ಕೋಳಿ ಇನ್ನಿತರ ವಸ್ತು ಇಟ್ಟು ರಸ್ತೆ ಮಧ್ಯೆಯೇ ವಾಮಾಚಾರ – ಭಯಭೀತರಾದ ಜನ

Saturday, June 26th, 2021
black magic

ಚಿಕ್ಕಮಗಳೂರು: ಕೋಳಿ, ನಿಂಬೆಹಣ್ಣು, ಮೊಟ್ಟೆ, ಹೊಸ ಬಟ್ಟೆ, ಅನ್ನ, ತೆಂಗಿನಕಾಯಿ, ಅರಿಶಿನ-ಕುಂಕುಮ, ಮೂರು ತರದ ದಾರ, ಬಳೆ, ತಲೆಗೂದಲು ಇಟ್ಟು ರಸ್ತೆ ಮಧ್ಯೆಯೇ ವಾಮಾಚಾರ ಮಾಡಿರುವ ಘಟನೆ  ತರೀಕೆರೆ ತಾಲೂಕಿನ ಲಕ್ಕವಳ್ಳಿ ಹೋಬಳಿಯ ರಂಗನೇಹಳ್ಳಿ ಗ್ರಾಮದಲ್ಲಿ ನಡೆದಿದೆ. ರಂಗೇನಹಳ್ಳಿ ಗ್ರಾಮದಿಂದ ಬರಗೇನಹಳ್ಳಿಗೆ ಹೋಗುವ ಮಾರ್ಗ ಮಧ್ಯೆ ಈ ವಾಮಾಚಾರ ನಡೆಸಿದ್ದಾರೆ. ಬೆಳ್ಳಂ ಬೆಳಗ್ಗೆಯೇ ಕೃಷಿ ಕೆಲಸಕ್ಕೆ ಜಮೀನಿಗೆ ಹೋಗುವ ರೈತರು ಇದನ್ನ ಕಂಡು ಕಂಗಾಲಾಗಿದ್ದಾರೆ. ವಾಮಾಚಾರ ನಡೆಸಿದ ದುಷ್ಕರ್ಮಿಗಳು ವಾಮಾಚಾರದ ಬಳಿಕ ವಿವಿಧ ವಸ್ತುಗಳು ಸ್ಥಳದಲ್ಲಿ ಬಿಟ್ಟು ಹೋಗಿದ್ದಾರೆ. ನೇರ […]

ಮೊಟ್ಟೆ, ಮ್ಯಾಗಿಗೆ ಪ್ರಧಾನಿ ಕಚೇರಿಗೆ ಟ್ವೀಟ್​​ , ನಳಿನ್ ಕುಮಾರ್ ವಾರ್ ರೂಮ್ ನಿಂದ ಅರ್ಧ ಗಂಟೆಯೊಳಗೆ ಪೂರೈಕೆ

Saturday, April 4th, 2020
maagi tweet

ಮಂಗಳೂರು: ಭಾರತ ಸಂಪೂರ್ಣ ಲಾಕ್ ಡೌನ್ ಆಗಿರುವ ಕಾರಣ ಹಾಸ್ಟೆಲ್ ವಿದ್ಯಾರ್ಥಿನಿಯೊಬ್ಬಳು ಪ್ರಧಾನಿ ಕಚೇರಿಗೆ ಟ್ವೀಟ್ ಮಾಡಿ ಮೊಟ್ಟೆ, ಮ್ಯಾಗಿಗೆ ಬೇಡಿಕೆ ಇಟ್ಟಿದ್ದಾಳೆ. ಬೇಡಿಕೆ ಇಟ್ಟ ಅರ್ಧ ಗಂಟೆಯಲ್ಲಿ ಆಕೆಯ ಹಾಸ್ಟೆಲ್ ಬಾಗಿಲಿಗೆ ಮೊಟ್ಟೆ ಹಾಗೂ ಮ್ಯಾಗಿ ತಲುಪಿದ  ಘಟನೆ ಮಂಗಳೂರಿನಲ್ಲಿ‌ ನಡೆದಿದೆ. ಪ್ರಧಾನಿ ಕಚೇರಿಗೆ ಟ್ವೀಟ್ ಮಾಡಿ ಮೊಟ್ಟೆ, ಮ್ಯಾಗಿಗೆ ಬೇಡಿಕೆಮಂಗಳೂರಿನ ಹಾಸ್ಟೆಲೊಂದರಲ್ಲಿ ಇರುವ ಉತ್ತರ ಪ್ರದೇಶ ಮೂಲದ ಸೌಮ್ಯಾ ಸಿಂಗ್ ಎಂಬ ವಿದ್ಯಾರ್ಥಿನಿ ಮೊಟ್ಟೆ ಮತ್ತು ಮ್ಯಾಗಿಗೆ ಬೇಡಿಕೆ ಇಟ್ಟು ಟ್ವೀಟ್ ಮಾಡಿದ್ದಳು. ಆಕೆ […]

ಪದೇಪದೇ ಮೊಟ್ಟೆ ಇಡುವ ಲಾಭದಾಯಕ ಸ್ವರ್ಣಧಾರ ಕೋಳಿ

Saturday, June 29th, 2019
Swarnadhara

ಮಂಗಳೂರು :  ನಾಟಿ ಕೋಳಿಗೆ ಹೋಲುವ ವಿಶೇಷ ತಳಿಯಾದ ಸ್ವರ್ಣಧಾರ ಕೋಳಿಗೆ ದಕ್ಷಿಣ ಕನ್ನಡ ಜಿಲ್ಲೆಯ ಜನರಲ್ಲಿ ಬೇಡಿಕೆ ಹೆಚ್ಚುತ್ತಿದೆ. ಈ ತಳಿಯನ್ನು ಬೀದರ್‍ನಲ್ಲಿರುವ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಅಬಿವೃದ್ಧಿ ಪಡಿಸಿದೆ. ಸ್ವದೇಶಿ ತಳಿಗಳೊಂದಾದ ಸ್ವರ್ಣಧಾರ ಕೋಳಿಯು ಮಂಗಳೂರಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಲಭ್ಯವಿದ್ದು ಆಸಕ್ತರಿಗೆ ಇತ್ತೀಚೆಗೆ ತರಬೇತಿಯ ಮೂಲಕ ವೈಜ್ಞಾನಿಕ ಕೋಳಿ ಸಾಕಣೆ ವಿಧಾನವನ್ನು ತಿಳಿಸಲಾಯಿತು. ಕೇಂದ್ರದ ಪ್ರಧಾನ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ. ಎ.ಟಿ. ರಾಮಚಂದ್ರ ನಾಯ್ಕರವರು ಕಾರ್ಯಕ್ರಮದ ಅಧ್ಯಕ್ಷತೆ […]

ಮೊಟ್ಟೆ ಸೇವನೆಯ ಕುರಿತು ತಪ್ಪು ನಂಬಿಕೆಗಳಿವೆ… ಅವು ಯಾವವು ಗೊತ್ತಾ?

Monday, November 12th, 2018
egg

ಚಳಿಗಾಲದ ಸಂದರ್ಭದಲ್ಲಿ ನಿತ್ಯ ಒಂದು ಮೊಟ್ಟೆ ಸೇವಿಸುವುದರಿಂದ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಲಾಭವಿದೆ. ಇದು ಇಮ್ಯುನಿಟಿಯನ್ನು ಹೆಚ್ಚಿಸುವುದರ ಜೊತೆಗೆ , ಚಳಿಯಿಂದ ದೇಹವನ್ನು ಕಾಪಾಡುತ್ತದೆ. ಆದರೆ ಕೆಲವರಲ್ಲಿ ಮೊಟ್ಟೆ ಸೇವನೆಯ ಕುರಿತು ತಪ್ಪು ನಂಬಿಕೆಗಳಿವೆ. ಅವು ಯಾವವು ಗೊತ್ತಾ? ಮೊಟ್ಟೆ ತಿನ್ನುವುದರಿಂದ ರಕ್ತದಲ್ಲಿನ ಕೊಲೆಸ್ಟ್ರಾಲ್ ಹೆಚ್ಚುತ್ತದೆ. ಹಾಗಾಗಿ ದಪ್ಪವಿರುವವರು ಮೊಟ್ಟೆ ಸೇವಿಸಬಾರದು. ಆದರೆ, ಮೊಟ್ಟೆಯಲ್ಲಿ ಪ್ರೊಟೀನ್ ಅಂಶವಿರುವುದರಿಂದ ಇದು ಕೊಲೆಸ್ಟ್ರಾಲ್ ಅಂಶವನ್ನು ನಿಯಂತ್ರಣದಲ್ಲಿಡುತ್ತದೆ ಎಂಬುದು ನಿಮಗೆ ಗೊತ್ತಿರುವುದು ಅವಶ್ಯಕ. ಒಂದಕ್ಕಿಂತ ಹೆಚ್ಚು ಮೊಟ್ಟೆಯನ್ನು ಸೇವಿಸಬಾರದು ಎಂಬ ತಪ್ಪು […]

ಮಾಜಿ ಸಂಸದೆ ರಮ್ಯಾಗೆ ಮೊಟ್ಟೆ ಎಸೆದು ಪ್ರತಿಭಟಿಸಿರುವುದು ಒಳ್ಳೆಯ ಬೆಳವಣಿಗೆಯಲ್ಲ: ಪರಮೇಶ್ವರ್

Saturday, August 27th, 2016
Gparameshwar

ಮಂಗಳೂರು: ಮಾಜಿ ಸಂಸದೆ ರಮ್ಯಾಗೆ ಮೊಟ್ಟೆ ಎಸೆದು ಪ್ರತಿಭಟಿಸಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಬೆಂಗಳೂರಿಗೆ ಪೈಪೋಟಿ ನೀಡುವಷ್ಟರ ಮಟ್ಟಿಗೆ ಬೆಳೆಯುತ್ತಿರುವ ಮಂಗಳೂರಿನಲ್ಲಿ ಇಂತಹ ಘಟನೆ ನಡೆಯಬಾರದಿತ್ತು ಎಂದು ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ. ಇಂದು ನಗರದ ಸರ್ಕಿಟ್‌‌ ಹೌಸ್‌‌ನಲ್ಲಿ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಮಂಗಳೂರು ಕುರಿತ ಹೇಳಿಕೆಗೆ ಪ್ರತ್ಯೇಕ ವ್ಯಾಖ್ಯಾನದ ಅಗತ್ಯವಿಲ್ಲ ಎಂದರು. ಪೊಲೀಸರ ಬಡ್ತಿಯನ್ನು ಉದ್ದೇಶಪೂರ್ವಕವಾಗಿ ಉಳಿಸಿಕೊಂಡಿಲ್ಲ. ಬಡ್ತಿ ಸೂಕ್ತ ರೀತಿಯಲ್ಲಿ ನಡೆಯುತ್ತಿದೆ. 2005ರ ಎಸ್ಐ ಕೇಡರ್‌ನವರ ಬಗ್ಗೆ ಪರಿಶೀಲನೆ ನಡೆಯುತ್ತಿದೆ ಎಂದರು. ಜನಾರ್ದನ ಪೂಜಾರಿಗೆ […]