ಮಂಗಳೂರು ವಿಶ್ವವಿದ್ಯಾಲಯಕ್ಕೆ ಛಿಮಾರಿ ಹಾಕಿದ ಹೈಕೋರ್ಟ್
Monday, March 16th, 2015ಮಂಗಳೂರು : ಮಿಫ಼್ಟ್ (MIFT) ಕಾಲೇಜಿನ ಪ್ರಥಮ ವರ್ಷದ ದ್ವಿತೀಯ ಸೆಮಿಸ್ಟರ್ ಫ಼್ಯಾಶನ್ ಡಿಸೈನಿಂಗ್ ವಿದ್ಯಾರ್ಥಿನಿ ಕು. ದಿವ್ಯಶ್ರೀ ಎಸ್.ಎಲ್ ಗೆ ಮಂಗಳೂರು ವಿಶ್ವವಿದ್ಯಾಲಯವು ಪ್ರಥಮ ಸೆಮಿಸ್ಟರ್ ಫ಼್ಯಾಶನ್ ಡಿಸೈನಿಂಗ್ ಪರೀಕ್ಷಾ ಫ಼ಲಿತಾಂಶವನ್ನು ತಡೆಹಿಡಿದಿರುವ ಕ್ರಮವನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್ನಲ್ಲಿ ರಿಟ್ ಅರ್ಜಿಯನ್ನು ದಾಖಲಿಸಿರುತ್ತಾರೆ. ರಿಟ್ ಅರ್ಜಿಯನ್ನು ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಬಿ.ವಿ.ನಾಗರತ್ನರು ಮಂಗಳೂರು ವಿಶ್ವವಿದ್ಯಾಲಯವನ್ನು ತರಾಟೆ ತೆಗೆದುಕೊಂಡಿರುತ್ತಾರೆ. ವಿದ್ಯಾರ್ಥಿನಿಯು ಮುಕ್ತ ವಿಶ್ವವಿದ್ಯಾಲಯ ಮೈಸೂರಿನಲ್ಲಿ ದ್ವೀತೀಯ ಪಿ.ಯು.ಸಿ ತತ್ಸಮಾನದಲ್ಲಿ ತೇರ್ಗಡೆಯಾಗಿದ್ದು. ಎಲ್ಲಾ ವಿಶ್ವವಿದ್ಯಾಲಯಗಳು ತತ್ಸಮಾನ (Equalent)ಪಿ.ಯು.ಸಿ.ಯಲ್ಲಿ ತೇರ್ಗಡೆಯಾದವರನ್ನು […]