ಮುಸ್ಲಿಂ ವ್ಯಾಪಾರಿಯಿಂದ ಮೋದಿ ಗೆಲುವಿಗೆ ಎಂಟು ಕೆ.ಜಿ. ಚಾಕಲೇಟ್‌ ವಿತರಣೆ

Friday, May 24th, 2019
Mohammed

ಕುಂದಾಪುರ : ಮೋದಿ ಅಭಿಮಾನಿ ವಕ್ವಾಡಿಯ ಗುಜರಿ ವ್ಯಾಪಾರಿ ಮುಹಮ್ಮದ್ ಸಾರ್ವಜನಿಕರಿಗೆ ಸುಮಾರು ಎಂಟು ಕೆ.ಜಿ. ಚಾಕಲೇಟ್‌ನ್ನು ವಿತರಣೆ ಮಾಡಿದ್ದಾರೆ. ಸ್ಥಳೀಯರಿಂದ ವಕ್ವಾಡಿಯ ಮೋದಿ ಎಂದೇ ಕರೆಯಲ್ಪಡುವ ಮುಹಮ್ಮದ್, ಕಳೆದ ಬಾರಿ ಮೋದಿ ಗೆಲುವು ಸಾಧಿಸಿದಾಗ ಸುಮಾರು ಐದು ಕೆ.ಜಿ.ಯಷ್ಟು ಚಾಕಲೇಟನ್ನು ವಿತರಿಸಿದ್ದಾರೆ. ಅನಾರೋಗ್ಯ ಪೀಡಿತರಾಗಿರುವ ಮುಹಮ್ಮದ್ ಮೋದಿ ಅಭಿಮಾನ ಮೆರೆದಿದ್ದಾರೆ.

ಮನಪಾ ನಗರ ಬಡತನ ನಿರ್ಮೂಲನಾ ಕೋಶದ ಆಶ್ರಯದಲ್ಲಿ ವಿಶೇಷಚೇತನರ ದಿನಾಚರಣೆ

Tuesday, December 4th, 2018
bhaskar-rao

ಮಂಗಳೂರು: ಮನಪಾ ನಗರ ಬಡತನ ನಿರ್ಮೂಲನಾ ಕೋಶದ ಆಶ್ರಯದಲ್ಲಿ ವಿಶೇಷಚೇತನರ ದಿನಾಚರಣೆ ಹಾಗೂ ಸರ್ಕಾರಿ ಸವಲತ್ತುಗಳ ವಿತರಣಾ ಕಾರ್ಯಕ್ರಮವೂ ಮಹಾನಗರ ಪಾಲಿಕೆಯಲ್ಲಿ ನಡೆಯಿತು. ಈ ವೇಳೆ ಓರ್ವ ವಿಶೇಷಚೇತನರಿಗೆ ಕೃತಕ ಕಾಲುಗಳ ವ್ಯವಸ್ಥೆ, ಇಬ್ಬರಿಗೆ ಶ್ರವಣ ಸಾಧನ ಹಾಗೂ ನಾಲ್ಕು ಮಂದಿಗೆ ಚಿಕಿತ್ಸಾ ವೆಚ್ಚಕ್ಕೆ ಚೆಕ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಮಂಗಳೂರು ಮನಪಾ ಮೇಯರ್ ಭಾಸ್ಕರ್ ಕೆ. ವಿಶೇಷಚೇತನರಿಗೆ ಮಾನವೀಯತೆಯ ನೆಲೆಯಲ್ಲಿ, ಅವರು ಸ್ವಾವಲಂಬಿಗಳಾಗಿ ಜೀವನ ನಡೆಸುವಂತಹ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಎಲ್ಲರಿಗೂ ಈ ಸವಲತ್ತುಗಳು […]

ದ.ಕ.ದಲ್ಲಿ ಮಂಗಳವಾರ ಮೀಲಾದ್​​ ರಜೆ: ಯು.ಟಿ.ಖಾದರ್

Monday, November 19th, 2018
u-t-khader

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಪ್ರವಾದಿ ಮುಹಮ್ಮದ್ ಅವರ‌ ಜನ್ಮ ದಿನ ಮೀಲಾದುನ್ನಬಿ ಆಚರಣೆ ನವೆಂಬರ್ 20ರಂದು ನಡೆಯಲಿರುವುದರಿಂದ ಅಂದು ದ.ಕ. ಜಿಲ್ಲೆಯಲ್ಲಿ ಸರ್ಕಾರಿ ರಜೆ ಘೋಷಿಸಲಾಗುವುದು ಎಂದು ನಗರಾಭಿವೃದ್ಧಿ ಮತ್ತು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ. ಮೀಲಾದ್ ಸರ್ಕಾರಿ ರಜೆ ನ. 21 ರಂದು ನಿಗದಿಯಾಗಿದ್ದರೂ ದ.ಕ. ಜಿಲ್ಲೆಯಲ್ಲಿ ಮೀಲಾದ್ 20ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ನ. 21ರ ಸರ್ಕಾರಿ ರಜೆಯನ್ನು ಬದಲಾಯಿಸಿ ನ. 20 ರಂದು ಶಾಲಾ-ಕಾಲೇಜುಗಳಿಗೆ, ಸರ್ಕಾರಿ ಕಚೇರಿಗಳಿಗೆ ರಜಾ ದಿನವನ್ನಾಗಿ […]

ಟೀಕಾಕಾರರ ಯಾವುದೇ ಟೀಕೆಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ: ಸಚಿವ ರೈ

Tuesday, March 13th, 2018
ramanath-rai

ಬಂಟ್ವಾಳ: “ಟೀಕಾಕಾರರ ಯಾವುದೇ ಟೀಕೆಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ. ಅಭಿವೃದ್ಧಿ ಕಾರ್ಯಗಳೇ ತನ್ನ ದಿಟ್ಟ ಉತ್ತರ” ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ. ಸೋಮವಾರ ಬಿ.ಸಿ.ರೋಡಿನ ಮಿನಿವಿಧಾನಸೌಧದ ಬಳಿ ಇಂದಿರಾ ಕ್ಯಾಂಟೀನ್‌ಗೆ ಶಿಲಾನ್ಯಾಸ ನೆರವೇರಿಸಿ, ಬಂಟ್ವಾಳ ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರದ ನೂತನ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬುಡಾ ಅಧ್ಯಕ್ಷ ಸದಾಶಿವ ಬಂಗೇರ ಪ್ರಸ್ತಾವಿಸಿ, ಬಂಟ್ವಾಳದಲ್ಲಿ ವಾಹನ ನಿಬಿಡತೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕಳೆದ 2009ರಿಂದ ಪುರಸಭಾ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಬುಡಾ ಕಚೇರಿಯನ್ನು ಮಿನಿ ವಿಧಾನಸೌಧ ಮುಂಭಾಗದಲ್ಲಿರುವ […]