ಸಿಎಂ ಸಿದ್ದರಾಮಯ್ಯ ಓರ್ವ ಭಯೋತ್ಪಾದಕ: ಸಂಸದ ಕಟೀಲು ವಿವಾದಾತ್ಮಕ ಹೇಳಿಕೆ

Tuesday, March 6th, 2018
nalin-kumar

ಮಂಗಳೂರು: ಬಿಜೆಪಿ ಆಯೋಜನೆಯ ಜನಸುರಕ್ಷಾ ಯಾತ್ರೆಯಲ್ಲಿ ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯರ ವಿರುದ್ಧ ಮಾಡುವ ಟೀಕಾ ಪ್ರಹಾರಗಳು ಕರಾವಳಿಯಲ್ಲೂ ಮುಂದುವರಿದಿವೆ. ಈ ಬಾರಿ ಸಂಸದ ನಳಿನ್ ಕುಮಾರ್ ಕಟೀಲು `ಮುಖ್ಯಮಂತ್ರಿ ಸಿದ್ದರಾಮಯ್ಯ ಓರ್ವ ಭಯೋತ್ಪಾದಕ’ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಬಂಟ್ವಾಳದಲ್ಲಿ ನಡೆದ `ಮಂಗಳೂರು ಚಲೋ’ ಜನ ಸುರಕ್ಷಾ ಯಾತ್ರೆಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಭಯೋತ್ಪಾದನೆ ಮಾಡುವ ಶಕ್ತಿಗಳ ಹಿಂದಿದ್ದಾರೆ ಎಂದು ಆರೋಪಿಸಿದರು. ಮುಖ್ಯಮಂತ್ರಿ ಬಳಿ ಭಯ ಉತ್ಪಾದನೆ ಮಾಡುವ ಶಕ್ತಿ ಇದೆ ಎಂದ ಸಂಸದ […]

ಮಂಗಳೂರು ಚಲೋ ಜನಸುರಕ್ಷಾ ಯಾತ್ರೆ: ಸುಳ್ಯದಲ್ಲಿ ಪಾದಯಾತ್ರೆ

Monday, March 5th, 2018
chalo

ಮಂಗಳೂರು : ಬಿಜೆಪಿ ಹಮ್ಮಿಕೊಂಡಿರುವ ಮಂಗಳೂರು ಚಲೋ ಜನಸುರಕ್ಷಾ ಯಾತ್ರೆಯು ಇಂದು ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ಪ್ರವೇಶಿಸಿದ್ದು ಇಲ್ಲಿ ಪಾದಯಾತ್ರೆ ನಡೆಸಲಾಯಿತು. ಸಿದ್ದರಾಮಯ್ಯ ಸರ್ಕಾರದ ಹಿಂದೂ ವಿರೋಧಿ ಧೋರಣೆಯಿಂದಾಗಿ ಕರ್ನಾಟಕದಲ್ಲಿ ನಿರಂತರವಾಗಿ ಹಿಂದೂ ಕಾರ್ಯಕರ್ತರ ವ್ಯವಸ್ಥಿತ ಹತ್ಯೆಯಾಗುತ್ತಿದೆ ಎಂದು ಆಪಾದಿಸಿ ಬಿಜೆಪಿ ಮಾ. 3 ರಿಂದ ಮಂಗಳೂರು ಚಲೋ ಜನಸುರಕ್ಷಾ ಯಾತ್ರೆ ಆರಂಭಿಸಿದೆ. ಮಾ. 3 ರಂದು ಅಂಕೋಲಾ ಮತ್ತು ಕುಶಾಲನಗರದಿಂದ ಹೊರಟ ಜನಸುರಕ್ಷಾ ಯಾತ್ರೆ ಮಾ. 6 ರಂದು ಮಂಗಳೂರು ತಲುಪಲಿದೆ. ಮಂಗಳೂರಿನಲ್ಲಿ ನಡೆಯುವ […]

ಸಿದ್ದರಾಮಯ್ಯನವರಿಗೆ ನೇಗಿಲು ಹಿಡಿಯುವ ಸವಾಲು ಹಾಕಿದ ಯಡಿಯೂರಪ್ಪ

Saturday, March 3rd, 2018
yedeyorappa

ಮಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ . ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ತಲೆ ತಿರುಕನಂತೆ ಮಾತನ್ನಾಡುವ ಭ್ರಷ್ಟ ಮುಖ್ಯಮಂತ್ರಿಗೆ ರಾಜ್ಯದ ಜನರು ಮುಂದಿನ ಚುನಾವಣೆಯಲ್ಲಿ ತಕ್ಕ ಉತ್ತರ ನೀಡುತ್ತಾರೆ ಎಂದು ಕಿಡಿಕಾರಿದ್ದಾರೆ. “ಯಾರು ಮಣ್ಣಿನ ಮಕ್ಕಳು, ಯಾರು ಅಲ್ಲ ಎಂಬುದಕ್ಕಿಂತ, ರೈತ ಪರವಾಗಿ ನಾವು ಹೋರಾಟ ಮಾಡಿದ್ದೇವೆ. ರೈತರ ಸಂಕಷ್ಟಕ್ಕೆ ಸ್ಪಂದಿಸಿ, ರೈತರ ಸಾಲ ಮನ್ನಾ ಮಾಡಿದ್ದೇವೆ. ಹಲವು ರೈತಪರ ಯೋಜನೆಗಳನ್ನು ರಾಜ್ಯದಲ್ಲಿ ತಂದಿದ್ದೇವೆ,” ಎಂದು ಅವರು […]

ಮಂಗಳೂರು ಚಲೋ ಪ್ರತಿಭಟನೆಯಲ್ಲಿ ಪೊಲೀಸರ ನಡೆ ಖಂಡನೀಯ- ವೇದವ್ಯಾಸ್ ಕಾಮತ್

Friday, September 8th, 2017
vedavyas kamath

ಮಂಗಳೂರು : ಮಂಗಳೂರು ಚಲೋ ಪ್ರತಿಭಟನೆಯಲ್ಲಿ ಭಾಗವಹಿಸಿದ ಭಾರತೀಯ ಜನತಾ ಪಾರ‍್ಟಿಯ ಕಾರ‍್ಯಕರ್ತರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ ಘಟನೆ ಕೂಡ ನಡೆದಿದೆ. ವೆನ್ ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿರುವ ಕಾರ‍್ಯಕರ್ತರನ್ನು ಭೇಟಿಯಾಗಿ ವೇದವ್ಯಾಸ ಕಾಮತ್ ಆರೋಗ್ಯ ವಿಚಾರಿಸಿದರು. ವೆನ್ ಲಾಕ್ ನಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಡನೆ ಮಾತನಾಡಿದ ಮಂಗಳೂರು ನಗರ ದಕ್ಷಿಣ ಬಿಜೆಪಿ ಅಧ್ಯಕ್ಷ ಡಿ ವೇದವ್ಯಾಸ್ ಕಾಮತ್, ಪೊಲೀಸರು ಲಾಠಿ ಜಾರ್ಜ್ ಮಾಡುವ ಅಗತ್ಯವೇ ಇರಲಿಲ್ಲ. ಪೊಲೀಸರ ಈ ಕೃತ್ಯದಿಂದ ಐದು ಜನ ಕಾರ‍್ಯಕರ್ತರು […]