ಗಂಡನಿಗೆ ತಿಳಿಸದೆ ಒಡವೆಗಳನ್ನು ಅಡವಿಟ್ಟು ಸ್ನೇಹಿತನಿಗೆ ಹಣ ನೀಡಿ, ಮಹಿಳೆ ಮಕ್ಕಳು ನಾಪತ್ತೆ
Saturday, March 13th, 2021ಮಂಗಳೂರು : ಪತಿಯ ಗಮನಕ್ಕೂ ಬಾರದಂತೆ ತನ್ನ ಬಂಗಾರದ ಒಡವೆಗಳನ್ನು ಫೈನಾನ್ಸ್ವೊಂದರಲ್ಲಿ ಅಡಮಾನ ಇಟ್ಟು ಮೂಡುಬಿದಿರೆ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಮಹಿಳೆ ಸಮೇತ ಐದು ಮಂದಿ ನಾಪತ್ತೆಯಾಗಿರುವ ಘಟನೆಯೊಂದು ವರದಿಯಾಗಿದೆ. ಮೂಡುಬಿದಿರೆ ತಾಲೂಕಿನ ಕಾರಿಂಜೆಯ ಸುವರ್ಣನಗರ ನಿವಾಸಿ ಜ್ಯೋತಿ ಮಣಿ (36), ದೆಬೋರ (11), ಜುಡಾ ಇಮಾನ್ವೇಲ್ (10), ಎಪ್ಸಿಬಾ (8) ಹಾಗೂ ಮನೋರಂಜಿತಂ (56) ನಾಪತ್ತೆಯಾದವರು ಎಂದು ತಿಳಿದುಬಂದಿದೆ. ಜಯರಾಜ್ ಶೇಖರ್ ಎಂಬವರ ಪತ್ನಿ ಜ್ಯೋತಿಮಣಿ (36) ಎಂಬವರು ಮಾ.10ರಂದು ತನ್ನ ಮಕ್ಕಳಾದ ದೆಬೋರ, ಜುಡಾ ಇಮಾನ್ವೇಲ್, […]