ಅಹಂಕಾರ ನಿರಸನವೇ ಸಾಮರಸ್ಯಕ್ಕೆ ದಾರಿ : ಡಾ. ಧನಂಜಯ ಕುಂಬ್ಳೆ

Wednesday, December 1st, 2021
Kanaka Jayanthi

ಮಂಗಳೂರು: ವ್ಯಕ್ತಿ ಅಹಂಕಾರ, ಜಾತಿ, ಮತಗಳ ಅಹಂಕಾರವನ್ನು ಮೀರುವುದೇ ಸಾಮರಸ್ಯದ ಸಾಮಾಜಿಕ ವಾತಾವರಣ ಸೃಷ್ಟಿಗಿರುವ ದಾರಿ. ಕನಕ ಸಾಹಿತ್ಯ ಅಂತಹ ಸಾಮರಸ್ಯದ ಸಂದೇಶಗಳನ್ನು ಕೌಟುಂಬಿಕ, ಅಧ್ಯಾತ್ಮಿಕ ಮತ್ತು ಸಾಮಾಜಿಕ ನೆಲೆಗಳಲ್ಲಿ ಸಾರಿದೆ, ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಸಂಶೋಧನ ಕೇಂದ್ರದ ಸಂಯೋಜಕ ಡಾ. ಧನಂಜಯ ಕುಂಬ್ಳೆ ಹೇಳಿದರು. ಬುಧವಾರ ಹಂಪನಕಟ್ಟೆಯ ಮಿಲಾಗ್ರಿಸ್ ಕಾಲೇಜಿನ ಕನ್ನಡ ವಿಭಾಗ ಮತ್ತು  ಆಂತರಿಕ ಗುಣಮಟ್ಟ ಖಾತರಿ ಕೋಶ ಏರ್ಪಡಿಸಿದ ಕನಕದಾಸ ಜಯಂತಿ ಪ್ರಯುಕ್ತ ಏರ್ಪಡಿಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಕನಕದಾಸರ […]

ಉಳ್ಳಾಲದ ಉಳಿಯ ಬಳಿ ದೋಣಿ ಮಗುಚಿ ಓರ್ವ ವಿದ್ಯಾರ್ಥಿನಿ ಮೃತ್ಯು

Sunday, January 19th, 2020
Renita

ಮಂಗಳೂರು : ಮಿಲಾಗ್ರಿಸ್ ಕಾಲೇಜಿನಲ್ಲಿ ಕಾಮರ್ಸ್ ವಿಭಾಗದ ಅಂತಿಮ ಪದವಿಯ ವಿದ್ಯಾರ್ಥಿನಿ ಯೊಬ್ಬಳು ದೋಣಿ ವಿಹಾರ ಸಂದರ್ಭದಲ್ಲಿ ಜೋರಾಗಿ ಬೀಸುತ್ತಿದ್ದ ಗಾಳಿಗೆ ದೋಣಿ ಮಗುಚಿ ಮೃತಪಟ್ಟ ಘಟನೆ  ಭಾನುವಾರ ಸಂಜೆ ಉಳ್ಳಾಲದ ಉಳಿಯ ಹೊಯ್ಗೆ ಎಂಬಲ್ಲಿ ನಡೆದಿದೆ. ಮೀಯಪದವು ನಿವಾಸಿ ರೆನಿಟಾ(18) ಮೃತ ವಿದ್ಯಾರ್ಥಿನಿ. ಮಿಲಾಗ್ರಿಸ್ ಕಾಲೇಜಿನಲ್ಲಿ ಕಾಮರ್ಸ್ ವಿಭಾಗದ ಅಂತಿಮ ಪದವಿಯ ವಿದ್ಯಾರ್ಥಿನಿಯಾಗಿದ್ದಳು. ಉಳ್ಳಾಲ ಠಾಣಾ ವ್ಯಾಪ್ತಿಯ ಉಳ್ಳಾಲದ ಉಳಿಯ ಹೊಯ್ಗೆ ಎಂಬಲ್ಲಿ ಈ ದುರಂತ ಸಂಭವಿಸಿದ್ದು ಇನ್ನಿಬ್ಬರು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಉಳಿಯ ಹೊಯ್ಗೆಯಲ್ಲಿರುವ ಜಾರ್ಜ್ ಎಂಬವರ ಮನೆಗೆ ತೊಕ್ಕೊಟ್ಟು ಚರ್ಚ್ […]

ಮಿಲಾಗ್ರಿಸ್ ಕಾಲೇಜು ಪ್ರಾಂಶುಪಾಲರ ಮೇಲೆ ಹಲ್ಲೆ ನಡೆಸಿದ ವಿದ್ಯಾರ್ಥಿಯ ವಿರುದ್ಧ ಕ್ರಮ ಕೈಗೊಳ್ಳುಕೈಗೊಳ್ಳಬೇಕು: ಅನಿಲ್ ಲೋಬೋ

Saturday, October 22nd, 2016
ketholic-sabha

ಮಂಗಳೂರು: ಮಿಲಾಗ್ರಿಸ್ ಕಾಲೇಜು ಪ್ರಾಂಶುಪಾಲರ ಮೇಲೆ ಹಲ್ಲೆ ನಡೆಸಿದ ವಿದ್ಯಾರ್ಥಿಯ ವಿರುದ್ಧ ಮೂರು ದಿನದೊಳಗೆ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ದ.ಕ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಕ್ರೈಸ್ತ್‌ ವಿದ್ಯಾಸಂಸ್ಥೆಗಳನ್ನು ಮುಚ್ಚಿ ಪ್ರತಿಭಟನೆ ನಡೆಸಲಾಗುವುದು ಎಂದು ಮಂಗಳೂರು ಪ್ರದೇಶದ ಕೆಥೋಲಿಕ್ ಸಭಾ ಎಚ್ಚರಿಸಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಭಾದ ಅಧ್ಯಕ್ಷ ಅನಿಲ್ ಲೋಬೋ, ಆರೋಪಿ ವಿದ್ಯಾರ್ಥಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು. ಮಿಲಾಗ್ರಿಸ್ ಕಾಲೇಜಿನ ಮೂರನೆ ವರ್ಷದ ಬಿಬಿಎಂ ವಿದ್ಯಾರ್ಥಿ ಮೊಹಮ್ಮದ್ ಸಹನಾವಾಜ್ ತರಗತಿಗೆ ಸರಿಯಾಗಿ ಹಾಜರಾಗದೆ ಸಮರ್ಪಕ ಹಾಜರಾತಿ […]