ವಿವಾಹಿತ ಮಹಿಳೆಯನ್ನು ಮಾತನಾಡುತ್ತಲೇ ಚಾಕುವಿನಿಂದ ಇರಿದು ಸಾಯಿಸಿದ ಆಟೋ ಚಾಲಕ

Monday, June 27th, 2022
shakunthala

ಬಂಟ್ವಾಳ: ಬಂಟ್ವಾಳ ಸಮೀಪ ವಿವಾಹಿತ ಮಹಿಳೆಯೊಬ್ಬರ ಮೇಲೆ ನಡುರಸ್ತೆಯಲ್ಲೇ ಆಟೋ ಚಾಲಕನೊಬ್ಬ ಮಾರಕಾಸ್ತ್ರಗಳಿಂದ ಧಾಳಿ ನಡೆಸಿದ ಪರಿಣಾಮ ಮಹಿಳೆ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಸಾವನ್ನಪ್ಪಿದ ಘಟನೆ ಮಾಣಿ ಬಳಿ ನೆರಳಕಟ್ಟೆಯಲ್ಲಿ ಸೋಮವಾರ ನಡೆದಿದೆ. ಸಾವನ್ನಪ್ಪಿದ ಮಹಿಳೆ ಮಾಣಿ ನಿವಾಸಿ ದಿವಂಗತ ತ್ಯಾಂಪ ಪೂಜಾರಿಯವರ ಮಗಳು ಅನಂತಾಡಿಯ ದೇವಿನಗರದಲ್ಲಿ ವಾಸಿಸುತ್ತಿರುವ ಶಕುಂತಲ (35) ಎಂದು ತಿಳಿದು ಬಂದಿದೆ. ಸೋಮವಾರ ಸಂಜೆ ಬಂಟ್ವಾಳ ತಾಲೂಕಿನ ಪುತ್ತೂರು ಬಿಸಿರೋಡ್ ರಸ್ತೆಯ ಮಾಣಿ ಬಳಿಯ ನೇರಳಕಟ್ಟೆಯ ‘’ಜನಪ್ರಿಯ ಹಾಲ್’’ ಬಳಿ ಶಕುಂತಾಳ […]

ಬೈಕಂಪಾಡಿಯಲ್ಲಿ ಯುವಕನನ್ನು ಮಾರಕಾಸ್ತ್ರಗಳಿಂದ ಕಡಿದು ಕೊಲೆ

Tuesday, June 7th, 2022
weapon Attack

ಸುರತ್ಕಲ್ : ಬೈಕಂಪಾಡಿಯ ಮೀನಕಳಿಯ ಬಳಿ ಯುವಕನೊಬ್ಬನನ್ನು ಮಾರಕಾಸ್ತ್ರಗಳಿಂದ ಕಡಿದು ಕೊಲೆಗೆ ಯತ್ನಿಸಿದ ಘಟನೆ ಜೂ 7 ರ ಸೋಮವಾರ ರಾತ್ರಿ ನಡೆದಿದೆ. ಕುಳಾಯಿಯ ರಾಜಾ ಯಾನೆ ರಾಘವೇಂದ್ರ ಬಂಗೇರ ಅವರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಎಜೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಮವಾರ ರಾತ್ರಿ 7.30 ರ ಸುಮಾರಿಗೆ ಬೈಕಂಪಾಡಿ ಬಳಿಯಿಂದ ಮೀನಕಳಿಯ ರಸ್ತೆಯಾಗಿ ಹೋಗುತ್ತಿದ್ದಾಗ ರಾಘವೇಂದ್ರ ಅವರ ಪರಿಚಯಸ್ಥರು ಎನ್ನಲಾದ ದುಷ್ಕರ್ಮಿಗಳು ದ್ವಿಚಕ್ರ ವಾಹನದಲ್ಲಿ ಬಂದು ಅಡ್ಡಗಟ್ಟಿ ತಲವಾರು, ಮತ್ತು ಚಾಕುವಿನಿಂದ ಮುಖ, ತಲೆ […]

ಮಾರಕಾಸ್ತ್ರಗಳಿಂದ ಕಡಿದು ಎಲ್ಐಸಿ ಏಜೆಂಟ್ ಕೊಲೆ

Thursday, January 13th, 2022
Shantappa-Gowda

ಬೆಳ್ತಂಗಡಿ : ವ್ಯಕ್ತಿಯೋರ್ವನನ್ನು  ಮಾರಕಾಸ್ತ್ರಗಳಿಂದ ಕಡಿದು ಕೊಲೆ ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನ ನೇಲ್ಯಡ್ಕದ ದೇವಸ್ಯ ಎಂಬಲ್ಲಿ ನಡೆದಿದೆ. ಕೊಲೆಯಾದ ವ್ಯಕ್ಯಿ ಕೃಷಿಕ ಮತ್ತು ಎಲ್ಐಸಿ ಏಜೆಂಟ್ ಪ್ರತಿನಿಧಿಯಾಗಿರುವ ಶಾಂತಪ್ಪ ಗೌಡ ದೇವಸ್ಯ(40) ಎಂದು ಗುರುತಿಸಲಾಗಿದೆ. ಜಾಗದ ವಿಚಾರವಾಗಿ ಕೊಲೆ ಮಾಡಿರುವ ಬಗ್ಗೆ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಧರ್ಮಸ್ಥಳ ಠಾಣೆಯ ಪಿಎಸ್ಐ ಕೃಷ್ಣಕಾಂತ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಕೊಲೆ ಮಾಡಿದ ಆರೋಪಿ ಜಯಚಂದ್ರ ಎಂಬಾತ ಪರಾರಿಯಾಗಿದ್ದಾನೆ.

ಮಹಿಳೆಯ ಮನೆಗೆ ಅಕ್ರಮ ಪ್ರವೇಶಿಸಿ ಕೊಲೆ ಯತ್ನ, ಏಳು ಮಂದಿಯ ಬಂಧನ

Wednesday, June 2nd, 2021
Shaktinagara Attackers

ಮಂಗಳೂರು : ಮಹಿಳೆಯೊಬ್ಬರ ಮನೆಗೆ ಅಕ್ರಮ ಪ್ರವೇಶಿಸಿ ಮನೆಯಲ್ಲಿದ್ದ ವಸ್ತುಗಳನ್ನು ಧ್ವಂಸ ಗೊಳಿಸಿ, ಮಹಿಳೆಗೆ  ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ ಘಟನೆಗೆ ಸಂಬಂಧಿಸಿ 9 ಮಂದಿಗಳ ಪೈಕಿ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೋಡಿಕಲ್ ನಿವಾಸಿ ರಂಜಿತ್ ಯಾನೆ ರಂಜು ಯಾನೆ ತಮ್ಮು (28), ಉರ್ವಸ್ಟೋರ್‌ನ ಸುಂಕದಕಟ್ಟೆ ನಿವಾಸಿ ಅವಿನಾಶ್ ಯಾನೆ ಅವಿ (23), ಪ್ರಜ್ವಲ್ ಯಾನೆ ಪಚ್ಚು(24), ದೀಕ್ಷಿತ್ ಯಾನೆ ದೀಚು(21), ಹೇಮಂತ್ ಯಾನೆ ಹೋಮು(19), ಧನು(19) ಹಾಗೂ ಯತಿರಾಜ್ ಯಾನೆ ಯತಿ(23) ಬಂಧಿತರು. ಬಂಧಿತರಿಂದ ಮಾರಕಾಸ್ತ್ರ ಹಾಗೂ […]

ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ಕೊಲೆ ಆರೋಪಿ ಮೇಲೆ ಗುಂಡು ಹಾರಿಸಿದ ಪೊಲೀಸರು

Tuesday, March 3rd, 2020
azmad

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದು ಬೆಳ್ಳಂಬೆಳಗ್ಗೆ ಗುಂಡಿನ ಶಬ್ಧ ಕೇಳಿ ಬಂದಿದೆ. ಪೊಲೀಸರು ಕೊಲೆ ಆರೋಪಿ ಮೇಲೆ ಫೈರಿಂಗ್ ಮಾಡಿದ್ದಾರೆ. ಯುನೀಸ್ ಬಟ್ಟಿ ಎಂಬ ಕೊಲೆ ಪ್ರಕರಣದ ಆರೋಪಿಯ ಮೇಲೆ ಪೊಲೀಸರು ಇಂದು ಮುಂಜಾನೆ ಗುಂಡು ಹಾರಿಸಿದ್ದಾರೆ. ದುಷ್ಕರ್ಮಿಗಳ ಒಂದು ಗುಂಪು ಎರಡು ದಿನಗಳ ಹಿಂದೆ ಡಿಜೆ ಹಳ್ಳಿಯಲ್ಲಿ ಮಾರಕಾಸ್ತ್ರಗಳಿಂದ ಬಟ್ಟಿ ಅಮ್ಜಾದ್ ಎಂಬಾತನನ್ನು ಕೊಲೆ ಮಾಡಿತ್ತು. ಕೊಲೆ ಮಾಡಿದ್ದ ಗ್ಯಾಂಗ್ನ ಲೀಡರ್ ಈ ಯುನೀಸ್ ಎಂಬುದು ಬೆಳಕಿಗೆ ಬಂದಿತ್ತು. ಡಿಜೆ ಹಳ್ಳಿ ಠಾಣಾ […]

ಬೆಂಗಳೂರಿನ ರೌಡಿಶೀಟರ್ ಬರ್ಬರ ಹತ್ಯೆ : ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ

Tuesday, December 17th, 2019
bharath

ಬೆಂಗಳೂರು : ಬೆಂಗಳೂರಿನಲ್ಲಿ ಸೋಮವಾರ ರಾತ್ರಿ ಮತ್ತೆ ಲಾಂಗು-ಮಚ್ಚುಗಳು ಝಳಪಿಸಿವೆ. ಹಲವರು ರೌಡಿಶೀಟರ್ ಭರತ್ ಅಲಿಯಾಸ್ ಕೋಗಿಲು ಭರತ್ ಎಂಬ ರೌಡಿಶೀಟರ್ನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಕೆಲವು ಕೊಲೆ ಪ್ರಕರಣಗಳಲ್ಲಿ ಸಿಕ್ಕಿಬಿದ್ದಿದ್ದ ಭರತ್ ಎಂಬ ರೌಡಿಶೀಟರ್ ಸೋಮವಾರ ರಾತ್ರಿ ಸಂಪಿಗೆಹಳ್ಳಿಯ ಬಾರ್ನ ಎದುರು ಕೊಲೆಯಾಗಿದ್ದಾನೆ. ಸಂಪಿಗೆಹಳ್ಳಿಯ ಚೌಡೇಶ್ವರಿ ಬಾರ್ ಮುಂಭಾಗದಲ್ಲಿ ಭರತ್ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಭರತ್ ವಿರುದ್ಧ ಯಲಹಂಕ, ಸಂಪಿಗೆಹಳ್ಳಿ ಠಾಣೆಗಳಲ್ಲಿ ಕೇಸ್ ದಾಖಲಾಗಿದ್ದವು. ನಿನ್ನೆ ರಾತ್ರಿ 9.30ರ ಸುಮಾರಿಗೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಆತನನ್ನು […]

ಬೆಂಗಳೂರು : ಖಾರದ ಪುಡಿ ಎರಚಿ ರೌಡಿಶೀಟರ್ ನ ಬರ್ಬರ ಹತ್ಯೆ

Monday, September 23rd, 2019
Dileep

ಬೆಂಗಳೂರು : ಖಾರದ ಪುಡಿ ಎರಚಿ ತಡರಾತ್ರಿ ರೌಡಿಶೀಟರ್ವೋರ್ವನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ, ಯಲಹಂಕ ರೈಲ್ವೆ ಸ್ಟೇಷನ್ ಬಳಿ ನಡೆದಿದೆ. ಯಲಹಂಕದ ದಿಲೀಪ್ ಕೊಲೆಯಾಗೀಡಾಗಿರುವ ರೌಡಶೀಟರ್. ಈತನ ಮೇಲೆ ಸರಗಳ್ಳತನಗಳ ಹಿನ್ನೆಲೆಯಲ್ಲಿ ಯಲಹಂಕ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ತೆರೆಯಲಾಗಿತ್ತು. ಯಲಹಂಕದ ಸುತ್ತಮುತ್ತಲಿನಲ್ಲಿ ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದ. ಸರಗಳ್ಳತನ ಪ್ರಕರಣದಲ್ಲಿ ರೌಡಿಪಟ್ಟಿಯಲ್ಲಿ ಗುರ್ತಿಸಿಕೊಂಡಿದ್ದ ದಿಲೀಪ್, ಇತ್ತೀಚೆಗೆ ಯಾವುದೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗದೇ ಆಟೋ ಓಡಿಸಿಕೊಂಡು ಇದ್ದ. ನಿನ್ನೆ ರಾತ್ರಿ ಮನೆಗೆ ಹೋಗದೆ ರಸ್ತೆ ಬದಿಯಲ್ಲೇ […]

ಮುನ್ನೆಚ್ಚರಿಕೆಯ ಕ್ರಮವಾಗಿ ನಗರದ ಪ್ರಮುಖ ಬಾರ್‌ಗಳಿಗೆ ಪೊಲೀಸ್ ದಾಳಿ

Thursday, June 20th, 2019
police raid

ಮಂಗಳೂರು : ಮುನ್ನೆಚ್ಚರಿಕೆಯ ಕ್ರಮವಾಗಿ ಹಾಗೂ ಸಮಾಜ ವಿರೋಧಿ  ಚಟುವಟಿಕೆಗಳನ್ನು ತಡೆಗಟ್ಟಲು  ನಗರದ ಪ್ರಮುಖ ಬಾರ್‌ಗಳಲ್ಲಿ ಪೊಲೀಸರು ಧಿಡೀರ್ ದಾಳಿ ನಡೆಸಿ ಪರಿಶೀಲನೆ ನಡೆದಿದೆ. ಅದೇ ರೀತಿ ಬಾರ್ ಹೊರಗಡೆ ನಿಲ್ಲಿಸಿದಂತಹ ವಾಹನಗಳನ್ನು ತಪಾಷಣೆ ನಡೆಸಲಾಯಿತು . ಡ್ರಗ್ಸ್ ಪದಾರ್ಥಗಳು, ಹಿಂಸಾತ್ಮಕ ಕೃತ್ಯಕ್ಕೆ ಬಳಸುವ ಮಾರಕಾಸ್ತ್ರಗಳು ಬಾರ್ ಒಳಗೆ ಸೇರದಂತೆ ಮತ್ತು ಯಾವುದೇ ರೀತಿಯ ಅಹಿತರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಬಾರ್‌ಗಳಲ್ಲಿ ಪೊಲೀಸರು ಈ ಪರಿಶೀಲನೆ ನಡೆಸಿದ್ದಾರೆ. ನಗರದಲ್ಲಿ ಕೆಲ ದಿನಗಳಿಂದ ಬಾರ್‌ಗಳ ಮುಂದೆ ಕುಡುಕರ ಹಾಗೂ ಪುಂಡರ ಹಾವಳಿ ಹೆಚ್ಚಾಗುತ್ತಿದೆ. ಬಾರ್‌ಗಳ […]

ಸುರತ್ಕಲ್ ನಲ್ಲಿ ಹಾಡಹಗಲೇ ಮಾರಕಾಸ್ತ್ರಗಳಿಂದ ಕಡಿದು ರೌಡಿಯ ಕೊಲೆ

Tuesday, February 4th, 2014
Prakash Murder

ಮಂಗಳೂರು : ರೌಡಿ ಶೀಟರ್ ಹಾಗೂ ಕೊಲೆ ಪ್ರಕರಣದ ಆರೋಪಿ ಪ್ರಕಾಶ್ (26) ಎಂಬಾತನನ್ನು ನಗರದ ಹೊರವಲಯದ ಸುರತ್ಕಲ್ ಪರಿಸರದಲ್ಲಿ ಹಾಡಹಗಲೇ ಮಾರಕಾಸ್ತ್ರಗಳಿಂದ ಕಡಿದು ಕೊಲೆಗೈದ ಘಟನೆ ಮಂಗಳವಾರ ಸಂಜೆ ನಡೆದಿದೆ. ಪ್ರಕಾಶ್ ಜೋಕಟ್ಟೆಯ ಶಿವರಾಜ್ ಕೊಲೆ ಪ್ರಕರಣದ ಆರೋಪಿ ಯಾಗಿದ್ದು, ಶಿವರಾಜ್ ಕೊಲೆ ಪ್ರಕರಣದಲ್ಲಿ ಆರು ತಿಂಗಳ ಹಿಂದೆ ಜಾಮೀನು ಪಡೆದಿದ್ದ. ಈತ ಪಣಂಬೂರು ಠಾಣೆಯಲ್ಲಿ ನೋಂದಣಿಗೆ ಸಹಿ ಮಾಡಲು ತನ್ನ ತಂದೆಯ ಜತೆ ಉಡುಪಿಯಿಂದ ಪಣಂಬೂರು ಠಾಣೆಗೆ ಆಗಮಿಸಿ ವಾಪಾಸಾಗುವ ಸಂದರ್ಭದಲ್ಲಿ ಸುರತ್ಕಲ್ ನ […]