ಮಂಗಳೂರು ದಸರಾ ಉದ್ಘಾಟಿಸಲಿರುವ ಮುಖ್ಯಮಂತ್ರಿ ಕುಮಾರಸ್ವಾಮಿ

Friday, October 5th, 2018
kudroli dasara

ಮಂಗಳೂರು :  ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಅ.10 ರಂದು ನವರಾತ್ರಿ ಮಹೋತ್ಸವ ಆರಂಭಗೊಳ್ಳಲಿದ್ದು, ನವದುರ್ಗೆಯರ ಹಾಗೂ ಶಾರದಾ ಮಾತೆಯ ಮೂರ್ತಿ ಪ್ರತಿಷ್ಠಾಪನೆಗೊಳ್ಳಲಿದೆ. ಕರ್ಣಾಟಕ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್. ಬೆಳಗ್ಗೆ 11.50ಕ್ಕೆ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ ಎಂದು ಕ್ಷೇತ್ರದ ನವೀಕರಣ ರುವಾರಿ, ಕೇಂದ್ರ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ತಿಳಿಸಿದ್ದಾರೆ. ಶುಕ್ರವಾರ ಕ್ಷೇತ್ರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಅ.14ರಂದು ಸಾಯಂಕಾಲ 6 ಗಂಟೆಗೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮಂಗಳೂರು ದಸರಾ […]

ಮುಖ್ಯಮಂತ್ರಿ ಕುಮಾರಸ್ವಾಮಿ ಯಿಂದ ಓಟಗಾರ್ತಿ ಪೂವಮ್ಮ ಗೆ 40 ಲಕ್ಷ ರೂ. ಮತ್ತು ನಿವೇಶನ ಗಿಫ್ಟ್

Friday, September 7th, 2018
Poovamma

ಮಂಗಳೂರು :  ಏಷ್ಯನ್ ಕ್ರೀಡಾಕೂಟದಲ್ಲಿ  ಚಿನ್ನದ ಹಾಗೂ ಬೆಳ್ಳಿ ಪದಕ ಗೆದ್ದ ಭಾರತೀಯ ತಂಡದ ಪ್ರಮುಖ ಓಟಗಾರ್ತಿ ಎಂ.ಆರ್. ಪೂವಮ್ಮ ಅವರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ದಕ್ಷಿಣ ಕನ್ನಡ ಜಿಲ್ಲಾ ಪ್ರಗತಿ ಪರಿಶೀಲನೆ ಸಭೆಯಲ್ಲಿ ಶುಕ್ರವಾರ  ಸನ್ಮಾನಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಪ್ರಗತಿ ಪರಿಶೀಲನೆ ಸಭೆಯಲ್ಲಿ ಆಯೋಜಿಸಲಾದ ಸಭೆಯ ಆರಂಭದಲ್ಲೇ ಸಾಧಕಿ ಪೂವಮ್ಮ ಅವರಿಗೆ ಚಿನ್ನದ ಪದಕ ಪಡೆದುದಕ್ಕೆ 25 ಲಕ್ಷ ಹಾಗೂ ಬೆಳ್ಳಿ ಪದಕ ಪಡೆದುದಕ್ಕೆ 15 ಲಕ್ಷ, ಒಟ್ಟು 40 ಲಕ್ಷ ರೂ.ಗಳ ಚೆಕ್ ಜೊತೆಗೆ […]

ದೆಹಲಿ ಕರ್ನಾಟಕ ಸಂಘದಿಂದ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಅಭಿನಂದನೆ

Monday, June 18th, 2018
Dehali Sangha

ದೆಹಲಿ : ಕರ್ನಾಟಕ ನೂತನ ಮುಖ್ಯಮಂತ್ರಿ ಶ್ರೀ ಹೆಚ್.ಡಿ. ಕುಮಾರಸ್ವಾಮಿಯವರನ್ನು ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆಯವರ ನೇತೃತ್ವದಲ್ಲಿ ಪದಾಧಿಕಾರಿಗಳೊಂದಿಗೆ ಭಾನುವಾರ ದೆಹಲಿಯ ಕರ್ನಾಟಕ ಭವನದಲ್ಲಿ ಭೇಟಿ ಮಾಡಿ ಅಭಿನಂದಿಸಿದರು. ದೆಹಲಿ ಕರ್ನಾಟಕ ಸಂಘ ನಡೆದು ಬಂದ ದಾರಿ ಮತ್ತು ಈವರೆಗೆ ಹಮ್ಮಿಕೊಂಡಿರುವ ಕಾರ್ಯಕ್ರಮಗಳು ಮತ್ತು ಮುಂಬರುವ ಸಂಘದ ಯೋಜನೆಗಳನ್ನು ವಿವರಿಸಿದರು. ಸಂಘವು ರಾಜಧಾನಿಯಲ್ಲಿ ಉತ್ತಮ ಕೆಲಸ ಮಾಡುತ್ತಿದ್ದು ತಮ್ಮ ಎಲ್ಲಾ ಸಹಕಾರ ನೀಡುವುದಾಗಿ ಮಾನ್ಯ ಮುಖ್ಯಮಂತ್ರಿಗಳು ಭರವಸೆ ನೀಡಿದರು. ಜಂಟಿ ಕಾರ್ಯದರ್ಶಿಗಳಾದ ಟಿ.ಪಿ. ಬೆಳ್ಳಿಯಪ್ಪ,  […]

ಮುಖ್ಯಮಂತ್ರಿ ಕುಮಾರಸ್ವಾಮಿ ಬಳಿ ಬರೋಬ್ಬರಿ ನಾಲ್ಕು ಖಾತೆಗಳು

Thursday, June 7th, 2018
Kumara Swamy

ಬೆಂಗಳೂರು : ಜೆಡಿಎಸ್ ಮತ್ತು ಬಿಎಸ್ಪಿಯ ಎಲ್ಲಾ ಸಚಿವರಿಗೂ ಖಾತೆ ಹಂಚಿಕೆ ಅಂತಿಮಗೊಂಡಿದೆ. ಎರಡು ಖಾತೆಗೆ ಪಟ್ಟುಹಿಡಿದಿದ್ದ ಹೆಚ್.ಡಿ. ರೇವಣ್ಣಗೆ ಲೋಕೋಪಯೋಗಿ ಖಾತೆ ಮಾತ್ರ ಸಿಕ್ಕಿದೆ. ಮೇಲುಕೋಟೆ ಶಾಸಕ ಸಿ.ಎಸ್. ಪುಟ್ಟರಾಜು ಅವರು ಇಚ್ಛೆ ಪಟ್ಟಂತೆ ಸಾರಿಗೆ ಖಾತೆ ಸಿಕ್ಕಿದೆ. ಕೊನೆಯ ಕ್ಷಣದಲ್ಲಿ ಸಂಪುಟಕ್ಕೆ ಸೇರ್ಪಡೆಯಾದ ಮೈಸೂರಿನ ಸಾರಾ ಮಹೇಶ್ ಅವರಿಗೆ ಸಹಕಾರ ಖಾತೆ ನೀಡಲಾಗಿದೆ. ಹೆಚ್.ಡಿ.ದೇವೇಗೌಡರ ಕಿರಿಯ ಪುತ್ರನ ಮಾವ ಡಿ.ಸಿ. ತಮ್ಮಣ್ಣ ಅವರಿಗೆ ಉನ್ನತ ಶಿಕ್ಷಣ ಖಾತೆ ಕೊಡಲಾಗಿದೆ. ಬಿಎಸ್ಪಿಯ ಶಾಸಕ ಎನ್. ಮಹೇಶ್ […]