ಮೂಲ್ಕಿ ತಾಲೂಕು ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಶ್ರೀಧರ ಡಿ.ಎಸ್

Thursday, January 2nd, 2025
Sridhar-ds

ಮಂಗಳೂರು : ಮೂಲ್ಕಿ ತಾಲೂಕು ಎರಡನೆಯ ಸಾಹಿತ್ಯ ಸಮ್ಮೇಳನ ಫೆಬ್ರವರಿ 8ರಂದು ಕಿನ್ನಿಗೋಳಿ ಐಕಳದ ಪಾಂಪೈ ಕಾಲೇಜಿನಲ್ಲಿ ನಡೆಯಲಿದೆ. ಸಮ್ಮೇಳನಾಧ್ಯಕ್ಷರಾಗಿ ಸಾಹಿತಿ ಶ್ರೀಧರ ಡಿ.ಎಸ್. ಆಯ್ಕೆಯಾಗಿದ್ದಾರೆ. ಶ್ರೀಧರ ಡಿ.ಎಸ್. ಇವರು ಯಕ್ಷಗಾನ ಅರ್ಥಧಾರಿ, ಪ್ರಸಂಗ ಕರ್ತೃ, ಯಕ್ಷಗಾನ ವಿಮರ್ಶಕ, ಕಥೆಗಾರ, ಕವಿ, ಕಾದಂಬರಿಕಾರರಾದ ಶ್ರೀಧರ ಡಿ.ಎಸ್ ಮೂರು ದಶಕಗಳ ಕಾಲ ಕಿನ್ನಿಗೋಳಿಯ ಪಾಂಪೈ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿದ್ದರು. 2020ನೇ ಸಾಲಿನ ಕರ್ನಾಟಕ ಯಕ್ಷಗಾನ ಅಕಾಡೆಮಿಯ ‘ಪಾರ್ತಿ ಸುಬ್ಬ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕಿನ್ನಿಗೋಳಿಯಲ್ಲಿ ಸಮಾನ ಆಸಕ್ತ ಗೆಳೆಯರೊಂದಿಗೆ […]