಓರ್ವ ಮೃತ್ಯು

Monday, January 4th, 2021
Ajith

ಮಂಗಳೂರು : ಬಜಾಲ್ ಸಮೀಪದ  ಪಕ್ಕಲಡ್ಕ ಎಂಬಲ್ಲಿ ಬಾವಿಯ ತಡೆಗೋಡೆಗೆ ಸ್ಕೂಟರ್ ಡಿಕ್ಕಿ ಹೊಡೆದು ಸವಾರರು ಬಿದ್ದು ಓರ್ವ ಮೃತಪಟ್ಟ ಘಟನೆ ಸೋಮವಾರ ರಾತ್ರಿ ನಡೆದಿದೆ. ಇಬ್ಬರು ಸವಾರರ ಪೈಕಿ ಓರ್ವನ ಮೃತದೇಹ ಪತ್ತೆಯಾಗಿದ್ದು ಆತನನ್ನು  ಎಮ್ಮೆಕೆರೆ ನಿವಾಸಿ ಅಜಿತ್ (22) ಎಂದು ಗುರುತಿಸಲಾಗಿದೆ. ಅಜಿತ್ ಸೋಮವಾರ ಬಜಾಲ್ನ ಉಲ್ಲಾಸ್ ನಗರದ ತನ್ನ ಸಂಬಂಧಿಕರ ಮನೆಗೆ ಬರುವಾಗ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ. ರಾತ್ರಿ ವೇಳೆಗೆ ಸ್ಕೂಟರ್ ಸವಾರ ನಿಯಂತ್ರಣ ಕಳೆದುಕೊಂಡು  ರಸ್ತೆ ಪಕ್ಕದಲ್ಲೇ ಇದ್ದ ಬಾವಿ ಆವರಣಕ್ಕೆ ಡಿಕ್ಕಿ ಹೊಡೆದು ಸ್ಕೂಟರ್‌ನಲ್ಲಿದ್ದ ಇಬ್ಬರು ಬಿದ್ದಿದದ್ದಾರೆ ಎನ್ನಲಾಗಿದೆ. […]

ಬಾವಿಗೆ ಬಿದ್ದ ಕರು ಸುರಕ್ಷಿತ, ರಕ್ಷಿಸಲೆತ್ನಿಸಿದ ಸಹೋದರರಿಬ್ಬರು ಮೃತ

Wednesday, May 27th, 2020
paiwalike death

ಕಾಸರಗೋಡು : ಇದೊಂದು ದುರಂತ ಘಟನೆ, ತನ್ನ ಮನೆಯ ಬಾವಿಗೆ ಬಿದ್ದ ದನದ ಕರುವನ್ನು ರಕ್ಷಿಸಲೆತ್ನಿಸಿದಾಗ ಸಹೋದರರಿಬ್ಬರು ಮೃತಪಟ್ಟ ದಾರುಣ ಘಟನೆ ಇಂದು ಬೆಳಿಗ್ಗೆ ಪೈವಳಿಕೆ ಸಮೀಪದ ಸುಬ್ಬಯ್ಯಕಟ್ಟೆಯಲ್ಲಿ ನಡೆದಿದೆ. ಅವರಿಬ್ಬರೂ ಅಣ್ಣ ತಮ್ಮಂದಿರು  ಸುಬ್ಬಯ್ಯ ಕಟ್ಟೆಯ ನಾರಾಯಣ (50) ಮತ್ತು ಸಹೋದರ ಶಂಕರ (40) . ಕರುವನ್ನು ಮೇಲೆಕ್ಕೆತ್ತಲು ಮೊದಲಿಗೆ ಶಂಕರ  ಹಗ್ಗದ ಸಹಾಯದಿಂದ ಬಾವಿಗೆ ಇಳಿದಿದ್ದು, ಬಾವಿಯಲ್ಲಿ ಉಸಿರಾಟ ತೊಂದರೆ ಉಂಟಾಗಿ ಬಾವಿಯೊಳಗೆ ಕುಸಿದು ಬಿದ್ದಿದ್ದಾರೆ , ಇದ್ದನ್ನು ಕಂಡು ಸಹೋದರ ನಾರಾಯಣ ಎಂಬವರು ಕೂಡ ಬಾವಿಗೆ […]

ಬಂಟ್ವಾಳ : ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Thursday, November 28th, 2019
Bantwal

ಬಂಟ್ವಾಳ : ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳ ಗ್ರಾಮಾಂತರ ಠಾಣೆ ವ್ಯಾಪ್ತಿಯ ಸಿದ್ದಕಟ್ಟೆ ಸಮೀಪದ ಕರ್ಪೆ ಮುಗೇರು ಎಂಬಲ್ಲಿ ನಡೆದಿದೆ. ಮುಗೇರು ನಿವಾಸಿ ಅಭಯ್ ಜೈನ್ ಎಂಬವರ ಪತ್ನಿ ಪ್ರತಿಭಾ ಜೈನ್ (35) ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಅಭಯ್ ಜೈನ್ ಮುಂಜಾನೆ 5 ಗಂಟೆಯ ವೇಳೆ ಹಾಸನದಲ್ಲಿ ನಡೆಯುವ ಸಂಬಂಧಿಕರ ಮದುವೆಗೆ ತೆರಳಿದ ಬಳಿಕ ಸುಮಾರು 6 ಗಂಟೆಯ ವೇಳೆ ಅವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ. ಮೃತರು ಪತಿ, […]

ನಿಶ್ಚಿತಾರ್ಥ ಜೋಡಿಯಿಂದ ಬಾವಿಯ ಮೆಟ್ಟಿಲಿನಲ್ಲಿ ನಿಂತು ಸೆಲ್ಫಿ : ಆಯತಪ್ಪಿ ಬಿದ್ದು ಯುವತಿ ಮೃತ್ಯು

Tuesday, November 5th, 2019
chennai

ಚೆನ್ನೈ : ಇತ್ತೀಚೆಗಷ್ಟೇ ನಿಶ್ಚಿತಾರ್ಥವಾದ ಜೋಡಿಯೊಂದು ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಬಾವಿಗೆ ಬಿದ್ದ ಘಟನೆ ಚೆನ್ನೈನಲ್ಲಿ ನಡೆದಿದೆ. ಈ ಘಟನೆ ಪಟ್ಟಾಭಿರಾಮ್ ಎಂಬಲ್ಲಿ ಸೋಮವಾರ ನಡೆದಿದ್ದು, ಅವಘಡದಲ್ಲಿ ಯುವತಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾಳೆ. ಆದರೆ ಯುವಕ ಮಾತ್ರ ರೈತನ ಸಹಾಯದಿಂದಾಗಿ ಪ್ರಾಣಾಪಾಯದಿಂದಾಗಿ ಪಾರಾಗಿದ್ದು, ಸದ್ಯ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮೃತ ದುರ್ದೈವಿ ಯುವತಿಯನ್ನು ಟಿ ಮರ್ಸಿ ಸ್ಟೆಪ್ಪಿ(24) ಎಂದು ಗುರುತಿಸಲಾಗಿದೆ. ಪಟ್ಟಾಭಿರಾಮ್ ಬಳಿಯ ಗಾಂಧಿನಗರ ನಿವಾಸಿಯಾಗಿರುವ ಈಕೆಗೆ ಕೆಲ ದಿನಗಳ ಹಿಂದೆಯಷ್ಟೇ ಡಿ ಅಪ್ಪು(24) ಎಂಬಾತನ […]

ಬಂಟ್ವಾಳ : ಆಹಾರವನ್ನು ಹುಡುಕಿ ಬಂದ ಚಿರತೆ ಆಯತಪ್ಪಿ ಬಾವಿಯೊಳಗೆ ಬಿತ್ತು

Wednesday, March 18th, 2015
Chita

ಬಂಟ್ವಾಳ : ಆಹಾರವನ್ನು ಹುಡುಕಿ ಬಂದ ಚಿರತೆ ಆಯತಪ್ಪಿ ಬಾವಿಯೊಳಗೆ ಬಿದ್ದ ಘಟನೆ ಬಂಟ್ವಾಳದ ವಳಲೂರು ಎಂಬಲ್ಲಿ ನಡೆದಿದೆ. ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು ರಕ್ಷಿಸಿ ಪಿಲಿಕುಳ ವನ್ಯಧಾಮ ಕೇಂದ್ರಕ್ಕೆ ರವಾನಿಸಿದ್ದಾರೆ. ಮಂಗಳವಾರ ರಾತ್ರಿ ಕೋಳಿ ತಿನ್ನಲು ಬಂದ ಚಿರತೆ ವಳವೂರಿನ ನಿವಾಸಿ ಲಿಂಗಪ್ಪ ಪೂಜಾರಿ ಅವರ ಮನೆ ಸಮೀಪದ ಬಾವಿಗೆ ಬಿದ್ದಿತ್ತು. ಬುಧವಾರ ಬೆಳಗ್ಗೆ ಚಿರತೆಯನ್ನು ನೋಡಿದ ಸ್ಥಳೀಯರು ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದರು. ಬಾವಿಗೆ ಬಿದ್ದಿದ್ದ ಚಿರತೆ ಪೈಪನ್ನು […]

ನಿವೃತ್ತ ಸೈನಿಕನ ಪತ್ನಿ ತನ್ನ ಮಗಳನ್ನು ಬಾವಿಗೆ ಎಸೆದು ತಾನು ಆತ್ಮಹತ್ಯೆ !

Thursday, July 11th, 2013
Bantwal Death

ಬಂಟ್ವಾಳ:  ನಿವೃತ್ತ ಸೈನಿಕ ನವೀನ್ ಚಂದ್ರ ಎಂಬವರ ಪತ್ನಿ ಪ್ರತಿಮಾ(32) ತನ್ನ ಮಗಳು ದಿಯಾ(9) ಜೊತೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಬಂಟ್ವಾಳ ಸಮೀಪದ ಮೆಲ್ಕಾರ್ ಎಂಬಲ್ಲಿ ನಡೆದಿದೆ. ಗುರುವಾರ ಮುಂಜಾನೆ ಈರ್ವರ ಶವ  ಮನೆ ಸಮೀಪದ ಬಾವಿಯಲ್ಲಿ ಪತ್ತೆಯಾಗಿದೆ, ಕೌಟುಂಬಿಕ ವಿರಸದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತದೆಯಾದರೂ, ಸ್ಪಷ್ಟ ಕಾರಣ ಇನ್ನಷ್ಟೇ ತಿಳಿಯಬೇಕಿದೆ. ಮೆಲ್ಕಾರ್ ನಲ್ಲಿ ವಾಸ್ತವ್ಯ ವಿರುವ ಪ್ರತಿಮಾ ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ದಾದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮಗಳು ದಿಯಾ ಪಾಣೆಮಂಗಳೂರು […]