ಮಡೆಸ್ನಾನ: ನಿಡುಮಾಮಿಡಿ ಸ್ವಾಮೀಜಿ ದ್ವಂದ್ವ ನಿಲುವು ಶ್ರೀಗಳಿಗೆ ಶೋಭೆ ತರುವಂತದಲ್ಲ ಪೇಜಾವರ ಶ್ರೀ
Thursday, December 27th, 2012ಮಂಗಳೂರು : ಸುಬ್ರಹ್ಮಣ್ಯ ದೇವಸ್ಥಾನದಲ್ಲಿನ ಮಡೆಸ್ನಾನಕ್ಕೆ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಮಡೆಸ್ನಾನಕ್ಕೆ ಬದಲಾಗಿ ಎಡೆಸ್ನಾನ ಜಾರಿಗೊಳಿಸುವಂತೆ ಸಲಹೆ ನೀಡಿದಾಗ ದೂರವಾಣಿ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದ ನಿಡುಮಾಮಿಡಿ ಸ್ವಾಮೀಜಿ, ಇದೀಗ ಸಾರ್ವಜನಿಕ ಸಭೆಗಳಲ್ಲಿ ನಮ್ಮನ್ನು ಅವಮಾನಿಸುವಂತಹ ಮಾತುಗಳನ್ನಾಡಿರುವುದು ಶ್ರೀಗಳಿಗೆ ಶೋಭೆ ತರುವಂತದಲ್ಲ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಆರೋಪಿಸಿದರು. ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು ಈ ಆಚರಣೆಯಿಂದ ಜನರ ಭಾವನೆಗಳಿಗೆ ಧಕ್ಕೆ ಬರುವುದಾದರೆ ಅದನ್ನು ನಿಲ್ಲಿಸಿ ಎಂಜಲೆಲೆಯ ಬದಲಿಗೆ ದೇವರ […]