ನ್ಯಾಯವಾದಿಗಳೇ ಕಾನೂನನ್ನು ಕೈಗೆತ್ತಿಕ್ಕೊಂಡ ಅನಾಗರಿಕ ಘಟನೆ
Saturday, March 3rd, 2012ಬೆಂಗಳೂರು : ಮಾಜಿ ಸಚಿವ ಜನಾರ್ಧನರೆಡ್ಡಿ ಅವರನ್ನು ನ್ಯಾಯಾಲಯಕ್ಕೆ ಕರೆತರುವುದನ್ನು ಚಿತ್ರೀಕರಣ ಮಾಡಲು ಹೋಗಿದ್ದ ಮಾಧ್ಯಮ ಸಿಬ್ಬಂದಿ ಮೇಲೆ ವಕೀಲರು ಬೇಕಾಬಿಟ್ಟಿ ಹಲ್ಲೆ ಮಾಡಿ ಅನಾಗರಿಕ ವರ್ತನೆ ತೋರಿಸಿದ್ದಾರೆ. ತಡೆಯಲು ಹೋದ ಪೊಲೀಸರ ಮೇಲೂ ಮುಗಿಬಿದ್ದಿದ್ದಾರೆ. ಜನಸಾಮಾನ್ಯರಿಗೆ ನ್ಯಾಯ ನೀಡಬೇಕಾದ ನ್ಯಾಯವಾದಿಗಳೇ ಕಾನೂನನ್ನು ಕೈಗೆತ್ತಿ ಗೂಂಡಾವೃತ್ತಿ ತೋರಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಜನಾರ್ದನ ರೆಡ್ಡಿ ಅವರನ್ನು ಸಿವಿಲ್ ಕೋರ್ಟ್ ಕಾಂಪೆಕ್ಸ್ ನಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಕರೆತರಲಾಯಿತು. ಈ ಸಮಯಕ್ಕೆ ಸರಿಯಾಗಿ ಕೋರ್ಟ್ ಕಾಂಪೆಕ್ಸ್ ಪಾರ್ಕಿಂಗ್ ಸ್ಥಳದಲ್ಲಿ ಇಬ್ಬರು […]