ಸಿಎಂ ವಿಚಾರಣೆಗೆ ಹೈಕೋರ್ಟ್ ತಡೆಯಾಜ್ಞೆ

Tuesday, March 29th, 2011
ಸಿಎಂ ವಿಚಾರಣೆಗೆ ಹೈಕೋರ್ಟ್ ತಡೆಯಾಜ್ಞೆ

ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧದ ಭೂ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿ ವರದಿ ನೀಡುವಂತೆ ಲೋಕಾಯುಕ್ತ ವಿಶೇಷ ಕೋರ್ಟ್ ನೀಡಿದ್ದ ಆದೇಶಕ್ಕೆ ಹೈಕೋರ್ಟ್ ಏಕಸದಸ್ಯ ಪೀಠ ಮಂಗಳವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಕುಟುಂಬ ವರ್ಗದ ವಿರುದ್ಧದ ಭೂ ಹಗರಣದ ಕುರಿತಂತೆ ಲೋಕಾಯುಕ್ತ ಕೋರ್ಟ್ ಆದೇಶಕ್ಕೆ ತಡೆ ನೀಡಬೇಕೆಂದು ಕೋರಿ ಸಿಎಂ ಅಳಿಯ ಸೋಹನ್ ಕುಮಾರ್ ಸೋಮವಾರ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಇಂದು ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ, […]

ಲೋಕಾಯುಕ್ತ ಪೊಲೀಸರಿಂದ ಸಿ.ಎಂ. ಕುಟುಂಬದ ಭೂ ಹಗರಣ ತನಿಖೆ ಆರಂಭ

Thursday, March 24th, 2011
ಬಿ.ಎಸ್.ಯಡಿಯೂರಪ್ಪ

ಬೆಂಗಳೂರು : ಲೋಕಾಯುಕ್ತ ವಿಶೇಷ ನ್ಯಾಯಾಲಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಭೂಹಗರಣಗಳ ತನಿಖೆ ನಡೆಸಬೇಕೆಂದು ಲೋಕಾಯುಕ್ತ ಪೊಲೀಸರಿಗೆ ಗುರುವಾರ ಮಹತ್ವದ ಆದೇಶ ನೀಡಿದೆ. ವಕೀಲ ಸಿರಾಜುದ್ದೀನ್ ಬಾಷಾ ಮುಖ್ಯಮಂತ್ರಿ ಹಾಗೂ ಅವರ ಕುಟುಂಬ ಸದಸ್ಯರ ಭೂ ಹಗರಣಗಳ ವಿರುದ್ಧ ಸಲ್ಲಿಸಿರುವ ಮೊದಲ ದೂರಿನ ಆಧಾರದ ಮೇಲೆ 23ನೇ ಅಧೀನ ಕೋರ್ಟ್‌ನ ನ್ಯಾಯಾಧೀಶ ಸಿ.ಬಿ.ಹಿಪ್ಪರಗಿ ಮಾ.24ಕ್ಕೆ ಆದೇಶ ನೀಡುವುದಾಗಿ ತಿಳಿಸಿದ್ದರು. ಸಿಎಂ ಕುಟುಂಬದ ಭೂ ಹಗರಣಗಳ ಮೊದಲ ದೂರಿನ ವಿಚಾರಣೆ ಪೂರ್ಣಗೊಳಿಸಿದ ನಂತರ ಈ ತೀರ್ಪು ನೀಡಿದ ನ್ಯಾಯಾಧೀಶರು, […]

ಬಿ.ಎಸ್.ಯಡಿಯೂರಪ್ಪ ಉತ್ತರ ಸಮಾಧಾನ ತಂದಿಲ್ಲ : ಹಂಸರಾಜ್

Monday, December 20th, 2010
ರಾಜ್ಯಪಾಲ ಹಂಸರಾಜ್ ಮತ್ತು ಬಿ.ಎಸ್.ಯಡಿಯೂರಪ್ಪ

ಬೆಂಗಳೂರು : ರಾಜ್ಯಪಾಲರು ಅಕ್ರಮ ಗಣಿಗಾರಿಕೆ ಮತ್ತು ಭೂ ಹಗರಣದ ಕುರಿತು ಬರೆದಿರುವ ಪತ್ರಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಉತ್ತರ ಸಮಾಧಾನ ತಂದಿಲ್ಲ. ಹಾಗಾಗಿ ಸ್ಪಷ್ಟ ಉತ್ತರಕ್ಕಾಗಿ ಮತ್ತೆ ಪತ್ರ ಬರೆಯುವುದಾಗಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಹೇಳಿದ್ದಾರೆ. ಒಂದೆಡೆ ಅಕ್ರಮ ಗಣಿಗಾರಿಕೆ ನಡೆದಿಲ್ಲ ಅಂತಾರೆ. ಆದರೆ ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆಯಿಂದ ಕೋಟಿ, ಕೋಟಿ ಲೂಟಿಯಾಗಿರುವುದು ನನ್ನ ಗಮನಕ್ಕೆ ಬಂದಿದೆ ಎಂದು ಹೇಳುತ್ತಾರೆ. ಆ ನಿಟ್ಟಿನಲ್ಲಿ ನಾನು ರಾಜ್ಯದ ರಾಜ್ಯಪಾಲನಾಗಿ ಉತ್ಸವ ಮೂರ್ತಿಯಂತಿರಲು ಸಾಧ್ಯವಿಲ್ಲ. ಸಂವಿಧಾನಬದ್ಧವಾಗಿ ನಾನು ಕರ್ತವ್ಯ […]

ಮಾನವ ಹಕ್ಕುಗಳ ರಕ್ಷಣೆಗೆ ಸರಕಾದಿಂದ ಸರಿಯಾದ ಬೆಂಬಲ ಇಲ್ಲ : ಎಸ್. ಆರ್ ನಾಯಕ್

Saturday, November 20th, 2010
ಎಸ್. ಆರ್ ನಾಯಕ್

ಮಂಗಳೂರು: ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಎಸ್. ಆರ್ ನಾಯಕ್ ಇಂದು ಜಿಲ್ಲಾಧಿಕಾರಿ ಕಛೇರಿಯ ನ್ಯಾಯಾಲಯದಲ್ಲಿ ದೂರುದಾರರ ಅಹವಾಲುಗಳನ್ನು ಸ್ವೀಕರಿಸಿದರು. ಬಲತ್ಕಾರದ ಮದುವೆ, ಭೂ ಹಗರಣ ಹಾಗೂ ಉದ್ಯೋಗದ ಸಮಸ್ಯೆಯ ಮೂರು ಅರ್ಜಿಗಳನ್ನು ಎಸ್.ಆರ್ ನಾಯಕ್ ಸ್ವೀಕರಿಸಿದರು. ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ನಾಯಕ್ ನಾನು ಬೆಂಗಳೂರಿನಿಂದ ಇಲ್ಲಿಯವರೆಗೆ ಬಂದು ಕೇವಲ ಮೂರು ಅರ್ಜಿಗಳನ್ನು ಮಾತ್ರ ಸ್ವೀಕರಿಸುವುದು, ದ.ಕ ಜಿಲ್ಲೆಯಲ್ಲಿ ಕಾನೂನು ವ್ಯವಸ್ಥೆ, ಸುವ್ಯವಸ್ಥಿತವಾಗಿರುವುದನ್ನು ಸೂಚಿಸುತ್ತಿದೆ ಎಂದರು. 2007 ರಲ್ಲಿ ಸ್ಥಾಪನೆಯಾದ ಮಾನವ ಹಕ್ಕುಗಳ ಆಯೋಗ ಸವಲತ್ತುಗಳಿಲ್ಲದೆ ದೂರುದಾರರ […]