ರೈತರ 850 ಎಕರೆ ಭೂಮಿ ಸ್ವಾಧೀನ ಮಾಡಲು ಹೊರಟ ಎಂಆರ್‌ಪಿಎಲ್ ವಿರುದ್ಧ ವಿದ್ಯಾ ದಿನಕರ್ ಮುಖ್ಯಮಂತ್ರಿಗೆ ದೂರು
Wednesday, June 7th, 2017ಮಂಗಳೂರು : ಎಂಆರ್‌ಪಿಎಲ್ ವಿಸ್ತರಣೆಗಾಗಿ ರೈತರ ಕೃಷಿ ಭೂಮಿಯನ್ನು ಭೂಸ್ವಾಧೀನ ಮಾಡುತ್ತಿದೆ, ಕೆಐಎಡಿಬಿಯು ಹಳೇ ಕಾನೂನನ್ನು ಬಳಕೆ ಮಾಡಿಕೊಂಡು ಭೂಸ್ವಾಧೀನ ಮಾಡಬಾರದು ಎಂದು ಮಂಗಳೂರು ವಿಶೇಷ ಆರ್ಥಿಕ ವಲಯ ವಿರೋಧಿ ಹೋರಾಟಗಾರ್ತಿ ವಿದ್ಯಾ ದಿನಕರ್ ಮುಖ್ಯಮಂತ್ರಿಗೆ ದೂರು ನೀಡಿದ್ದಾರೆ. ವಿದ್ಯಾ ದಿನಕರ್ ನೇತೃತ್ವದ ನಿಯೋಗ, ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿಯಾಗಿ ನೀಡಿದ ದೂರಿನಲ್ಲಿ ಯುಪಿಎ ಸರಕಾರ 2013 ರಲ್ಲಿ ಹೊಸ ಭೂಸ್ವಾಧೀನ ಕಾಯ್ದೆಯನ್ನು ಜಾರಿಗೆ ತಂದಿದ್ದರೂ ರಾಜ್ಯ ಸರಕಾರದ ಕೆಐಎಡಿಬಿ ಹಳೇ ಕಾನೂನಿನಂತೆಯೇ ಭೂಸ್ವಾಧೀನಕ್ಕೆ ನೋಟಿಸ್ ನೀಡಿದೆ, ಹಳೇ […]