ಬಜರಂಗದಳ ಕಾರ್ಯಕರ್ತ ಹರೀಶ್ ಶೆಟ್ಟಿ ಕೊಲೆ ಪ್ರಕರಣ: ಮೂವರ ಬಂಧನ
Thursday, October 4th, 2018ಮಂಗಳೂರು: ಮಂಗಳೂರು ಹೊರವಲಯದ ಸೂರಲ್ಪಾಡಿ ಬಳಿ ಸೆ.24ರಂದು ನಡೆದ ಬಜರಂಗದಳ ಕಾರ್ಯಕರ್ತ ಹರೀಶ್ ಶೆಟ್ಟಿ ಎಂಬವರ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕು ಅಮ್ಮುಂಜೆ ಗ್ರಾಮದ ಕಲಾಯಿ ಮದೀನಾ ಮಸೀದಿಯ ಬಳಿ ನಿವಾಸಿ ಮೊಹಮ್ಮದ್ ಶರೀಫ್ ಅಲಿಯಾಸ್ ಶರೀಫ್ (24), ಮಂಗಳೂರು ತಾಲೂಕು ಬಜಪೆ ಕಂದಾವರ ಗ್ರಾಮದ ಕಂದಾವರ ಪಂಚಾಯತ್ ಬಳಿ ನಿವಾಸಿ ಶಿಫಾಜ್ (21), ಬಜಪೆ ಕಂದಾವರ ಗ್ರಾಮದ ಚರ್ಚ್ ರಸ್ತೆ ನಿವಾಸಿ ಮೊಹಮ್ಮದ್ ಆರಿಫ್ (28) […]