ಯಾಸ್ ಚಂಡುಮಾರುತದ ಹಾನಿಯನ್ನು ಪರಿಶೀಲಿಸಲು ಬಂದ ಮೋದಿಯನ್ನು ಅರ್ಧ ಗಂಟೆಗೂ ಹೆಚ್ಚು ಕಾಯಿಸಿದ ಮಮತಾ ಬ್ಯಾನರ್ಜಿ

Friday, May 28th, 2021
modi Banarji

ನವದೆಹಲಿ: ಯಾಸ್ ಚಂಡುಮಾರುತದಿಂದ ಉಂಟಾಗಿರುವ ಹಾನಿಯನ್ನು ಪರಿಶೀಲಿಸಲು ಕಲಾಯಿಕುಂಡ್ ವಾಯುನೆಲೆಗೆ ಪ್ರಧಾನಿ ಆಗಮಿಸಿದಾಗ ಮಮತಾ ಬ್ಯಾನರ್ಜಿ ಪ್ರಧಾನಿ ಮೋದಿ ಮತ್ತು ರಾಜ್ಯಪಾಲ ಜಗದೀಪ್ ಧಾಂಕರ್ ಅವರನ್ನು ಅರ್ಧ ಗಂಟೆಗಳ ಕಾಲ ಕಾಯಿಸಿದ್ದಾರೆ ಎಂದು ಸರ್ಕಾರ ಆರೋಪಿಸಿದೆ. ವಾಯುನೆಲೆಯಲ್ಲಿ ಪ್ರಧಾನಿಯೊಂದಿಗೆ ತರಾತುರಿಯಲ್ಲಿ 15 ನಿಮಿಷ ಸಂವಾದ ನಡೆಸಿ, ಪ್ರಧಾನಿ ಯೊಂದಿಗಿನ ಚಂಡಮಾರುತ ಹಾನಿ ಪರಾಮರ್ಶನಾ ಸಭೆಯಲ್ಲಿ ಮಮತಾ ಪಾಲ್ಗೊಳ್ಳದೆ  ಕೇವಲ ಹಾನಿಯ ವರದಿ ಕೊಟ್ಟು ಹೋದ ಘಟನೆ ನಡೆದಿದೆ. ನೀವು ನನ್ನನ್ನು ಭೇಟಿಯಾಗಲು ಬಯಸಿದ್ದರಿಂದ ಇಂದು ಬಂದೆ. ನಾನು ಮತ್ತು ನನ್ನ […]

ಮೈಸೂರು : ಚಾಮುಂಡಿ ಬೆಟ್ಟದಲ್ಲಿ ಮೋದಿ ಹೆಸರಿನಲ್ಲಿ ಪೂಜೆ ಮಾಡಿಸಿದ ಶಾಸಕ ಜಿಟಿಡಿ

Tuesday, September 17th, 2019
GTD

ಮೈಸೂರು : ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬ. ಈ ಕಾರಣಕ್ಕೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ವಿಶೇಷ ಪೂಜೆ ನಡೆಸಿದ್ದಾರೆ. ಜೆಡಿಎಸ್ ಶಾಸಕ, ಮಾಜಿ ಸಚಿವ ಜಿ.ಟಿ. ದೇವೇಗೌಡ ಅವರೂ ಈ ಪೂಜೆಯಲ್ಲಿ ಭಾಗಿಯಾಗಿದ್ದಾರೆ. ವಿ. ಸೋಮಣ್ಣ ಅವರೊಂದಿಗೆ ಸಂಸದ ಪ್ರತಾಪ್ ಸಿಂಹ, ಎಲ್. ನಾಗೇಂದ್ರ ಅವರು ಇದ್ದರು. ಬಿಜೆಪಿ ನಾಯಕರೊಂದಿಗೆ ಬಂದಿದ್ದ ಜಿ.ಟಿ.ದೇವೇಗೌಡರು ಎಲ್ಲರೊಂದಿಗೆ ಪೂಜೆಯಲ್ಲಿ ಭಾಗಿಯಾಗಿದ್ದರು. ಮೋದಿ ಹೆಸರಿನಲ್ಲಿ ವಿಶೇಷ ಪೂಜೆಯನ್ನೂ ಮಾಡಿಸಿ […]

ನೆರೆ ಪರಿಸ್ಥಿತಿಯನ್ನು ವೀಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್ 7ರಂದು ರಾಜ್ಯಕ್ಕೆ ಭೇಟಿ : ಬಿಎಸ್. ಯಡಿಯೂರಪ್ಪ

Thursday, August 29th, 2019
modi

ಬೆಂಗಳೂರು : ರಾಜ್ಯವು ಪ್ರವಾಹದಿಂದ ತತ್ತರಿಸಿ ಹೋಗಿದ್ದು, ಈ ಕುರಿತು ಮಾಹಿತಿ ಪಡೆಯುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್ 7 ರಂದು ರಾಜ್ಯಕ್ಕೆ ಆಗಮಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ಕೇಂದ್ರ ಸರ್ಕಾರದ ಫಿಟ್ ಇಂಡಿಯಾ ಅಭಿಯಾನದ ಪ್ರಯುಕ್ತ ವಿಧಾನಸೌಧದ ಮುಂಭಾಗ ಧ್ಯಾನಚಂದ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದ ಅವರು, “ಪ್ರವಾಹದಿಂದಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಹಲವು ಹಾನಿಯಾಗಿ ಅಪಾರ ನಷ್ಟ ಉಂಟಾಗಿದೆ. ಹಾಗಾಗಿ ಪ್ರವಾಹ ಪೀಡಿತ ಪ್ರದೇಶಗಳನ್ನು ನಡೆಸಲು […]

ರಾಷ್ಟ್ರೀಯ ಕ್ರೀಡಾ ದಿನ : ಫಿಟ್ ಇಂಡಿಯಾ ಆಂದೋಲನಕ್ಕೆ ಮೋದಿ ಚಾಲನೆ

Thursday, August 29th, 2019
Fit-india

ನವದೆಹಲಿ : ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ರಾಷ್ಟ್ರಾದ್ಯಂತ ಫಿಟ್ ಇಂಡಿಯಾ ಆಂದೋಲನಕ್ಕೆ ಇಂದಿರಾ ಗಾಂಧಿ ಸ್ಟೇಡಿಯಂ ಕಾಂಪ್ಲೆಕ್ಸ್ ನಲ್ಲಿ ಚಾಲನೆ ನೀಡಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಮೊದಲ ಅವಧಿಯಲ್ಲಿ ಸ್ವಚ್ಛ ಭಾರತ ಅಭಿಯಾನಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರು. ಅದರಂತೆ ಈ ಬಾರಿ ಫಿಟ್ ಇಂಡಿಯಾ ಆಂದೋಲನಕ್ಕೆ ಕರೆ ನೀಡಿದ್ದಾರೆ. ದೇಶಾದ್ಯಂತ ಎಲ್ಲ ರಾಜ್ಯಗಳು ಇದರಲ್ಲಿ ಪಾಲ್ಗೊಳ್ಳಲಿದೆ. ಜೊತೆಗೆ ಈ ಆಂದೋಲನವನ್ನು ಯಶಸ್ವಿಗೊಳಿಸುವಂತೆ ಎಲ್ಲಾ ಶಾಲಾ ಕಾಲೇಜು, ಯುನಿವರ್ಸಿಟಿಗಳಿಗೆ ಸೂಚಿಸಲಾಗಿದೆ. ಈ […]

ಮುಸ್ಲಿಂ ವ್ಯಾಪಾರಿಯಿಂದ ಮೋದಿ ಗೆಲುವಿಗೆ ಎಂಟು ಕೆ.ಜಿ. ಚಾಕಲೇಟ್‌ ವಿತರಣೆ

Friday, May 24th, 2019
Mohammed

ಕುಂದಾಪುರ : ಮೋದಿ ಅಭಿಮಾನಿ ವಕ್ವಾಡಿಯ ಗುಜರಿ ವ್ಯಾಪಾರಿ ಮುಹಮ್ಮದ್ ಸಾರ್ವಜನಿಕರಿಗೆ ಸುಮಾರು ಎಂಟು ಕೆ.ಜಿ. ಚಾಕಲೇಟ್‌ನ್ನು ವಿತರಣೆ ಮಾಡಿದ್ದಾರೆ. ಸ್ಥಳೀಯರಿಂದ ವಕ್ವಾಡಿಯ ಮೋದಿ ಎಂದೇ ಕರೆಯಲ್ಪಡುವ ಮುಹಮ್ಮದ್, ಕಳೆದ ಬಾರಿ ಮೋದಿ ಗೆಲುವು ಸಾಧಿಸಿದಾಗ ಸುಮಾರು ಐದು ಕೆ.ಜಿ.ಯಷ್ಟು ಚಾಕಲೇಟನ್ನು ವಿತರಿಸಿದ್ದಾರೆ. ಅನಾರೋಗ್ಯ ಪೀಡಿತರಾಗಿರುವ ಮುಹಮ್ಮದ್ ಮೋದಿ ಅಭಿಮಾನ ಮೆರೆದಿದ್ದಾರೆ.

ಮೋದಿ ಸ್ವಾಗತಿಸಲು ಶಾಸಕ ಹರೀಶ್ ಪೂಂಜಾ ಚೌಕಿದಾರ್ ಸಮವಸ್ತ್ರ

Saturday, April 13th, 2019
Harish-poonja

ಮಂಗಳೂರು :   ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ನೇತೃತ್ವದಲ್ಲಿ ವಿಭಿನ್ನ ರೀತಿ ಯಲ್ಲಿ ಮೋದಿ ಅವರನ್ನು ಸ್ವಾಗತಿಸಲು ತಯಾರಿ ನಡೆಸಲಾಗಿದೆ. ಈ ನಡುವೆ ಚೌಕಿದಾರ್ ಸಮವಸ್ತ್ರ ಧರಿಸಿದ ಶಾಸಕ ಹರೀಶ್ ಪೂಂಜಾ ಅವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೈ ಭಿ ಚೌಕಿದಾರ್ ಎಂದು ಬರೆದಿರುವ ಖಾಕಿ ಸಮವಸ್ತ್ರ, ಖಾಕಿ ಟೋಪಿ ಧರಿಸಿ ಬಿಜೆಪಿ ಕಾರ್ಯಕರ್ತರು ಮೋದಿ ಅವರನ್ನು ಸ್ವಾಗತಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಇಂದು ಮಂಗಳೂರಿಗೆ ಆಗಮಿಸಲಿದ್ದಾರೆ. ಮೋದಿ ಕಾರ್ಯಕ್ರಮಕ್ಕೆ ಮಂಗಳೂರಿನಲ್ಲಿ ಕ್ಷಣಗಣನೆ ಆರಂಭವಾಗಿದೆ. ಪ್ರಧಾನಿ […]

ಪೂಜಾರಿ ರಾಹುಲ್‌ ಗಾಂಧಿ ಪ್ರಧಾನಿಯಾಗಬೇಕೆಂದು ಬಯಸುತ್ತಾರೆಯೇ ಹೊರತು ಮೋದಿಯನ್ನಲ್ಲ : ಯು.ಟಿ.ಖಾದರ್

Monday, March 18th, 2019
UT-khader

ಮಂಗಳೂರು :  ಪೂಜಾರಿ ನಮ್ಮ ರಾಜಕೀಯ ಗುರುಗಳು ಅವರು ರಾಹುಲ್‌ ಗಾಂಧಿ ಪ್ರಧಾನಿಯಾಗಬೇಕೆಂದು ಬಯಸುತ್ತಾರೆಯೇ ಹೊರತು ಮೋದಿ ಪ್ರಧಾನಿಯಾಗಬೇಕೆಂದು ಬಯಸಲಾರರು . ನರೇಂದ್ರ ಮೋದಿಯ ಸರಿಯಿಲ್ಲ ಎಂದು ನಮಗೆ ಮೊದಲು ಹೇಳಿಕೊಟ್ಟವರೇ ಜನಾರ್ದನ ಪೂಜಾರಿಯವರು. ಈಗ ಅವರು ‘ಭ್ರಷ್ಟಾಚಾರ ನಿರ್ಮೂಲನಗೊಳಿಸಲು ಮೋದಿ ಮತ್ತೆ ಪ್ರಧಾನಿಯಾಗಬೇಕೆಂದು’ ಹೇಳಿಕೆ ನೀಡಿದ್ದಾರೆ ಎನ್ನುವುದನ್ನು ನಾನು ನಂಬಲು ಸಾಧ್ಯವಿಲ್ಲ. ಎಂದು ರಾಜ್ಯ ನಗರಾಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದರು. ಜನಾರ್ದನ ಪೂಜಾರಿ ಬಗ್ಗೆ ದೇಶದ ವಿವಿಧ ಕಡೆಗಳಲ್ಲಿ ಬಡವರಿಗೆ ಅತ್ಯಂತ […]

ವಾಜಪೇಯಿ 94ನೇ ಜಯಂತಿ: ಅಜಾತ ಶತ್ರುಗೆ ಪ್ರಧಾನಿ ಮೋದಿ ನಮನ

Tuesday, December 25th, 2018
vajpayee

ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 94ನೇ ಜಯಂತಿ ಅಂಗವಾಗಿ ರಾಷ್ಟ್ರೀಯ ಸ್ಮೃತಿ ಸ್ಥಳದಲ್ಲಿನ ವಾಜಪೇಯಿ ಸಮಾಧಿಗೆ ರಾಜಕೀಯ ಗಣ್ಯರು ಪುಷ್ಪ ಸಮರ್ಪಣೆ ಮಾಡಿದರು. ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಮಾಜಿ ಪ್ರಧಾನಿ ಮನಮೋಹನ್ಸಿಂಗ್ ಸೇರಿದಂತೆ ಅನೇಕ ಗಣ್ಯರು ಅಜಾತುಶತ್ರು ಅಟಲ್ ಬಿಹಾರಿ ವಾಜಪೇಯಿ ಸಮಾಧಿ ಬಳಿ ಆಗಮಿಸಿ ಪುಷ್ಪ ಸಮರ್ಪಣೆ ಮಾಡಿದರು. ಈ ಮೂಲಕ ವಾಜಪೇಯಿ ಅವರ ಸ್ಮಾರಕ ಸ್ಥಳ ಲೋಕಾರ್ಪಣೆಗೊಂಡಿತು. ವಾಜಪೇಯಿ ಅವರ […]

ಪ್ರಧಾನಿ ಮೋದಿ ಮೊದಲು ಸಂವಿಧಾನ ಓದಲಿ: ಅಸಾದುದ್ದೀನ್​ ಓವೈಸಿ

Tuesday, December 4th, 2018
narendra-modi

ಹೈದರಾಬಾದ್: ಮುಸ್ಲಿಂ ಸಮುದಾಯಕ್ಕೆ ಮೀಸಲಾತಿಗಾಗಿ ಆಗ್ರಹಿಸುತ್ತಿರುವ ಎಐಎಂಐಎಂನ ಅಧ್ಯಕ್ಷ ಅಸಾದುದ್ದೀನ್ ಓವೈಸಿ, ಪ್ರಧಾನಿ ನರೇಂದ್ರ ಮೋದಿ ಅವರು ಈ ಬಗ್ಗೆ ಸಂವಿಧಾನವನ್ನು ಓದಬೇಕಾದ ಅಗತ್ಯವಿದೆ ಎಂದು ತಿರುಗೇಟು ನೀಡಿದ್ದಾರೆ. ಹೈದಾರಾಬಾದ್ನಲ್ಲಿ ಸೋಮವಾರ ಬಿಜೆಪಿ ರ‍್ಯಾಲಿಯಲ್ಲಿ ಪ್ರಧಾನಿ ಮೋದಿ ಮಾತನಾಡಿದಕ್ಕೆ ಟಾಂಗ್ ನೀಡಿರುವ ಓವೈಸಿ, ನಿಮಗೆ ಸಂವಿಧಾನ ಗೊತ್ತಿಲ್ಲದೇ ಇದ್ದಲ್ಲಿ ಆ ಬಗ್ಗೆ ಗೊತ್ತಿರುವವರ ಸಹಾಯವನ್ನಾದರೂ ಪಡೆಯಿರಿ ಎಂದು ಕುಟುಕಿದ್ದಾರೆ. ನೀವು ಸಂವಿಧಾನದ 15 ಹಾಗೂ 16 ನೇ ವಿಧಿಯಗಳನ್ನು ಓದಲೇಬೇಕು. ಮಾರಾಠರಿಗೆ, ಜಾಟರಿಗೆ ಹಾಗೂ ಗುಜ್ಜಾರ್ಗಳಿಗೆ ಮೀಸಲಾತಿ […]

ರೈತರ ಬೆಳೆ ವಿಮೆಯಲ್ಲಿ ಕೇಂದ್ರ ಸರಕಾರದಿಂದ ಸಾವಿರಾರು ಕೋಟಿ ಲೂಟಿ

Wednesday, November 28th, 2018
ರೈತರ ಬೆಳೆ ವಿಮೆಯಲ್ಲಿ ಕೇಂದ್ರ ಸರಕಾರದಿಂದ ಸಾವಿರಾರು ಕೋಟಿ ಲೂಟಿ

ಬೆಂಗಳೂರು: ರೈತರ ಬೆಳೆ ವಿಮೆಯಲ್ಲಿ ಕೇಂದ್ರ ಸರಕಾರದಿಂದ ಸಾವಿರಾರು ಕೋಟಿ ಲೂಟಿ ಆಗಿದೆ ಎಂದು ಕೆಪಿಸಿಸಿ ಕಿಸಾನ್ ಘಟಕದ ಅಧ್ಯಕ್ಷ ಸಚಿನ್ ಮಿಗಾ ಆರೋಪಿಸಿದ್ದಾರೆ. ನಗರದ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರದ ಮೋದಿ ಸರಕಾರ ಬೆಳೆ ವಿಮೆಯಲ್ಲಿ ರೈತರ ಹಣವನ್ನು ಲೂಟಿ ಮಾಡಿದೆ. ಬೆಳೆವಿಮೆಯಲ್ಲಿ ಕೇಂದ್ರದ ಅವ್ಯವಹಾರ ನಡೆದಿದೆ. ರಫೇಲ್ ಹಗರಣದಂತೆ ಬೆಳೆ ವಿಮೆಯಲ್ಲೂ ಹಗರಣ ನಡೆದಿದೆ. ರಫೆಲ್ ಗಿಂತ ದೊಡ್ಡ ಹಗರಣ ಇದು. ಅಲ್ಲಿ 15 ಸಾವಿರ ಕೋಟಿ ರುಪಾಯಿ ಅಕ್ರಮವಾಗಿದೆ. ಇಲ್ಲಿ ಸದ್ಯ […]