ಸರ್ಕ್ಯೂಟ್‌ ಹೌಸ್‌ ಬಳಿಯಿಂದ ಬಿಜೈ ಸರ್ಕಲ್‌ ವರೆಗಿನ ರಸ್ತೆಗೆ “ಜಾರ್ಜ್‌ ಫೆರ್ನಾಂಡಿಸ್‌ ರಸ್ತೆ” ನಾಮಕರಣ

Saturday, July 6th, 2024
George-Fernandes-road

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ನಗರದ ಸರ್ಕ್ಯೂಟ್‌ ಹೌಸ್‌ ಬಳಿಯಿಂದ ಬಿಜೈ ಸರ್ಕಲ್‌ ವರೆಗಿನ ರಸ್ತೆಗೆ “ಜಾರ್ಜ್‌ ಫೆರ್ನಾಂಡಿಸ್‌ ರಸ್ತೆ” ಎಂದು ಅಧಿಕೃತವಾಗಿ ನಾಮಕರಣಗೊಳಿಸಲಾಯಿತು. ಈ ವೇಳೆ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ಅವರು, ದಕ್ಷಿಣ ಭಾರತದಲ್ಲಿ ಜನಿಸಿ ಉತ್ತರ ಭಾರತದಲ್ಲಿ ರಾಜಕೀಯವಾಗಿ ಬಹು ಎತ್ತರಕ್ಕೆ ಬೆಳೆದವರು ಜಾರ್ಜ್ ಫರ್ನಾಂಡಿಸ್. ಚಿಕ್ಕಂದಿನಲ್ಲೇ ಅನ್ಯಾಯದ ವಿರುದ್ಧ ಸಿಡಿದೇಳುವ ಸ್ವಭಾವದ ಅವರು ಕ್ರಿಶ್ಚಿಯನ್ ಪಾದ್ರಿಯಾಗಬೇಕೆಂದು ಬಯಸಿದ್ದರು. ಆದರೆ ಅವರು ದೇಶದ ಅಮೂಲ್ಯ ಆಸ್ತಿಯಾದರು. ಉದ್ಯೋಗವನ್ನು ಅರಸಿ ಮುಂಬೈಗೆ […]