ಮಾಡೂರಿನ ವ್ಯಕ್ತಿಯ ಮೃತದೇಹ ನೇತ್ರಾವತಿ ನದಿಯಲ್ಲಿ ಪತ್ತೆ

Wednesday, May 15th, 2019
Lokesh-body

ಮಂಗಳೂರು  : ಕೋಟೆಕಾರ್ ಸಮೀಪದ ಮಾಡೂರಿನಿಂದ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರ ಮೃತದೇಹ ರಾ.ಹೆ.66ರ ಉಳ್ಳಾಲ ನೇತ್ರಾವತಿ ನದಿಯಲ್ಲಿ ಮೇ 15 ರ ಬುಧವಾರ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ಕೋಟೆಕಾರ್ ಸಮೀಪದ ಮಾಡೂರಿನ ಲೋಕೇಶ್ ಎಂದು ಗುರುತಿಸಲಾಗಿದೆ. ಇವರು ಕಳೆದ ಮೂರು ದಿನದ ಹಿಂದೆ ಕಾಣೆಯಾಗಿದ್ದು, ನದಿಗೆ ಹಾರಿ ಆತ್ಮಹತ್ಯೆಗೈದಿರಬೇಕು ಎಂದು ಶಂಕಿಸಲಾಗಿದೆ. ಕೃತ್ಯಕ್ಕೆ ಕಾರಣ ಏನು ಎಂದು ತಿಳಿದು ಬಂದಿಲ್ಲ. ಮೃತದೇಹ ಸಂಪೂರ್ಣವಾಗಿ ಊದಿಕೊಂಡಿದ್ದು ಗುರುತು ಪತ್ತೆಯಾಗ್ದ ಸ್ಥಿತಿಯಲ್ಲಿದೆ. ಉಳ್ಳಾಲ ನೇತ್ರಾವತಿ ಸೇತುವೆಯಡಿ ಮೃತದೇಹ ತೇಲುವುದನ್ನು ಕಂಡ ಸಾರ್ವಜನಿಕರು […]

ಸೌದಿ ಅರೇಬಿಯಾದಲ್ಲಿ ನಡೆದ ಅಪಘಾತದಲ್ಲಿ ಮಾಡುರಿನ ಯುವಕ ಬಲಿ

Saturday, February 23rd, 2013
Mohammad Saleem

ಮಂಗಳೂರು : ಮಾಡೂರು ಜಂಕ್ಷನ್ ನಿವಾಸಿ ಎಂ.ಯು.ಅಬ್ಬಾಸ್ ಅವರ ಪುತ್ರ ಮಹಮ್ಮದ್ ಸಲೀಂ ಎಂಬಾತ ಸೌದಿ ಅರೇಬಿಯಾದಲ್ಲಿ ನಡೆದ ಅಪಘಾತವೊಂದರಲ್ಲಿ ಮೃತಪಟ್ಟ ಘಟನೆ ಗುರುವಾರ ನಡೆದಿದೆ. ಈತ  ಮೂರು ತಿಂಗಳ ಹಿಂದೆಷ್ಟೇ ಉದ್ಯೋಗ ನಿಮಿತ್ತ ವಿದೇಶಕ್ಕೆ ತೆರಳಿದ್ದ.  ಕಮೀಸ್ ಮಿಶೀಯತ್ ನಗರದಲ್ಲಿ ಸೇಲ್ಸ್‌ಮೆನ್ ಆಗಿ ಕೆಲಸದಲ್ಲಿದ್ದ ಈತನಿಗೆ ಶುಕ್ರವಾರ ಕೆಲಸಕ್ಕೆ ರಜೆಯಿತ್ತು ಆದ ಕಾರಣ ಮೊನ್ನೆ ರಾತ್ರಿ ನಝ್ರಾನ್ ಎಂಬಲ್ಲಿ ಕ್ರಿಕೆಟ್ ಆಡಲೆಂದು ತನ್ನ ಸ್ನೇಹಿತರಾದ ಮಾಡೂರಿನ ಇಮ್ರಾನ್, ಸಲ್ಮಾನ್ ಮತ್ತು ಇನ್ನೋರ್ವ ಕೇರಳ ಮೂಲದ ಸ್ನೇಹಿತನ […]