ಮಾತಾ ಅಮೃತಾನಂದಮಯಿ ಮಠದ ವತಿಯಿಂದ ಗುರು ಪೂರ್ಣಿಮಾ ಉತ್ಸವ

Sunday, July 21st, 2024
Mataamrutanandamai

ಮಂಗಳೂರು : ಗುರುಪೂರ್ಣಿಮೆಯು ವ್ಯಕ್ತಿಯೊಳಗಿನ ದೋಷಗಳನ್ನೆಲ್ಲ ಪರಿಹರಿಸಿ ಆತನನ್ನು ಸ್ವಯಂಪೂರ್ಣ ಮತ್ತು ಸರ್ವಾಂಗೀಣ ವ್ಯಕ್ತಿಯಾಗಿ ರೂಪಿಸುವ ದಿವ್ಯದಿನವಾಗಿದೆ. ಗುರು ಮತ್ತು ಗುರಿ ಎರಡೂ ಆತನನ್ನು ಗೊಂದಲರಹಿತನನ್ನಾಗಿ ಮಾಡುತ್ತದೆ ಎಂದು ಮಾತಾ ಅಮೃತಾನಂದಮಯಿ ಮಠದ ಸ್ವಾಮಿನಿ ಮಂಗಳಾಮೃತ ಪ್ರಾಣ ಅವರು ಹೇಳಿದರು. ನಗರದ ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದ ಸಭಾಭವನದಲ್ಲಿ ಮಾತಾ ಅಮೃತಾನಂದಮಯಿ ಮಠದ ವತಿಯಿಂದ ಜುಲೈ21 ರಂದು ಭಾನುವಾರ ಗುರು ಪೂರ್ಣಿಮೆಯನ್ನು ಶ್ರದ್ಧಾ ಭಕ್ತಿಗಳಿಂದ ಆಚರಿಸಲಾಯಿತು. ಮಠದ ಮುಖ್ಯಸ್ಥರಾದ ಸಂಪೂಜ್ಯ ಸ್ವಾಮಿನಿ ಮಂಗಳಾಮೃತ ಪ್ರಾಣರವರು ಆಶೀರ್ವಚನವಿತ್ತು ಇಂದು […]

‘ಅಮೃತಾನಂದಮಯಿ ಅವಮಾನಿಸುವ ಪುಸ್ತಕ ನಿಷೇಧಿಸಿ’

Monday, March 10th, 2014
Amrtanandamayi

ಬೆಂಗಳೂರು: ಲಕ್ಷಾಂತರ ಜನರ ‘ಅಮ್ಮ’ ಮಾತಾ ಅಮೃತಾನಂದಮಯಿಯವರು ಜಗತ್ತಿನಾದ್ಯಂತ ವಿವಿಧ ಭಾಷೆ, ಜಾತಿ, ಮತಗಳ ಅನುಯಾಯಿಗಳನ್ನು ಹೊಂದಿರುವ ಜಗದ್ವಂದ್ಯರು. ತಮ್ಮ ಅಮಿತ ವಾತ್ಸಲ್ಯ ಮತ್ತು ದೈವಿಕ ಸ್ಪರ್ಶದಿಂದ ಲಕ್ಷಾಂತರ ದುಃಖತಪ್ತ ಜೀವಗಳಿಗೆ ಸಾಂತ್ವನ ನೀಡುತ್ತಿರುವವರು. ಪೂಜ್ಯ ಮಾತಾ ಅಮೃತಾನಂದಮಯಿ ಅವರನ್ನು ಅವಮಾನಿಸುವ ಷಡ್ಯಂತ್ರವನ್ನು ಸಹಿಸುವಂತಿಲ್ಲ. ಅವರನ್ನು ಅವಮಾನಿಸುವ ಪುಸ್ತಕವನ್ನು ನಿಷೇಧಿಸಬೇಕು ಎಂದು ಆರೆಸ್ಸೆಸ್ ಸರಕಾರ್ಯವಾಹ ಸುರೇಶ್ (ಭಯ್ಯಾಜಿ) ಜೋಶಿ ಆಗ್ರಹಿಸಿದ್ದಾರೆ. ಮನುಕುಲದ ದುಃಖ ದುಮ್ಮಾನಗಳನ್ನು ತಗ್ಗಿಸಲು ಶ್ರಮಿಸುತ್ತಿರುವ ಈ ‘ಅಪ್ಪುಗೆಯ ಅಮ್ಮ’ನನ್ನು ವಿಶ್ವಸಂಸ್ಥೆ ಮತ್ತು ಅನೇಕ ದೇಶಗಳು […]

ಅಮ್ಮ ಮಂಗಳೂರಿನಲ್ಲಿ-ಫೆಬ್ರವರಿ 15 ಮತ್ತು 16 ರಂದು

Thursday, January 30th, 2014
Matha Amruthanandamayi

ಮಂಗಳೂರು: ವಿಶ್ವದ ಅಗ್ರಗಣ್ಯ ಆದ್ಯಾತ್ಮಿಕ ನೇತಾರರಲ್ಲೋರ್ವರಾದ, ಕೋಟ್ಯಾಂತರ ಭಕ್ತರ ಆರಾದ್ಯ ಮಾತೆಯಾಗಿರುವ ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ಯವರು ಇದೇ ಬರುವ, ಫೆಬ್ರವರಿ 15 (ಶನಿವಾರ)  ಮತ್ತು 16 (ಭಾನುವಾರ) ರಂದು ಮಂಗಳೂರಿನ ಬ್ರಹ್ಮಸ್ಥಾನ ಮಹೋತ್ಸವ ಕಾರ್ಯಕ್ರಮದಲ್ಲಿ ಭಕ್ತರನ್ನು ಅನುಗ್ರಹಿಸಲಿರುವರು. (ಸ್ಥಳ: ನಗರದ ಬೋಳೂರು ಸುಲ್ತಾನ್ ಬತ್ತೇರಿಯ ಬಳಿ ಇರುವ ಅಮೃತ ವಿದ್ಯಾಲಯಂ ವಠಾರ) ಈ ಸಾಲಿನ ಅಮ್ಮನ ಭಾರತ ಯಾತ್ರೆಯು ಮಂಗಳೂರಿನ ಕಾರ್ಯಕ್ರಮದೊಂದಿಗೆ ಪ್ರಾರಂಭಗೊಳ್ಳುವುದರಿಂದ ವಿಶೇಷತೆಯನ್ನು ಪಡೆದಿದೆ. ಅಮ್ಮನವರ ಸತ್ಸಂಗ – ಭಜನೆ, ಪ್ರವಚನ, ಮಾನಸ […]

ಜಗತ್ತು ಸುಂದರವಾಗಬೇಕಾದರೆ ಮನುಷ್ಯನಲ್ಲಿ ಹೃದಯವಂತಿಕೆ ಇರಬೇಕು :ಮಾತಾ ಅಮೃತಾನಂದಮಯಿ

Monday, February 11th, 2013
Matha Amritanandamayi

ಮಂಗಳೂರು : ಇತ್ತೀಚೆಗಿನ ವರ್ಷಗಳಲ್ಲಿ ಬುದ್ಧಿವಂತಿಕೆಗೆ ಹೆಚ್ಚು ಒತ್ತು ಕೊಡಲಾಗುತ್ತಿದೆ. ಆದರೆ ಜಗತ್ತು ಸುಂದರವಾಗಬೇಕಾದರೆ, ತಾಳ್ಮೆ, ಸಹನೆಗಳು ಹೆಚ್ಚಾಗಬೇಕಾದರೆ ಮನುಷ್ಯನಲ್ಲಿ ಹೃದಯವಂತಿಕೆ ಇರಬೇಕು. ಬುದ್ಧಿವಂತಿಕೆಯು ಎರಡಲಗಿನ ಕತ್ತಿಯಂತೆ. ಅದು ಕೆಲವೊಮ್ಮೆ ಸಮಾಜವನ್ನು ವಿಘಟನೆಗೊಳಿಸಲೂಬಹುದು. ಆದರೆ ಹೃದಯವಂತಿಕೆ ಎನ್ನುವುದು ಸೂಜಿಯಂತೆ. ಅದು ಪ್ರೀತಿಯಿಂದ ಮನುಷ್ಯರನ್ನು ಜೋಡಿಸಬಲ್ಲುದು ಎಂದು ಮಾತಾ ಅಮೃತಾನಂದಮಯಿ ಹೇಳಿದರು. ಬೋಳೂರಿನಲ್ಲಿರುವ ಅಮೃತ ವಿದ್ಯಾಲಯದಲ್ಲಿ ಶನಿವಾರ ನಡೆದ ಸತ್ಸಂಗ ಕಾರ್ಯಕ್ರಮದಲ್ಲಿ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ಸಮಗ್ರ ಜಗತ್ತು ಏಕಭಾವದ ವಿನ್ಯಾಸದಿಂದ ರೂಪುಗೊಂಡಿದೆ. ಬಣ್ಣಗಳಲ್ಲಿ ವಿವಿಧ ಬಗೆಗಳಿದ್ದು […]