ದನದ ವ್ಯಾಪಾರಿ ಸಾವು ಕೇಸ್‌, ಪೊಲೀಸ್ ಆರೋಪಿಗಳನ್ನು ಕರೆಂಟ್ ತೆಗೆದು ಕರೆದೊಯ್ದ ಪೊಲೀಸರು

Monday, June 4th, 2018
cattle-trader

ಉಡುಪಿ: ದನದ ವ್ಯಾಪಾರಿ‌ ಅನುಮಾನಾಸ್ಪದ ಸಾವು ಪ್ರಕರಣ ಸಂಬಂಧ ಅಮಾನತಾದ ಪೊಲೀಸ್ ಸಹಿತ‌ ಆರೋಪಿಗಳನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಯಿತು. ಎಸ್‌ಐ ಡಿಎನ್ ಕುಮಾರ್, ಜೀಪು ಚಾಲಕ ಗೋಪಾಲ್, ಹೆಡ್ ಕಾನ್ಸ್‌‌ಟೇಬಲ್‌ ಮೋಹನ್ ಕೋತ್ವಾಲ್ ಹಾಗೂ ಆರೋಪಿಗಳಾದ ಚೇತನ್, ಶೈಲೇಶ್ ಹಾಗೂ ಗಣೇಶ್ ಅವರನ್ನು ಜಿಲ್ಲಾಸ್ಪತ್ರೆಯಲ್ಲಿ ತಪಾಸಣೆಗೆ ಒಳಪಡಿಸಲಾಯಿತು. ನ್ಯಾಯಾಧೀಶರ ಮನೆಗೆ ಹಾಜರು ಪಡಿಸುವ ಮೊದಲು‌ ಆರೋಪಿಗಳಿಗೆ ವೈದ್ಯಕೀಯ ತಪಾಸಣೆ ಮಾಡಲಾಯಿತು. ಜಿಲ್ಲಾಸ್ಪತ್ರೆಯ ಹೊರ‌ ಆವರಣದ‌‌ ಎಲ್ಲಾ ಲೈಟ್ ಬಂದ್ ಮಾಡಿ ಪೊಲೀಸ್ ಆರೋಪಿಗಳನ್ನು ಪೊಲೀಸರು ಕರೆದೊಯ್ದರು.

ಸರಣಿ ಹಂತಕ ಸೈನೆಡ್‌ ಮೋಹನನ 5ನೇ ಕೊಲೆ ಸಾಬೀತು: ನಾಳೆ ಶಿಕ್ಷೆ ಪ್ರಕಟ

Saturday, February 24th, 2018
sained

ಮಂಗಳೂರು: 20 ಯುವತಿಯರಿಗೆ ಸೈನೆಡ್ ನೀಡಿ ಕೊಲೆ ಮಾಡಿರುವ ಆರೋಪ ಹೊತ್ತಿರುವ ಮೋಹನ್‌ ಕುಮಾರ್ ನಡೆಸಿದ ಅತ್ಯಾಚಾರ ಮತ್ತು ಕೊಲೆಯ ಐದನೇ ಪ್ರಕರಣ ಸಾಬೀತಾಗಿದ್ದು, ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿಕ್ಷೆ ಪ್ರಮಾಣವನ್ನು ನಾಳೆ ಪ್ರಕಟಿಸಲಿದೆ. ಬೆಳ್ತಂಗಡಿಯ ಮೇಗಿನ ಮಾಲಾಡಿ ನಿವಾಸಿ ಯಶೋಧಾ(28)ಎಂಬಾಕೆಯ ಜೊತೆಗೆ ಸಲುಗೆ ಬೆಳೆಸಿಕೊಂಡ ಮೋಹನ್ ಕುಮಾರ್, ತನ್ನ ಹೆಸರನ್ನು ಶಶಿಧರ ಪೂಜಾರಿ ಎಂದು ಹೇಳಿಕೊಂಡಿದ್ದ. ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ ಚಿನ್ನಾಭರಣದೊಂದಿಗೆ ತನ್ನ ಜೊತೆಗೆ ಬರುವಂತೆ ತಿಳಿಸಿದ್ದ. ಅದರಂತೆ ಆಕೆ […]