ಕೇರಳದಲ್ಲಿ ಕನ್ನಡ ಸಂಪೂರ್ಣ ನಿರ್ನಾಮ, ಮಂಜೇಶ್ವರದ ಗ್ರಾಮಗಳ ಕನ್ನಡದ ಹೆಸರುಗಳ ಮಲಯಾಳೀಕರಣ
Saturday, June 26th, 2021ಮಂಜೇಶ್ವರ : ಕೇರಳದಲ್ಲಿ ಕನ್ನಡವನ್ನು ಸಂಪೂರ್ಣ ನಿರ್ನಾಮ ಮಾಡ ಹೊರಟಿರುವ ಪಿಣರಾಯಿ ಸರಕಾರ ಕಾಸರಗೋಡು ಜಿಲ್ಲೆಯ ಮಂಜೇಶ್ವರ ಹಾಗೂ ಅಲ್ಲಿನ ಕೆಲವು ಗ್ರಾಮಗಳ ಕನ್ನಡದ ಹೆಸರುಗಳನ್ನು ಮಲಯಾಳಂ ಭಾಷೆಗೆ ಬದಲಾಯಿಸಿ ನಾಮಫಲಕಗಳನ್ನು ಅಳವಡಿಸುತ್ತಿದೆ. ಕೇರಳ ಸರ್ಕಾರದ ಈ ನಡೆಯನ್ನು ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಖಂಡಿಸಿದೆ. `ಮಧೂರು-ಮಧುರಮ್, ಮಲ್ಲ-ಮಲ್ಲಮ್, ಕಾರಡ್ಕ-ಕಡಗಮ್, ಬೇದಡ್ಕ-ಬೆಡಗಮ್, ಪಿಲಿಕುಂಜೆ-ಪಿಲಿಕುನ್ನು, ಆನೆಬಾಗಿಲು-ಆನೆವಾಗಿಲ್, ಮಂಜೇಶ್ವರ-ಮಂಜೇಶ್ವರಮ್, ಹೊಸದುರ್ಗ-ಪುದಿಯಕೋಟ, ಕುಂಬಳೆ-ಕುಂಬ್ಳಾ, ಸಸಿಹಿತ್ಲು-ಶೈವಲಪ್, ನೆಲ್ಲಿಕುಂಜ-ನೆಲ್ಲಿಕುನ್ನಿ’ ಇವುಗಳ ಮೂಲ ಹೆಸರನ್ನೆ ಬದಲಾಯಿಸಿ ಕನ್ನಡದ ಕುರುಹು ಕೂಡ ಇರಬಾರದು ಎನ್ನುವುದು ಪಿಣರಾಯಿ ಸರಕಾರದ ನಡೆಯಾಗಿದೆ ಎಂದು […]