ಕಾಂಗ್ರೆಸ್ ಮುಖಂಡ ಮೊಹಿಯುದ್ದೀನ್ ಬಾವಾ ಮನೆಯಲ್ಲಿ ಕೊರೊನಾ, ಸೀಲ್ಡೌನ್

Friday, June 26th, 2020
moideen-bava-house

ಮಂಗಳೂರು : ಉತ್ತರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಮೊಹಿಯುದ್ದೀನ್ ಬಾವಾ ಅವರ ಮನೆಯಲ್ಲಿ ಕೊರೊನಾ  ಪ್ರಕರಣ ಕಂಡು ಬಂದ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಮನೆಗೆ  ಯಾರು ಪ್ರವೇಶಿಸಬಾರದು ಎಂಬ ನಾಮ ಫಲಕ ಹಾಕಿ ಮಂಗಳೂರು ಮಹಾನಗರ ಪಾಲಿಕೆ ಸೀಲ್ಡೌನ್ ಮಾಡಲಾಗಿದೆ. ಮಾಜಿ ಶಾಸಕ ಮೊಹಿಯುದ್ದೀನ್ ಬಾವಾ ಅವರ ಪುತ್ರ ಬೆಂಗಳೂರಿನಲ್ಲಿ ವಾಸವಿದ್ದು, ಅವರಿಗೆ ಕೊರೊನಾ ಲಕ್ಷಣಗಳು ಕಂಡುಬಂದ ಹಿನ್ನೆಲೆ ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ತಗುಲಿರುವುದು ದೃಢವಾಗಿದೆ ಇದರಿಂದಾಗಿ ಅವರ ಮನೆಯನ್ನು ಸಂಪೂರ್ಣ ಸೀಲ್‌ಡೌನ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. […]

ಅಭಿವೃದ್ಧಿ ನೋಡಿ ಮತ ಚಲಾಯಿಸಿ: ಮೊಹಿಯುದ್ದೀನ್ ಬಾವಾ

Tuesday, May 8th, 2018
mohuiddin-bava

ಮಂಗಳೂರು: ಸುಳ್ಳನ್ನು ಸತ್ಯ ಎಂದು ಬಿಂಬಿಸುವುದು ಬಿಜೆಪಿ ಗರಗತವಾಗಿದೆ. ಆದುದರಿಂದ ಯಾವುದೇ ಅಪಪ್ರಚಾರಗಳಿಗೆ ಕಿವಿಗೊಡದೆ ಅಭಿವೃದ್ಧಿಯನ್ನು ಪರಿಗಣಿಸಿ ಮತ ಚಲಾಯಿಸಬೇಕು ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಎ. ಮೊಹಿಯುದ್ದೀನ್ ಬಾವಾ ಹೇಳಿದ್ದಾರೆ. ಕೂಳೂರಿನ ಪೇಟೆಯಲ್ಲಿ,ಪಂಜಿಮೊಗರು ಸೇರಿದಂತೆ ವಿವಿಧೆಡೆ ಸೋಮವಾರ ಮಂಗಳೂರು ಉತ್ತರ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಮೊದಿನ್ ಬಾವಾ ಬಿರುಸಿನ ಮತಯಾಚನೆ ನಡೆಸಿದರು. ಮನೆ, ವ್ಯಾಪಾರ ಕೇಂದ್ರ, ಕಂಪನಿಗಳಿಗೆ ಭೇಟಿ ನೀಡಿ ಸರಕಾರ ಕೈಗೊಂಡ ಕಲ್ಯಾಣ ಕಾರ್ಯಕ್ರಮವನ್ನು ವಿವರಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರ […]

ಚುನಾವಣೆ ಯಾವುದೇ ಜಾತಿ ಧರ್ಮದ ಆಧಾರದಲ್ಲಿ ನಡೆಯುವುದಿಲ್ಲ: ಮೊಹಿಯುದ್ದೀನ್ ಬಾವಾ

Thursday, May 3rd, 2018
mohuiddin-bava

ಮಂಗಳೂರು: ಈ ಬಾರಿಯ ಚುನಾವಣೆ ಯಾವುದೇ ಜಾತಿ ಧರ್ಮದ ಆಧಾರದಲ್ಲಿ ನಡೆಯುವುದಿಲ್ಲ. ಕೇವಲ ಅಭಿವೃದ್ಧಿಯೊಂದೇ ಐಕ್ಯಮಂತ್ರವಾಗಲಿದೆ ಎಂದು ಶಾಸಕ ಮೊದಿನ್ ಬಾವಾ ಹೇಳಿದರು. ಪಚ್ಚನಾಡಿಲ್ಲಿ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.ನಾನು ಶಾಸಕನಾಗಿ ಆಯ್ಕೆಯಾಗುವವರೆಗೆ ಕಾಂಗ್ರೆಸ್ ಸದಸ್ಯನಿರಬಹುದು. ಆದರೆ ಸಾಂವಿಧಾನಿಕ ಹುದ್ದೆ ಸ್ವೀಕರಿಸಿದ ಬಳಿಕ ಎಲ್ಲರ ಶಾಸಕನಾಗಿದ್ದೇನೆ. ಪಕ್ಷಜಾತಿಯನ್ನು ನೋಡದೆ ಎಲ್ಲಾ ಮಂಗಳೂರು ಮಹಾನಗರ ಪಾಲಿಕೆ ವಾರ್ಡ್, ಗ್ರಾಮ ಪಂಚಾಯತ್, ಜಿಲ್ಲಾ ಪಂಚಾಯತ್‌ಗೆ ಅನುದಾನ ಮಂಜೂರು ಮಾಡಿಸಿದ್ದೇನೆ ಎಂದರು. ಈ ಹಿಂದೆ ಮಂಗಳೂರು […]

ಕಾಂಗ್ರೆಸ್ ಸರಕಾರ ಜೈಲ್‌ಗೆ ಕಳುಹಿಸುವ ಬದಲು ಹಕ್ಕು ಪತ್ರ ನೀಡುವ ಮೂಲಕ ನೆಮ್ಮದಿಯ ಬದುಕನ್ನು ಕಲ್ಪಿಸಿದೆ: ಮೊಹಿಯುದ್ದೀನ್ ಬಾವಾ

Thursday, March 29th, 2018
mohiuddin-bava

ಮಂಗಳೂರು: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಮೊಹಿಯುದ್ದೀನ್ ಬಾವಾ ಅವರು ಬುಧವಾರ ತಮ್ಮ ನಿವಾಸದ ಕಚೇರಿಯಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಸಿದರು. ವಿವಿಧ ಕ್ಷೇತ್ರಗಳ ಸಮಸ್ಯೆಗಳ ಕುರಿತಾಗಿ ಕ್ಷೇತ್ರದ ಜನರಿಂದ ಮನವಿ ಸ್ವೀಕರಿಸಿದರು. ಈ ಸಂದರ್ಭ ಮಾತನಾಡಿದ ಅವರು ಇದೀಗ ಚುನಾವಣೆ ಘೋಷಣೆಯಾಗಿದ್ದು, ಯಾವುದೇ ಅನುದಾನ ನೀಡುವ ಬಗ್ಗೆ ಹೇಳುವುದಿಲ್ಲ. ಐದು ವರ್ಷದ ಹಿಂದೆ ತಾನು ನೀಡಿದ ಭರವಸೆಗಳನ್ನು ಆದ್ಯತಾ ನೆಲೆಯಲ್ಲಿ ಪೂರ್ಣಗೊಳಿಸಿದ್ದೇನೆ. ಆದರೂ ಇನ್ನಷ್ಟು ಅಭಿವೃದ್ಧಿ ಕೆಲಸ ಕಾರ‍್ಯಗಳು ನಡೆಯಬೇಕಿದೆ. ಈಗಾಗಲೇ ನಾನಾ ದೈವಸ್ಥಾನಗಳಿಗೆ ಒಟ್ಟು […]

ಸಿವಿಲ್ ಎಂಜಿನಿಯರ‍್ಸ್ ದೇಶದ ನಿರ್ಮಾಣ ಕ್ಷೇತ್ರದ ಉತ್ಕೃಷ್ಟ ಸಂಪನ್ಮೂಲ: ಶಾಸಕ ಬಾವಾ

Tuesday, March 27th, 2018
mohauiddin-bava

ಸುರತ್ಕಲ್: ಕೌಶಲ್ಯಯುಕ್ತ ಯುವ ಸಿವಿಲ್ ಎಂಜಿನಿಯರ‍್ಸ್ ದೇಶದ ನಿರ್ಮಾಣ ಕ್ಷೇತ್ರದ ಉತ್ಕೃಷ್ಟ ಸಂಪನ್ಮೂಲ. ದೇಶದ ನಿರ್ಮಾಣ ಕ್ಷೇತ್ರವು ಸಿವಿಲ್ ಎಂಜಿನಿಯರ್ ಅವರ ಕೈಯಲ್ಲಿ ಇದೆ ಎಂದು ಶಾಸಕ ಮೊಹಿಯುದ್ದೀನ್ ಬಾವಾ ಹೇಳಿದರು. ಎಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ‍್ಸ್ ಇಂಡಿಯಾ ಇದರ ವತಿಯಿಂದ ಸುರತ್ಕಲ್‌ನ ಎನ್‌ಐಟಿಕೆ ಸಿವಿಲ್ ಎಂಜಿನಿಯರ್ ವಿಭಾಗದಲ್ಲಿ ಎಂಜಿನಿಯರ‍್ಸ್ ವೀಕ್ ಕಾರ್ಯಕ್ರಮವನ್ನು ಉದ್ಘಾಟಿಸಿದ ಬಳಿಕ ಅವರು ಹೇಳಿದರು. ಯಾವುದೇ ಕ್ಷೇತ್ರ ಬೆಳೆಯಬೇಕಾದರೆ ನಿರ್ಮಾಣ ಕ್ಷೇತ್ರವು ಪ್ರಥಮವಾಗಿ ಬೆಳೆಯಬೇಕು. ಇದರಿಂದಾಗಿ ಅಭಿವೃದ್ಧಿಶೀಲ ದೇಶವಾದ ಭಾರತದಲ್ಲಿ ಸಿವಿಲ್ […]

ಸುರತ್ಕಲ್‌ನ ತಾತ್ಕಾಲಿಕ ಮಾರುಕಟ್ಟೆ ಉದ್ಘಾಟನೆ

Sunday, March 25th, 2018
Surathkal Market

ಸುರತ್ಕಲ್ : ಸುರತ್ಕಲ್‌ನಲ್ಲಿ ಅತ್ಯಾಧುನಿಕ ಸುಸಜ್ಜಿತ ಮಾರುಕಟ್ಟೆಯನ್ನು ಒಂದೂವರೆ ವರ್ಷದೊಳಗೆ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಮೊಹಿಯುದ್ದೀನ್ ಬಾವಾ ಹೇಳಿದರು. ಸುರತ್ಕಲ್ ನ ತಾತ್ಕಾಲಿಕ ಮಾರುಕಟ್ಟೆಯನ್ನು ಶನಿವಾರ ಶಾಸಕ ಮೊಹಿಯುದ್ದೀನ್ ಬಾವಾ ಉದ್ಘಾಟಿಸಿ ಮಾತನಾಡಿದರು. ನೂತನ ಮಾರುಕಟ್ಟೆ ನಿರ್ಮಾಣವಾಗುವ ವರೆಗೆ ವ್ಯಾಪಾರಿಗಳ ಹಿತ ದೃಷ್ಟಿಯಿಂದ ಅವರ ಅನುಕೂಲಕ್ಕೆ ತಕ್ಕಂತೆ ಪಾಲಿಕೆ ವತಿಯಿಂದ ತಾತ್ಕಾಲಿಕ ಮಾರುಕಟ್ಟೆಯಲ್ಲಿ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಹೊಸ ಮಾರುಕಟ್ಟೆ ನಿರ್ಮಾಣವಾದ ಬಳಿಕ ನೂತನ ಮಾರುಕಟ್ಟೆಗೆ ಸ್ಥಳಾಂತರಿಸಲಾಗುವುದು ಎಂದರು. ಅಭಿವೃದ್ಧಿಯಲ್ಲಿ ಜನತೆ ಕೈ ಜೋಡಿಸಿದಾಗ ನಮಗೂ […]

ಗ್ರಾಮೀಣ ರಸ್ತೆ ನಿರ್ವಹಣೆ: ಟಾಸ್ಕ್‍ಫೋರ್ಸ್ ಸಭೆ

Saturday, June 17th, 2017
MLA ROAD

ಮಂಗಳೂರು :  ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮಾಂತರ ಪ್ರದೇಶಗಳ ರಸ್ತೆಗಳ ಸುಧಾರಣೆ ಮತ್ತು ನಿರ್ವಹಣೆ ಕುರಿತು ಟಾಸ್ಕ್‍ಫೋರ್ಸ್ ಸಮಿತಿ ಸಭೆ ಶನಿವಾರ ಶಾಸಕ ಮೊಹಿಯುದ್ದೀನ್ ಬಾವಾ ಅವರ ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯತ್‍ನಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಶಾಸಕರು ಮಾತನಾಡಿ, ಗ್ರಾಮಾಂತರ ಪ್ರದೇಶಗಳ ರಸ್ತೆ ಅಭಿವೃದ್ಧಿ ಬಳಿಕ ಅವುಗಳ ನಿರ್ವಹಣೆ ಕೂಡಾ ಪ್ರಾಮುಖ್ಯವಾಗಿದೆ. ಈ ನಿಟ್ಟಿನಲ್ಲಿ ರಸ್ತೆಗಳಲ್ಲಿ ಸುಗಮ ಸಂಚಾರಕ್ಕೆ ಅವುಗಳ ನಿರ್ವಹಣೆಗೆ ರಾಜ್ಯ ಸರಕಾರ ಅನುದಾನ ನೀಡುತ್ತಿದೆ. ಮಂಗಳೂರು ಉತ್ತರ ಕ್ಷೇತ್ರ ವ್ಯಾಪ್ತಿಯ 13 […]