ಗಿಲ್ ನೆಟ್ ಬೋಟ್ ನಲ್ಲಿ ನಾಪತ್ತೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆ

Monday, September 13th, 2021
Azar Boat

ಮಂಗಳೂರು, : ಪಣಂಬೂರು ಸಮುದ್ರ ತೀರದಲ್ಲಿ ಸೆ.11 ರಂದು ನಾಪತ್ತೆಯಾಗಿದ್ದ ಮೀನುಗಾರನ ಮೃತದೇಹವು ತಣ್ಣೀರುಬಾವಿ ಬೀಚ್ ಭಾನುವಾರ ರಾತ್ರಿ ವೇಳೆ ಪತ್ತೆಯಾಗಿದೆ. ನಾಪತ್ತೆಯಾಗಿದ್ದ  ಕಸಬಾ ಬೆಂಗರೆ ನಿವಾಸಿ ಮುಹಮ್ಮದ್ ಶರೀಫ್ (35) ಎಂಬ ಮೀನುಗಾರನ  ಮೃತದೇಹ ಪತ್ತೆಯಾಗಿದೆ. ಸೆ. 11 ರಂದು ಗಿಲ್ ನೆಟ್ ಬೋಟ್ ಮೀನುಗಾರಿಕೆಗೆ ತೆರಳುತ್ತಿರುವಾಗ ಅವಘಡ ಸಂಭವಿಸಿ ಮೀನುಗಾರರು ನೀರುಪಾಲಾಗಿದ್ದು ಈ ಪೈಕಿ ಅಬ್ದುಲ್ ಅಜೀಜ್, ಇಂತಿಯಾಜ್, ಸಿನಾನ್, ಫೈರೋಜ್ ಎಂಬ ನಾಲ್ವರು ಮೀನುಗಾರರನ್ನು ದಡದಲ್ಲಿದ್ದ ಸ್ಥಳೀಯರು ರಕ್ಷಣೆ ಮಾಡಿದ್ದರು. ಆದರೆ ಶರೀಫ್ […]

ನಾಪತ್ತೆಯಾಗಿದ್ದ ಹೋಟೆಲ್ ಉದ್ಯೋಗಿ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

Sunday, September 5th, 2021
Rajesh Poojary

ಬಂಟ್ವಾಳ : ಸೆ.2ರಂದು ನಾಪತ್ತೆಯಾಗಿದ್ದ ಕೊಡಂಬೆಟ್ಟು ಗ್ರಾಮದ ಪತ್ತುರ್ಲೆ ನಿವಾಸಿ ರಾಜೇಶ್ ಪೂಜಾರಿ(45) ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ನಯನಾಡು ಪರಿಸರದ ಗುಡ್ಡೆಯಲ್ಲಿ ಭಾನುವಾರ ಬೆಳಗ್ಗೆ  ಪತ್ತೆಯಾಗಿದ್ದಾರೆ. ರಾಜೇಶ್ ಅವರು ನಯನಾಡುನ ಹೋಟೆಲ್ ಒಂದರಲ್ಲಿ ಉದ್ಯೋಗಿಯಾಗಿದ್ದು, ಕಳೆದ ಸೆ.2ರಂದು ಮನೆಗೆ ಬಂದು ವಾಪಾಸು ಹೋದವರು ನಾಪತ್ತೆಯಾಗಿದ್ದರು. ನಾಪತ್ತೆ ಬಳಿಕ ಮನೆ ಮಂದಿ ಸಹಿತ ಊರವರು ರಾಜೇಶ್ ಅವರಿಗಾಗಿ ಎಲ್ಲೆಡೆ ಹುಡುಕಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಪಡಿಸಲಾಗಿತ್ತು. ಮೃತರು, ಪತ್ನಿ, ಇಬ್ಬರು ಪುತ್ರರು, ಪುತ್ರಿಯನ್ನು ಅಗಲಿದ್ದಾರೆ. ಈ ಬಗ್ಗೆ ಶುಕ್ರವಾರ ಮನೆ ಮಂದಿ ಪುಂಜಾಲಕಟ್ಟೆ ಠಾಣೆಗೆ ದೂರು […]

ಕುಟುಂಬಸ್ಥರು ಮುಂದೆ ಬಾರದಿದ್ದಲ್ಲಿ ಜಿಲ್ಲಾಡಳಿತದಿಂದಲೇ ಸಾವನ್ನಪ್ಪಿದ ಸೋಂಕಿತರ ಅಂತಿಮ ಸಂಸ್ಕಾರ

Thursday, June 3rd, 2021
R Ashoka

ಬೆಂಗಳೂರು : ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದವರ ಅಂತ್ಯಸಂಸ್ಕಾರ ಮಾಡಲು ಕೆಲ ಕುಟುಂಬಸ್ಥರು ಮುಂದೆ ಬರದಿರುವ ಹಿನ್ನೆಲೆಯಲ್ಲಿ ಅಂತಹ ವ್ಯಕ್ತಿಗಳ ಮೃತದೇಹವನ್ನು ಆಯಾ ಧರ್ಮದ ವಿಧಿವಿಧಾನದಂತೆ ಗೌರವಯುತವಾಗಿ ಅಂತ್ಯ ಸಂಸ್ಕಾರ ನಡೆಸಿ ಅಂತಿಮ ವಿಧಿವಿಧಾನಗಳನ್ನು ಆಯಾಯ ತಹಶೀಲ್ದಾರ್, ಉಪವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳು ನೆರವೇರಿಸುವಂತೆ ಕಂದಾಯ ಇಲಾಖೆ ಆದೇಶ ಹೊರಡಿಸಿದೆ. ಈಗಾಗಲೇ ಕಂದಾಯ ಸಚಿವ ಆರ್ ಅಶೋಕ್ ಅವರು ಖುದ್ದು ನೇತೃತ್ವವಹಿಸಿ ಸುಮಾರು ಐದು ನೂರಕ್ಕೂ ಹೆಚ್ಚು ಅಸ್ಥಿಗಳನ್ನ ಕಾವೇರಿ ನದಿ ತೀರದಲ್ಲಿ ವಿಸರ್ಜನೆ ಮಾಡಿದ್ದರು. ಈ ವೇಳೆಯೇ ಸೋಂಕಿನಿಂದ […]

ಬಂಗಾರಪಲ್ಕೆ ಗುಡ್ಡ ಕುಸಿತದಿಂದ ಮಣ್ಣಿನಡಿ ನಾಪತ್ತೆಯಾಗಿದ್ದ ವಿದ್ಯಾರ್ಥಿಯ ಮೃತದೇಹ ಪತ್ತೆ

Tuesday, February 16th, 2021
sanath

ಬೆಳ್ತಂಗಡಿ :  ಮಲವಂತಿಗೆ ಗ್ರಾಮದ ಬಂಗಾರಪಲ್ಕೆ ಜಲಪಾತದಲ್ಲಿ ಜ.25ರಂದು ಗುಡ್ಡ ಕುಸಿತದಿಂದ ಮಣ್ಣಿನಡಿ ನಾಪತ್ತೆಯಾಗಿದ್ದ ವಿದ್ಯಾರ್ಥಿಯ  ಮೃತದೇಹ ಮಂಗಳವಾರ ಪತ್ತೆಯಾಗಿದೆ. ಲಾಯಿಲ ಗ್ರಾಮದ ಕಾಶಿಬೆಟ್ಟು ವಾಸುದೇವ ಶೆಟ್ಟಿ ಅವರ ಪುತ್ರ ಸನತ್ ಶೆಟ್ಟಿ (20) ಅವರ ಮೃತದೇಹ ಮೂರು ವಾರಗಳ ನಂತರ ಪತ್ತೆಯಾಗಿದೆ. ಬಂಗಾರಪಲ್ಕೆ ಜಲಪಾತದಲ್ಲಿ ಕಾರ್ಯಾಚರಣೆ ನಡೆಸಲು ಬೇಕಾದ ಯಂತ್ರಗಳನ್ನು ಬಳಸಲು ಸರಿಯಾದ ವಾತಾವರಣವಿಲ್ಲದ ಕಾರಣ ಹಲವು ಸಮಯದವರೆಗೂ ಮೃತ ದೇಹ ಪತ್ತೆಯಾಗಿರಲಿಲ್ಲ. ಮಂಗಳವಾರ ಕಲ್ಲು ಬಂಡೆಯಡಿ ಮೃತದೇಹ ಲಭ್ಯವಾಗಿದೆ.  

ಪಡುಪಣಂಬೂರು : ಮಗು ಸಹಿತ ಒಂದೇ ಕುಟುಂಬದ ಮೂವರ ಮೃತದೇಹ ಪತ್ತೆ

Monday, December 14th, 2020
vinod Saliyan

ಮುಲ್ಕಿ : ಒಂದೇ ಕುಟುಂಬದ ಮೂವರ ಮೃತದೇಹಗಳು ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಪಡುಪಣಂಬೂರು ಕಲ್ಲಾಪು ಬಳಿ ಸೋಮವಾರ ಮನೆಯೊಳಗೆ ಪತ್ತೆಯಾಗಿದೆ. ವಿನೋದ್ ಸಾಲ್ಯಾನ್ (38), ಪತ್ನಿ ರಚನಾ (38), ಪುತ್ರ ಸಾಧ್ಯ (10) ಮೃತಪಟ್ಟವರು. ವಿನೋದ್ ಅವರು ಪತ್ನಿ ಹಾಗೂ ಮಗನಿಗೆ ವಿಷವುಣಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಸೋಮವಾರ ಮಧ್ಯಾಹ್ನ ಕೃತ್ಯ ಬೆಳಕಿಗೆ ಬಂದಿದ್ದು ಶನಿವಾರ ರಾತ್ರಿ ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ. ಪಡುಪಣಂಬೂರು ಪರಿಸರದಲ್ಲಿ ರಿಯಲ್ ಎಸ್ಟೇಟ್ ಉದ್ಯಮ […]

ನಾಪತ್ತೆಯಾಗಿದ್ದ ಮೀನುಗಾರರಲ್ಲಿ ಇಬ್ಬರ ಮೃತದೇಹ ಪತ್ತೆ, ಇಬ್ಬರಿಗಾಗಿ ಶೋಧ

Wednesday, December 2nd, 2020
Chintan Hasainar

ಮಂಗಳೂರು:  ಸೋಮವಾರ ರಾತ್ರಿ ನಡೆದ ಬೋಟ್ ಮುಳುಗಡೆ ದುರಂತದಲ್ಲಿ ನಾಪತ್ತೆಯಾಗಿದ್ದ ಮೀನುಗಾರರಲ್ಲಿ ಬುಧವಾರ ಇಬ್ಬರ ಮೃತದೇಹ ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ನಾಲ್ಕು ಜನರ ಮೃತದೇಹ ಪತ್ತೆಯಾದಂತಾಗಿದೆ. ಬೊಕ್ಕಪಟ್ಣ ನಿವಾಸಿ ಚಿಂತನ್ (21) ಮತ್ತು ಕಸ್ಬಾ ಬೆಂಗ್ರೆ ನಿವಾಸಿ ಹಸೈನಾರ್ (25) ಅವರ ಮೃತದೇಹ ಇಂದು ಪತ್ತೆಯಾಗಿದೆ. ಬೊಕ್ಕಪಟ್ಣ ಬೆಂಗ್ರೆಯ ಪಾಂಡುರಂಗ ಸುವರ್ಣ (58) ಮತ್ತು ಪ್ರೀತಂ (25) ಅವರ ಮೃತದೇಹ ಮಂಗಳವಾರ ಪತ್ತೆಯಾಗಿತ್ತು. ಶ್ರೀ ರಕ್ಷಾ ಬೋಟ್ ಮುಳುಗಡೆ ದುರಂತದಲ್ಲಿ ಆರು ಮಂದಿ ನಾಪತ್ತೆಯಾಗಿದ್ದರು. ಕಸ್ಬಾ ಬೆಂಗ್ರೆಯ ಅನ್ಸಾರ್ […]

ಪರ್ಷಿಯನ್ ಬೋಟ್ ಮುಳುಗಡೆ ಇಬ್ಬರ ಮೃತದೇಹ ಪತ್ತೆ, ನಾಲ್ವರಿಗೆ ಶೋಧ

Tuesday, December 1st, 2020
Sri Raksha

ಮಂಗಳೂರು : ಶ್ರೀ ರಕ್ಷಾ ಹೆಸರಿನ ಪರ್ಷಿಯನ್ ಬೋಟ್ ಮುಳುಗಡೆಯಾಗಿ ನಾಪತ್ತೆಯಾದ ಆರು ಮೀನುಗಾರರ ಪೈಕಿ ಇಬ್ಬರ ಮೃತದೇಹ ಮಂಗಳವಾರ ಮಧ್ಯಾಹ್ನ ಪತ್ತೆಯಾಗಿವೆ. ಮಂಗಳೂರಿನ ಬೊಕ್ಕಪಟ್ಣದ ಪಾಂಡುರಂಗ ಸುವರ್ಣ, ಪ್ರೀತಂ ಎಂಬುವರ ಮೃತದೇಹ ಪತ್ತೆಯಾಗಿದ್ದು, ಉಳಿದ ನಾಲ್ವರಿಗಾಗಿ ಶೋಧ ನಡೆಯುತ್ತಿದೆ. ಘಟನೆ ನಡೆದ ಸುತ್ತಲ ಪ್ರದೇಶದಲ್ಲಿ ಮುಳುಗು ತಜ್ಞರು, ಸ್ಥಳೀಯ ಮೀನುಗಾರರು ಮತ್ತು ಕೋಸ್ಟ್ ಗಾರ್ಡ್ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಈಗ ಇಬ್ಬರ ಮೃತದೇಹವನ್ನು ಮುಳುಗು ತಜ್ಞರು ಮೇಲಕ್ಕೆತ್ತಿದ್ದಾರೆ. ಸೋಮವಾರ ಸಂಜೆ  ಮೀನುಗಾರಿಕೆಗೆ ತೆರಳಿ ಮೀನು ತುಂಬಿಸಿಕೊಂಡು ವಾಪಸ್ […]

ಕಂಕನಾಡಿ ಬಾರ್&ರೆಸ್ಟೋರೆಂಟ್ ನ ಶೆಡ್ಡಿನಲ್ಲಿ ಹೆಣ

Thursday, August 20th, 2020
bar

ಮಂಗಳೂರು : ನಗರದ ಕಂಕನಾಡಿ ಹಾಲಿವುಡ್ ಬಾರ್&ರೆಸ್ಟೋರೆಂಟ್ ನ ಶೆಡ್ಡಿನ ಬಳಿ ಆಗಸ್ಟ್ 18 ರಂದು 53 ವರ್ಷ ಪ್ರಾಯದ ಮಹೇಶ್ ಎಂಬವರ ಮೃತ ಶರೀರ ಪತ್ತೆಯಾಗಿದೆ. ರೆಸ್ಟೋರೆಂಟ್‍ನ ಶೆಡ್ಡಿನ ಪಕ್ಕಾಸಿಗೆ ಹಳೆಯ ಇಲೆಕ್ಟ್ರಿಕಲ್ ವಯರನ್ನು ಕಟ್ಟಿ ವಯರ್‍ನ ಇನ್ನೊಂದು ತುದಿಯನ್ನು ಕುತ್ತಿಗೆಗೆ ಉರುಳಾಗಿ ಉಪಯೋಗಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ದೇಹದ ಭಾರದಿಂದ ವಯರ್ ತುಂಡಾಗಿ ಕೆಳಕ್ಕೆ ಬಿದ್ದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಮೃತಪಟ್ಟ ಗಂಡಸಿನ ಚಹರೆ ಇಂತಿವೆ: ಹೆಸರು: ಮಹೇಶ, ತಂದೆ: ಹನುಮಂತ, ಪ್ರಾಯ: ಸುಮಾರು 53 ವರ್ಷ. […]

ಉಪ್ಪಿನಂಗಡಿ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಮಹಿಳೆಯ ಮೃತದೇಹ

Friday, August 7th, 2020
wonman-deadbody

ಉಪ್ಪಿನಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬಜತ್ತೂರು ಗ್ರಾಮದ ನೀರಕಟ್ಟೆ ಡ್ಯಾಮ್ ಬಳಿಯ ನೇತ್ರಾವತಿ ನದಿಯಲ್ಲಿ ಆ. 6ರಂದು ಅಪರಿಚಿತ ಮಹಿಳೆಯ ಮೃತದೇಹ ಪತ್ತೆಯಾಗಿದೆ. ದೇಹವೂ ನದಿ ನೀರಿನಲ್ಲಿ ತೇಲಿಕೊಂಡು ಬಂದು ನೀರಕಟ್ಟೆ ವಿದ್ಯುತ್ ಸ್ಥಾವರದ ಆಣೆಕಟ್ಟಿನ ಕಸದ ರಾಶಿ ಜೊತೆ ಸೇರಿತ್ತು.ಈ ಬಗ್ಗೆ ವಿದ್ಯುತ್ ಸ್ಥಾವರದ ಕೆಲಸಗಾರರು ಪೊಲೀಸರಿಗೆ ಮಾಹಿತಿ ನೀಡಿದ್ದು, ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ಧಾವಿಸಿ ಮಾಹಿತಿ ಪಡೆದು ತನಿಖೆ ಮುಂದುವರೆಸಿದ್ದಾರೆ. ಸುಮಾರು 40 ರಿಂದ 50 ವರ್ಷ ವಯಸ್ಸಿನ ಮಹಿಳೆಯ ಮೃತದೇಹ ಇದಾಗಿದ್ದು, ಮೃತ […]

ಕಿನ್ನಿಗೋಳಿಯ ಯುವಕ ಕುವೈಟ್‌ನ ಸಾಲ್ಮಿಯಾ ಬೀಚ್‌ನಲ್ಲಿ ನೀರು ಪಾಲು

Sunday, July 19th, 2020
Mohammed Anish

ಮಂಗಳೂರು : ಕಿನ್ನಿಗೋಳಿಯ ಯುವಕನೊಬ್ಬ ಕುವೈಟ್‌ನ ಸಾಲ್ಮಿಯಾ ಬೀಚ್‌ನಲ್ಲಿ ಮುಳುಗುತ್ತಿದ್ದ ಅಪರಿಚಿತ ವ್ಯಕ್ತಿಯೋರ್ವನ ರಕ್ಷಣೆ ಮಾಡಲು ಮುಂದಾದಾಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಶನಿವಾರ ಸಂಜೆ  ನಡೆದಿದೆ. ಮೃತ ವ್ಯಕ್ತಿಯನ್ನು ಮಂಗಳೂರು ಹೊರವಲಯದ ಕಿನ್ನಿಗೋಳಿ ನಿವಾಸಿ ಮೊಹಮ್ಮದ್ ಅನೀಸ್ (28) ಎಂದು ಗುರುತಿಸಲಾಗಿದೆ. ಭಾರತೀಯ ಕಾಲಮಾನ 8.30 ಕ್ಕೆ ಕುವೈಟ್ ರಾಷ್ಟ್ರದ ಸಾಲ್ಮಿಯಾ ಬೀಚ್‌ನಲ್ಲಿ ಅನೀಸ್ ತನ್ನ ಸ್ನೇಹಿತರ ಜೊತೆಗೂಡಿ ಈಜಲು‌ ತೆರಳಿದ್ದು ಸಮುದ್ರ ಪಾಲಾಗುತ್ತಿದ್ದ ಈಜಿಪ್ಟ್‌ನ ಅಪರಿಚಿತ ಯುವಕನ ರಕ್ಷಣೆಗೆ ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಅನೀಸ್‌ ನೀರಿನಲ್ಲಿ ಮುಳುಗಿದ್ದು […]