ಕನ್ನಡವೇ ನಿತ್ಯ, ಕನ್ನಡವೇ ಸತ್ಯ, ಮತ್ಯೇಕೆ ಕನ್ನಡಿಗರೇ ನಿಮಗೆ ಆಂಗ್ಲದ ದಾಸ್ಯ?
Friday, November 1st, 2019ಮಂಗಳೂರು : ಇಂದು ಕರ್ನಾಟಕ ಮಾತ್ರವಲ್ಲದೇ ಇಡೀ ದೇಶದಲ್ಲಿ ಆಂಗ್ಲ ಭಾಷೆಯಲ್ಲಿ ಮಾತನಾಡುವುದು, ಓದುವುದು, ಚಲನಚಿತ್ರ ನೋಡುವುದು ಮತ್ತು ಆಂಗ್ಲ ಸಂಸ್ಕೃತಿಗನುಸಾರ ವರ್ತಿಸುವುದು ಇವುಗಳು ಅಲ್ಲಲ್ಲಿ ಮೊಳಕೆಯೊಡೆಯುತ್ತಿದೆ. ನನ್ನ ಮಗ ಅಥವಾ ಮಗಳು ಆಂಗ್ಲದಲ್ಲಿ ನಿರರ್ಗಳವಾಗಿ ಮಾತನಾಡಬೇಕು, ನಾಲ್ಕು ಜನರ ಮುಂದೆ ಎದ್ದು ಕಾಣಬೇಕು, ಎಂಬ ಕಲ್ಪನೆಗಳನ್ನು ಇಟ್ಟುಕೊಂಡು ಆಂಗ್ಲ ಮಾಧ್ಯಮದ ವೈಭವೋಪೇತ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ಕಲಿಸುವುದರಲ್ಲಿ ಶ್ರೇಷ್ಠವೆಂದು ತಿಳಿಯುತ್ತಿದ್ದಾರೆ. ಎಲ್ಲೆಡೆ ಆಂಗ್ಲ ಮಾಧ್ಯಮದಿಂದ ಪಾಶ್ಚಾತ್ಯದ ಭೂಮಿಯ ವೈಭವೋಪೇತ ಶಾಲೆಗಳ ರೆಂಬೆಟೊಂಗೆ ಹಬ್ಬಿದೆ. ಇಂದಿನ ಸ್ಪರ್ಧಾತ್ಮಕ […]