ಭಾರತದ ಮಂಗಳಯಾನ ಯಶಸ್ವಿ
Wednesday, November 6th, 2013ಶ್ರೀಹರಿಕೋಟ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆ ಮಂಗಳಯಾನ ಆರಂಭಗೊಂಡಿದೆ. ಮಂಗಳನ ಅಂಗಳದಲ್ಲಿ ಜೀವ ಕಣ ಪತ್ತೆಗೆ ಇಸ್ರೋ ದೇಶಿ ನಿರ್ಮಿತ ಮಾರ್ಸ್ ಆರ್ಬಿಟರ್ ನೌಕೆ(ಪಿಎಸ್ ಎಲ್ ವಿ ಸಿ25)ಯಲ್ಲಿ ಮಂಗಳನೆಡೆಗೆ ಉಪಗ್ರಹ ಹಾರಿಸಲಾಗಿದೆ. ಸುಮಾರು 40 ನಿಮಿಷಗಳ ಕಾಲದ ಉಸಿರುಬಿಗಿ ಹಿಡಿದ ವಾತಾವರಣದ ನಂತರ 44.4 ಮೀ ಎತ್ತರದ ರಾಕೆಟ್ ನಿಂದ ನೌಕೆ ಪ್ರತ್ಯೇಕಗೊಂಡು ಪಥ ಕಂಡುಕೊಂಡಿದೆ. ಈ ಮೂಲಕ ಮಂಗಳಯಾತ್ರೆ ಕೈಗೊಂಡ ವಿಶ್ವದ 6ನೇ ರಾಷ್ಟ್ರ ಹಾಗೂ ಏಷ್ಯಾದ ಪ್ರಥಮ ದೇಶವಾಗಿ […]