ಕಾಸರಗೋಡು : ಮಲಯಾಳಿ ಶಿಕ್ಷಕನ ವಿರುದ್ಧ ವಿದ್ಯಾರ್ಥಿಗಳು, ಪೋಷಕರ ತೀವ್ರ ಪ್ರತಿಭಟನೆ

Wednesday, October 30th, 2019
karagagod

ಕಾಸರಗೋಡು : ಮೂಡಂಬೈಲು ಸರಕಾರಿ ಕನ್ನಡ ಪ್ರೌಢಶಾಲೆಗೆ ನೇಮಕಗೊಂಡಿರುವ ಕನ್ನಡೇತರ ಭೌತಶಾಸ್ತ್ರ ಶಿಕ್ಷಕ ಇಂದು ಶಾಲೆಗೆ ಹಾಜರಾಗುತ್ತಿದ್ದಂತೆಯೇ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು, ಪೋಷಕರು ಹಾಗೂ ಉರಿನ ಕನ್ನಡ ಅಭಿಮಾನಿಗಳು ತೀವ್ರ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಹಿನ್ನೆಲೆಯಲ್ಲಿ ಶಿಕ್ಷಕ ವಾಪಸ್ ತೆರಳಿದ್ದು, ನಿಯಮದಂತೆ ಕರ್ತವ್ಯಕ್ಕೆ ಹಾಜರಾಗಲು ನಾಳೆ ಮತ್ತೆ ಪೊಲೀಸ್‌ ರಕ್ಷಣೆಯೊಂದಿಗೆ ಬರಲಿದ್ದಾರೆ ಎಂಬ ಮಾಹಿತಿಗಳಿವೆ. ಈ ಹಿನ್ನೆಲೆಯಲ್ಲಿ ನಾಳೆ (ಅ.31) ಬೆಳಗ್ಗೆ 9 ಗಂಟೆಯಿಂದಲೇ ಶಾಲೆಯಲ್ಲಿ ಊರವರು, ಕನ್ನಡಾಭಿಮಾನಿಗಳು ಸೇರಿ ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ ಮೂಡಂಬೈಲ್ ಸರಕಾರಿ ಕನ್ನಡ ಪ್ರೌಢಶಾಲೆಗೆ […]

ಜೂ.8 ರಂದು ಕರ್ನಾಟಕ ರಕ್ಷಣಾ ವೇದಿಕೆಯಿಂದ ‘ಕಾಸರಗೋಡು ಚಲೋ’

Monday, June 5th, 2017
kannada

ಮಂಗಳೂರು : ಕಾಸರಗೋಡಿನಲ್ಲಿರುವ ಅಲ್ಪಸಂಖ್ಯಾತ  ಕನ್ನಡಿಗರ ಮೇಲೆ  ಮಲಯಾಳಿ ಭಾಷಿಗರ ದಬ್ಬಾಳಿಕೆಯನ್ನು ಖಂಡಿಸಿ ಜೂ.8 ರಂದು ಉಡುಪಿಯಿಂದ ಕಾಸರಗೋಡಿನವರೆಗೆ `ಕಾಸರಗೋಡು ಚಲೋ’ ಮಾಡಲಾಗುವುದು ಹಾಗೂ ಸಂಜೆಯವರೆಗೆ ಗಡಿ ಬಂದ್‌ ಮಾಡಲಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಹೇಳಿದ್ದಾರೆ. ಕಾಸರಗೋಡು ಕರ್ನಾಟಕದ ಭಾಗವಾಗಿದ್ದರೂ, ಸರ್ಕಾರದ ಬೇಜವಾಬ್ದಾರಿಯಿಂದ ಅದು ಕೇರಳ ರಾಜ್ಯಕ್ಕೆ ಸೇರಿಹೋಯಿತು. ಆದರೆ, ಗಡಿನಾಡಿನ ಸ್ವಾಭಿಮಾನಿ ಕನ್ನಡಿಗರ ಹೋರಾಟದ ಫಲವಾಗಿ ಅಲ್ಲಿ ಇಂದಿಗೂ ಕನ್ನಡ ಶಾಲೆಗಳು ಉಳಿದಿವೆ. ಇದೀಗ ಮಲಯಾಳಿ ಭಾಷಿಗರಿಂದ ಕನ್ನಡ […]