ಶಾಂತಿಪಳಿಕೆ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆ
Wednesday, March 1st, 2023
ಮಂಗಳೂರು : ಆತ್ಮ ವಿಶ್ವಾಸ ಮೂಡುವುದು ಧಾರ್ಮಿಕ ಕೇಂದ್ರಗಳಿಂದ, ದೇವಾಲಯಗಳು ಶಿಕ್ಷಣದ ಮೂಲಕ ಸಂಸ್ಕಾರವನ್ನು ಬೆಳೆಸುವ ಆಲಯ, ನಾವು ಬದುಕಿನಲ್ಲಿ ಉತ್ತಮತೆಯನ್ನು ಕಂಡುಕೊಳ್ಳಬೇಕಾದರೆ ಧಾರ್ಮಿಕ ಶ್ರದ್ಧಾ ಕೇಂದ್ರಗಳು ಪ್ರಮುಖವಾಗಿವೆ ಎಂದು ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು. ಅವರು ಶಾಂತಿಪಳಿಕೆ ಶ್ರೀಮಹಾಮಾಯದೇವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪ್ರಯುಕ್ತ ಸೋಮವಾರ ನಡೆದ ಧಾರ್ಮಿಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು. ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಭಕ್ತಿಯಿಂದ, ನಂಬಿಕೆಯಿಂದ ಆರಾಧಿ ಸಿಕೊಂಡು ಬಂದರೆ ನಮ್ಮಲ್ಲಿ ಭಕ್ತಿಭಾವದ ಬೆಳವಣಿಯೊಂದಿಗೆ ಅದು ನಮ್ಮನ್ನು […]