Blog Archive

ಇಂದಿನಿಂದ ಆಳ್ವಾಸ್‌ ವಿರಾಸತ್‌

Friday, January 12th, 2018
alwas-virasat

ಮೂಡಬಿದಿರೆ: ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ವಿದ್ಯಾ ಗಿರಿ ಸನಿಹ ಪುತ್ತಿಗೆ ವಿವೇಕಾನಂದ ನಗರ ದಲ್ಲಿರುವ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್‌ ವೇದಿಕೆಯಲ್ಲಿ ಜ. 12ರಿಂದ 14ರ ವರೆಗೆ ನಡೆಯುವ ಆಳ್ವಾಸ್‌ ವಿರಾಸತ್‌-2018 ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವಕ್ಕೆ ಸಕಲ ಸಿದ್ಧತೆಗಳಾಗಿವೆ. ಶುಕ್ರವಾರ ಸಂಜೆ 5.15ರಿಂದ ಮೆರ ವಣಿಗೆ, 5.30ರಿಂದ 6.45ರ ವರೆಗೆ ಸಭೆ ನಡೆಯಲಿದೆ. ಡಾ. ಡಿ. ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ಯಲ್ಲಿ ನಾಗಾಲ್ಯಾಂಡ್‌ ರಾಜ್ಯ ಪಾಲ ಪಿ.ಬಿ. ಆಚಾರ್ಯ ಉದ್ಘಾ ಟಿಸಲಿದ್ದಾರೆ. ಸುಪ್ರಸಿದ್ಧ ಹಿಂದೂಸ್ಥಾನಿ ಗಾಯಕರಾದ ಪದ್ಮಭೂಷಣ ರಾಜನ್‌ -ಸಾಜನ್‌ ಮಿಶ್ರಾ ಸಹೋದರರಿಗೆ […]

ಲವ್ ಜಿಹಾದ್ ಎಂದ ಪ್ರಕರಣಕ್ಕೆ ಮತ್ತೊಂದು ತಿರುವು… ಆರೋಪಿ ವಧು ಜೈಲು ಪಾಲು

Monday, December 25th, 2017
missing-case

ಮೂಡಬಿದಿರೆ : ವಾರಗಳ ಹಿಂದೆ ಮಂಗಳೂರಿನಲ್ಲಿ ಲವ್ ಜಿಹಾದ್ ಎಂಬ ಗುಲ್ಲು ಎಬ್ಬಿಸಿದ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. ಮೂಡಬಿದಿರೆಯ ಧರೆಗುಡ್ಡೆ ನಿವಾಸಿ ವಧು ಇದೀಗ ಜೈಲು ಪಾಲಾಗಿದ್ದಾಳೆ. ಮದುವೆಗೆ ಎರಡು ದಿನ ಇರುವಾಗಲೇ ಅನ್ಯಕೋಮಿನ ಯುವಕನ ಜೊತೆಗೆ ಆಕೆ ಪರಾರಿಯಾಗಿದ್ದಳು. ಮಂಗಳೂರಿನ ಪಣಂಬೂರು ಮತ್ತು ಮೂಡುಬಿದಿರೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಈ ಜೋಡಿಯನ್ನು ಮುಂಬೈನಲ್ಲಿ ವಶಕ್ಕೆ ಪಡೆದಿದ್ದರು. ಬಳಿಕ ಮಂಗಳೂರಿಗೆ ಕರೆತಂದಿದ್ದು ವಿಚಾರಣೆ ನಡೆಸಿದ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆರೋಪಿ ವಧು, ತಮ್ಮ ಮನೆಯವರಿಗೆ […]

ಪ್ರಿಯಾಂಕಾ ಮುಂಬಯಿಯಲ್ಲಿ?

Friday, December 22nd, 2017
priyanka

ಮಂಗಳೂರು: ಮದುವೆ ನಿಗದಿಯಾದ ಬಳಿಕ ನಾಪತ್ತೆಯಾಗಿದ್ದ ಯುವತಿ ಧರೆಗುಡ್ಡೆಯ ಪ್ರಿಯಾಂಕಾ (25) ತನಿಖೆಗೆ ತೆರಳಿದ ನಗರ ಪೊಲೀಸರಿಗೆ ಪ್ರಿಯಕರನ ಜತೆ ಪತ್ತೆಯಾಗಿದ್ದಾಳೆಂದು ಮೂಲಗಳಿಂದ ತಿಳಿದು ಬಂದಿದೆ. ಈಕೆಯ ಮದುವೆ ಡಿ. 11ರಂದು ನಿಗದಿಯಾಗಿತ್ತು. ಆದರೆ ಈ ನಡುವೆ ಡಿ. 9ರಂದು ಮೆಹಂದಿ ಕಾರ್ಯಕ್ರಮವಿತ್ತು. ಡಿ. 8ರಂದು ರಾತ್ರಿ ಮನೆಯವರು ಊಟ ಮಾಡಿ ಮಲಗಿದ ವೇಳೆ, ಆಕೆ ನಾಪತ್ತೆಯಾಗಿದ್ದಳು. ಪ್ರಿಯಾಂಕಾಳ ಕುಟುಂಬ 2 ವರ್ಷಗಳಿಂದ ಇನೋಳಿಯಲ್ಲಿ ವಾಸಿಸುತ್ತಿದ್ದು, ಅದೇ ಊರಿನ ನಿವಾಸಿ ಹೈದರ್‌ ಜತೆ ಆಕೆಗೆ ಪ್ರೀತಿ ವ್ಯವಹಾರವಿತ್ತೆಂದು […]

ಮೂಡಬಿದಿರೆ ಹುಡುಗಿ ಪ್ರಿಯಾಂಕಾ ಮಿಸ್ಸಿಂಗ್ ಕೇಸ್ ಹಿಂದೆ ಲವ್‌ ಜೆಹಾದ್‌

Monday, December 11th, 2017
priyanka

  ಮೂಡಬಿದಿರೆ: ಎಲ್ಲವೂ ಸುಗಮವಾಗಿ ನಡೆಯುತ್ತಿದ್ದರೆ ದರೆಗುಡ್ಡೆಯ ಪ್ರಿಯಾಂಕಾಳ ವಿವಾಹ ಅಳಿಯೂರಿನಲ್ಲಿ ಸೋಮವಾರ ನಡೆಯುತ್ತಿತ್ತೇನೋ. ಆದರೆ ಅದರ ಮೊದಲೇ ಅಂದರೆ ಮೆಹೆಂದಿ ಕಾರ್ಯಕ್ರಮ ನಡೆದಿದ್ದ ಶುಕ್ರವಾರ ತಡರಾತ್ರಿ ಆಕೆ ಮನೆ ಬಿಟ್ಟು “ಓಡಿ’ ಹೋದದ್ದು ಎಲ್ಲ ಗೊಂದಲಗಳಿಗೆ ಕಾರಣವಾಗಿದೆ. ಇಷ್ಟಕ್ಕೂ ಅವಳನ್ನು ಹಾರಿಸಿಕೊಂಡು ಹೋಗಲಾಗಿದೆಯೇ ಅಥವಾ ವ್ಯವಸ್ಥಿತವಾಗಿ ಆಕೆ ಓಡಿ ಹೋದದ್ದೇ ಎಂಬುದು ಸ್ಪಷ್ಟವಾಗುತ್ತಿಲ್ಲ. ಮೇಲ್ನೋಟಕ್ಕೆ ಆಕೆ ಅನ್ಯಕೋಮಿನ ವ್ಯಕ್ತಿ ಜತೆ ಪರಾರಿಯಾಗಿದ್ದಾಳೆಯೇ ಎಂಬ ಶಂಕೆ ಮೂಡುತ್ತಿದೆ. ಪ್ರಿಯಾಂಕಾ ತಂದೆ ದಿವಂಗತ ಐತಪ್ಪ ಭಂಡಾರಿ. ಅಕ್ಕನಿಗೆ ಮದುವೆಯಾಗಿದೆ. […]

ಕಾರಂತರ ಬಂಧನ ಪ್ರಕರಣ, ಮೂಡಬಿದಿರೆ ವಿಶ್ವ ಹಿಂದೂ ಪರಿಷತ್‌ ಮತ್ತು ಬಜರಂಗ ದಳದ ಖಂಡನೆ

Saturday, October 14th, 2017
Jagadhish karanth

ಮೂಡಬಿದಿರೆ: ಹಿಂದೂ ಜಾಗರಣ ವೇದಿಕೆಯ ರಾಜ್ಯ ಸಂಚಾಲಕ ಜಗದೀಶ ಕಾರಂತರ ಬಂಧನ ಪ್ರಕರಣವನ್ನು ಮೂಡಬಿದಿರೆ ವಿಶ್ವ ಹಿಂದೂ ಪರಿಷತ್‌ ಮತ್ತು ಬಜರಂಗ ದಳ ಖಂಡಿಸಿದೆ. ಸಂಘ ಪರಿವಾರದ ಕಾರ್ಯಕರ್ತರ ಮೇಲೆ ಸುಳ್ಳು ಕೇಸುಗಳನ್ನು ಹಾಕುವುದರ ಮೂಲಕ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಈ ಬಗ್ಗೆ ರಾಜ್ಯಪಾಲರು ರಾಜ್ಯ ಸರಕಾರಕ್ಕೆ ಸೂಕ್ತ ಎಚ್ಚರಿಕೆಯನ್ನು ನೀಡಬೇಕಾಗಿ ಕೋರುವ, ಬಜರಂಗದಳ ತಾಲೂಕು ಸಂಚಾಲಕ ಸೋಮನಾಥ ಕೋಟ್ಯಾನ್‌ ಸಹಿ ಮಾಡಿರುವ ಮನವಿಯನ್ನು ಮೂಡಬಿದಿರೆ ತಹಶೀಲ್ದಾರರಿಗೆ ಸಲ್ಲಿಸಲಾಯಿತು. ವಿ.ಹಿಂ.ಪ. ಕಾರ್ಯದರ್ಶಿ ಶಾಂತರಾಮ ಕುಡ್ವ, ಗುರುಪುರ ಹಿ.ಜಾ.ವೇದಿಕೆ […]

ಮೂಡಬಿದಿರೆ : ಬಸ್ ಓವರ್ ಟೇಕ್ ಭರಕ್ಕೆ ಬೈಕ್ ಸವಾರ ಮೃತ್ಯು

Tuesday, February 14th, 2017
Bike acident

ಮೂಡಬಿದಿರೆ : ಬಸ್ಸ್ ಒಂದರ ಅತೀ ವೇಗ ಮತ್ತು ಅಜಾಗರೂಕತೆಯಿಂದ ಓವರ್ ಟೇಕ್ ಮಾಡುವ ಭರಕ್ಕೆ ಬೈಕ್ ಸವಾರನೊಬ್ಬ ಪ್ರಾಣ ಕಳಕೊಂಡ ಘಟನೆ ಮಂಗಳವಾರ ಮಧ್ಯಾಹ್ನ ಮೂಡಬಿದಿರೆಯಲ್ಲಿ ನಡೆದಿದೆ. ಮೂಡಬಿದಿರೆಯಿಂದ ಮಧ್ಯಾಹ್ನ ಒಂದು ಗಂಟೆಯ ಸುಮಾರಿಗೆ ಜಯರಾಜ್ ಹೆಸರಿನ ಬಸ್ಸೊಂದು ಮಂಗಳೂರು ಕಡೆ ಹೊರಟಿತ್ತು ಮೂಡಬಿದಿರೆಯಿಂದ ಒಂದೂವರೆ ಕಿಮಿ ಅಂತರದಲ್ಲಿರುವ ಸಮುಗರ ಗುಂಡಿ ತಿರುವಿನಲ್ಲಿ ವಾಹನವೊಂದನ್ನು ಹಿಂದಿಕ್ಕುವ ಭರದಲ್ಲಿ ಬಸ್ಸು ಎದುರು ಬದಿಯಿಂದ ಬರುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನಿಗೆ ತಲೆಗೆ ಗಂಬೀರ ಗಾಯಗೊಂಡು […]

ಮೂಡಬಿದಿರೆ : ಆಳ್ವಾಸ್ ಪ್ರಗತಿ ಉದ್ಯೋಗ ಮೇಳ ಉದ್ಘಾಟನೆ

Saturday, June 20th, 2015
Alvas Pragati

ಮೂಡಬಿದಿರೆ : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು 6ನೇ ವರ್ಷದ ಆಳ್ವಾಸ್ ಪ್ರಗತಿ ಉದ್ಯೋಗ ಮೇಳವನ್ನು ಶನಿವಾರ ಯುವಜನ, ಕ್ರೀಡೆ ಹಾಗೂ ಮೀನುಗಾರಿಕಾ ಸಚಿವ ಕೆ.ಅಭಯಚಂದ್ರ ಜೈನ್ ಡಾ.ವಿ.ಎಸ್. ಆಚಾರ್ಯ ವೇದಿಕೆಯಲ್ಲಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತಾನಾಡಿದ ಅವರು ಡಾ.ವಿ.ಎಸ್ ಆಚಾರ್ಯರವರ ನೆನಪಿಗಾಗಿ ನಿರ್ಮಿಸಿದ ವಿ.ಎಸ್ ಆಚಾರ್ಯ ವೇದಿಕೆಯಲ್ಲಿ ಉದ್ಯೋಗ ಮೇಳ ನಡೆಯುತ್ತಿರುವುದು ಶ್ಲಾಘನೀಯ. ಬೇರೆ ಬೇರೆ ಜಿಲ್ಲೆಯಿಂದ ಬಂದಂತಹ ವಿದ್ಯಾರ್ಥಿಗಳಿಗೆ ಉದ್ಯೋಗ ಕಲ್ಪಿಸುವ ದೃಷ್ಠಿಯಿಂದ ಈ ಉದ್ಯೋಗಮೇಳಮನ್ನು ಆಯೋಜಿಸಲಾಗಿದೆ. ನಮ್ಮ ರಾಜ್ಯದಲ್ಲಿ ಅನೇಕ ಯುವ ಪ್ರತಿಭೆಗಳಿದ್ದು ಅವರೆಲ್ಲರೂ […]