ತೀಥ೯ ಸ್ವರೂಪಿಣಿಯಾಗಿ ಉಕ್ಕಿ ಹರಿದ ಕಾವೇರಿ ಜೀವ ನದಿ

Saturday, October 17th, 2020
Tala Kavery

ಮಡಿಕೇರಿ : ಕಾವೇರಿ ಶನಿವಾರ ಬೆಳಗ್ಗೆ ಕನ್ಯಾ  ಲಗ್ನದಲ್ಲಿ 7 ಗಂಟೆ 04 ನಿಮಿಷಕ್ಕೆ ಬ್ರಹ್ಮಗಿರಿ ತಪ್ಪಲಿನ ಪವಿತ್ರ ತಾಣದಲ್ಲಿ ತೀಥ೯ ಸ್ವರೂಪಿಣಿಯಾಗಿ ಭಕ್ತರಿಗೆ ದರ್ಶನ ನೀಡಿದ್ದಾಳೆ. ಗೋಪಾಲ್ ಕೃಷ್ಣ ಆಚಾರ್ ನೃತೃತ್ವದಲ್ಲಿಬ್ರಹ್ಮಕುಂಡಿಕೆಯ ಬಳಿ ವಿವಿಧ ಪೂಜಾ ಕೈಂಕರ್ಯ ನೆರವೇರಿದ್ದು,  ಈ ಬಾರಿ ಕೊರೊನಾ ಹಿನ್ನೆಲೆ ತಲಕಾವೇರಿ ಕ್ಷೇತ್ರದಲ್ಲಿ ಕೇವಲ 500-600 ಭಕ್ತರಿಂದ ಮಾತ್ರ ಕಾವೇರಿ ತೀರ್ಥೋದ್ಭವ ದಶ೯ನಕ್ಕೆ ಅವಕಾಶ ನೀಡಲಾಗಿತ್ತು. ತೀರ್ಥೋದ್ಭವದ ವೇಳೆ ಜೈಜೈ ಮಾತಾ,ಕಾವೇರಿ ಮಾತೆ ಎಂಬ ಉದ್ಘೋಷದ ಕೇಳಿ ಬಂತು. ಭಾಗಮಂಡಲದ ಭಗಂಡೇಶ್ವರ ದೇಗುಲದಲ್ಲೂ […]

ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ತೀರ್ಥ ಉದ್ಭವ

Monday, October 18th, 2010
ತಲಕಾವೇರಿ

ಮಡಿಕೇರಿ : ಸೋಮವಾರ ಮುಂಜಾನೆ 3.11ಕ್ಕೆ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ಅಪಾರ ಭಕ್ತವೃಂದಕ್ಕೆ ಕಾವೇರಿ ತೀರ್ಥರೂಪಿಣಿಯಾಗಿ ಹರಿಯುವುದರೊಂದಿಗೆ ನೆರೆದ ಭಕ್ತರಿಗೆ ದರ್ಶನವಿತ್ತಳು.  ಭಕ್ತರ ಉದ್ಘೋಷ, ಮುಗಿಲು ಮುಟ್ಟಿದ ಮಂತ್ರಘೋಷ ದೊಂದಿಗೆ ತಲಕಾವೇರಿಯಲ್ಲಿ ತಿರ್ಥೂದ್ಭವವಾಯಿತು. ನೆರೆದ ಭಕ್ತವೃಂದ ಸ್ನಾನಕೊಳದ ಸಮೀಪ ತೀರ್ಥ ಪ್ರೋಕ್ಷಣೆಗೆ ಶಿರವೊಡ್ಡಿ ಪುನೀತರಾದರು.  ತಮಿಳುನಾಡು, ಮಂಡ್ಯ, ಬೆಂಗಳೂರು ಮುಂತಾದ ಕಡೆಗಳಿಂದ ಆಗಮಿಸಿದ ಭಕ್ತರು ಭಾಗಮಂಡಲದಲ್ಲಿ ಸ್ನಾನ ಮಾಡಿ ಭಗಂಡೇಶ್ವರನ ದರ್ಶನ ಪಡೆದು ತಲಕಾವೇರಿಗೆ ಆಗಮಿಸಿದರೆ, ಇನ್ನು ಕೆಲವರು ಮೈಸೂರು ದಸರಾ ಮುಗಿಸಿ ಬಂದಿದ್ದರು. ಬ್ರಹ್ಮಕುಂಡಿಕೆಯ ಮುಂಭಾಗದ ಸ್ನಾನಕೊಳದಿಂದ […]