ಜಿಲ್ಲಾ ಕಾಂಗ್ರೇಸ್ ಮುಖಂಡ ಬೆಂಗ್ರೆ ಶೇಖರ್ ಸುವರ್ಣ ನಿಧನ

Friday, March 15th, 2024
shekara-Bangera

ಮಂಗಳೂರು : ಜಿಲ್ಲಾ ಕಾಂಗ್ರೇಸ್ ಮುಖಂಡ, ಸಮಾಜಸೇವಕ ಶೇಖರ್ ಸುವರ್ಣ ಬೆಂಗ್ರೆಯವರು ಹೃದಯಾಘಾತದಿಂದ ಇಂದು ಬೆಳಗ್ಗೆ ನಿಧನರಾದರು. ಅವರಿಗೆ 81 ವರ್ಷ ವಯಸ್ಸಾಗಿತ್ತು. ಶ್ರೀಯುತರು ಪತ್ನಿ ಮತ್ತು ಇಬ್ಬರು ಪುತ್ರಿಯರು, ಓರ್ವ ಪುತ್ರ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಕಾಂಗ್ರೇಸ್ ಪಕ್ಷದ ಮಂಗಳೂರು ದಕ್ಷಿಣದ ವಿಭಾಗದ ಉಪಾಧ್ಯಕ್ಷರಾಗಿ ರಾಜಕೀಯ ಸೇವೆಯನ್ನು ಮಾಡಿದ ಶ್ರೀಯುತರು ಬೆಂಗ್ರೆ ಮಹಾಜನ ಸಭಾ ಅಧ್ಯಕ್ಷರಾಗಿ ಅನೇಕ ಅಭಿವೃದ್ದಿ ಕಾರ್ಯಗಳನ್ನು ಮಾಡಿ ಜನಮನ್ನಣೆ ಪಡೆದಿದ್ದರು. ಬೆಂಗ್ರೆ ಶೇಷಾಶಯನ ಮಂದಿರ ಅಲ್ಲದೆ ಇತರ ಧಾರ್ಮಿಕ […]

ಬೆಂಗ್ರೆಯಲ್ಲಿ‌ ಯುವತಿಯ ಗ್ಯಾಂಗ್ ರೇಪ್ ಪ್ರಕರಣ: ಪೊಲೀಸರಿಗೆ ಒಂದು ಲಕ್ಷ ರೂ. ಚೆಕ್ ನೀಡಿ‌ ಅಭಿನಂದನೆ

Saturday, December 1st, 2018
u-t-khader

ಮಂಗಳೂರು: ನಗರದ ತೋಟ ಬೆಂಗ್ರೆಯಲ್ಲಿ‌ ಯುವತಿಯ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮೊಟೋ ಪ್ರಕರಣ ದಾಖಲಿಸಿ‌ ಆರೋಪಿಗಳನ್ನು ಶೀಘ್ರ ಬಂಧಿಸಿದ ಮಂಗಳೂರು ನಗರ ಪೊಲೀಸರಿಗೆ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಒಂದು ಲಕ್ಷ ರೂ. ಚೆಕ್ ನೀಡಿ‌ ಅಭಿನಂದಿಸಿದರು. ಮಂಗಳೂರಿನ ಸರ್ಕ್ಯೂಟ್ ಹೌಸ್ನಲ್ಲಿ ಮಂಗಳೂರು ಪೊಲೀಸ್ ಕಮೀಷನರ್ ಟಿ.ಆರ್.ಸುರೇಶ್ ಅವರಿಗೆ ಸಚಿವರು ಚೆಕ್ ಹಸ್ತಾಂತರಿಸಿದರು. ಬಂಟ್ವಾಳ ಪೊಲೀಸರು ಪ್ರಕರಣ ದಾಖಲಿಸಲು ಹಿಂದೇಟು ಹಾಕಿದಾಗ, ತಮಗೆ ದೂರು ಬಾರದೆ ಇದ್ದರೂ ಮಾಹಿತಿ ಸಂಗ್ರಹಿಸಿ ಸುಮೊಟೋ ಪ್ರಕರಣ ದಾಖಲಿಸಿ […]

ಬೆಂಗ್ರೆ ಘರ್ಷಣೆ ಹಿಂದೆ ಶಾಸಕ ಜೆ.ಆರ್.ಲೋಬೋ: ನಳಿನ್ ಕುಮಾರ್ ಕಟೀಲ್

Friday, February 23rd, 2018
nalin-kumar

ಮಂಗಳೂರು: ಚುನಾವಣೆ ಹತ್ತಿರವಾಗುತ್ತಿದ್ದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಗಲಭೆ ಸೃಷ್ಟಿಸಲು ಕಾಂಗ್ರೆಸ್ ಷಡ್ಯಂತ್ರ ರೂಪಿಸಿದೆ. ಮಂಗಳೂರು ಹೊರವಲಯದ ಬೆಂಗ್ರೆಯಲ್ಲಿ ನಡೆದಿರುವ ಘಟನೆ ಇದಕ್ಕೆ ಸಾಕ್ಷಿ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ. ಗುರುವಾರ ಮಂಗಳೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕಸಬಾ ಬೆಂಗ್ರೆಯಲ್ಲಿ ನಡೆದ ಘರ್ಷಣೆ, ಕಲ್ಲು ತೂರಾಟ ಪ್ರಕರಣದ ಹಿಂದೆ ಕಾಂಗ್ರೆಸಿನನ ವ್ಯವಸ್ಥಿತ ಷಡ್ಯಂತ್ರ ಇದೆ ಎಂದು ಕಿಡಿಕಾರಿದರು. ಜೆ.ಆರ್.ಲೋಬೋ ಸೋಲಿನ ಭಯದಿಂದ ಕಾಂಗ್ರೆಸ್ ಓಟ್ ಬ್ಯಾಂಕ್ ಗಾಗಿ ಕೋಮು ಗಲಭೆ ಸೃಷ್ಠಿಸಲು […]

ಮನೆಗೆ ನುಗ್ಗಿ ನಾಲ್ಕು ಮಂದಿಗೆ ಹಲ್ಲೆಗೈದ ತಂಡ, ಪೊಲೀಸರು ಗಾಯಾಳುಗಳನ್ನು ದಾರಿಯಲ್ಲಿಯೇ ಬಿಟ್ಟು ಹೋದರು

Tuesday, February 7th, 2017
Bengre Dispute

ಮಂಗಳೂರು: ಮನೆಗೆ ನುಗ್ಗಿದ ತಂಡವೊಂದು ನಾಲ್ಕು ಮಂದಿಗೆ ಹಲ್ಲೆಗೈದ ಘಟನೆ ಬೆಂಗ್ರೆಯಲ್ಲಿ ನಡೆದಿದ್ದು, ಹಲ್ಲೆಗೊಳಗಾಗಿ ಗಾಯಗೊಂಡವನ್ನು ಆಸ್ಪತ್ರೆಗೆ ಸಾಗಿಸುವ ದಾರಿ ನಡುವೆ ಅರ್ಧದಲ್ಲಿಯೇ ಕೆಳಗಿಳಿಸಿ ಪೊಲೀಸರು ಅಮಾನವೀಯ ವರ್ತನೆ ತೋರಿದ್ದಾರೆ ಎಂದು ಆರೋಪಿಸಲಾಗಿದೆ. ಬೆಂಗ್ರೆಯ ಮಹಮ್ಮೂದ್, ಫಮೀನಾ ದಂಪತಿ ಹಾಗೂ ಮಕ್ಕಳಾದ ಸಲ್ಮಾನ್ ಫಾರಿಶ್, ಸಮ್ನಾನ ಎಂಬವರ ಮೇಲೆ ತಂಡವೊಂದು ಮಾರಾಣಾಂತಿಕ ಜಾಗದ ವಿವಾದದ ಹಿನ್ನೆಲೆಯಲ್ಲಿ  ಹಲ್ಲೆ ನಡೆಸಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಬೆಂಗ್ರೆಯ ಅನ್ವರ್ ಹುಸೈನ್, ಮುಮ್ತಾಝ್, ಶಮೀಮಾ, ಹಂಝ ಎಂಬವರು […]

ಬೆಂಗ್ರೆಯಲ್ಲಿ ಬರಕಾ ಮೀನು ಎಣ್ಣೆ ತಯಾರಿಕಾ ಘಟಕ ಸ್ಥಾಪನೆ ವಿರೋಧಿಸಿ ಕಾಲ್ನಡಿಗೆ ಜಾಥಾ

Tuesday, February 12th, 2013
fish meal unit Bengre

ಮಂಗಳೂರು : ಬೆಂಗ್ರೆಯ ಸಾರ್ವಜನಿಕ ಆಟದ ಮೈದಾನದಲ್ಲಿ, ಬಂದರು ಇಲಾಖೆಗೆ ಸಂಬಂಧಿಸಿದ ಜಾಗದಲ್ಲಿ  ಬರಕಾ ಮೀನು ಎಣ್ಣೆ ತಯಾರಿಕಾ ಘಟಕಕ್ಕೆ   ಶಿಲಾನ್ಯಾಸ ನಡೆಸಿರುವ ಕ್ರಮವನ್ನು ವಿರೋದಿಸಿ ಬೆಂಗ್ರೆ ನಾಗರಿಕರು ಸೋಮವಾರ ಬೆಂಗ್ರೆಯಿಂದ  ಜಿಲ್ಲಾಧಿಕಾರಿ ಕಚೇರಿವರೆಗೆ  ಕಾಲ್ನಡಿಗೆ ಜಾಥಾ ಹಾಗೂ ಪ್ರತಿಭಟನೆ ನಡೆಸಿದರು. ಅಲ್‌ಮದ್ರಸತುದ್ದೀನಿಯ್ಯಃ ಮುಹ್ಯಿದ್ದೀನ್ ಜುಮಾ ಮಸೀದಿ ಆಡಳಿತ ಸಮಿತಿಯ ನೇತೃತ್ವದಲ್ಲಿ ಬೆಂಗ್ರೆಯಿಂದ ಪ್ರಾರಂಭಗೊಂಡ ಕಾಲ್ನಡಿಗೆ  ಜಾಥಾವು ರಾವ್ ಅಂಡ್ ರಾವ್ ಸರ್ಕಲ್, ಸರ್ಕಾರಿ ಲೇಡಿಗೋಶನ್ ಆಸ್ಪತ್ರೆ, ನಗರದ ಆರ್ ಟಿ  ಓ, ಸೈದಾನಿ ಬೇಬಿ ದರ್ಗಾದ ಮೂಲಕ […]