ದೇಶದಲ್ಲಿ ನಡೆಯುತ್ತಿರುವ ಕೋಮುಗಲಭೆಯ ಹಿಂದೆ ಸಂಘಪರಿವಾರದ ಪಾತ್ರವಿದೆ : ಮುನೀರ್ ಕಾಟಿಪಳ್ಳ
Wednesday, January 17th, 2018ಮಂಗಳೂರು: ಜಿಲ್ಲೆಯಲ್ಲಿ ನಡೆಯುವ ಪ್ರತೀಕಾರದ ಕೊಲೆಯ ಹಿಂದೆ ರಾಜಕೀಯ ಪಕ್ಷಗಳ ಹುನ್ನಾರವಿದೆ. ಧರ್ಮದ ಆಧಾರದಲ್ಲಿ ಜನರನ್ನು ಧ್ರುವೀಕರಿಸುವ ಕೆಲಸವಾಗುತ್ತಿದೆ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ. ಅವರು ಇಂದು ದ.ಕ. ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಎಡ ಮತ್ತು ಜಾತ್ಯತೀತ ಪ್ರಜಾಪ್ರಭುತ್ವ ಸಂಘಗಳಿಂದ ನಡೆದ ಧರಣಿ ಸತ್ಯಾಗ್ರಹದಲ್ಲಿ ಅವರು ಮಾತನಾಡಿದರು. ಇದನ್ನು ಸಮಾಜ ಸಂಘಟಿತವಾಗಿ ಪ್ರತಿರೋಧಯೊಡ್ಡಬೇಕಾಗಿದೆ. ಸಾಂಕೇತಿಕ ಸೌಹಾರ್ದದಿಂದ ಶಾಂತಿ ಸ್ಥಾಪಿಸುವುದಕ್ಕಿಂತ ಮುಖ್ಯವಾಗಿ ಜಾತ್ಯತೀತ ಸೌಹಾರ್ದ ನಂಬಿಕೆಯಿಂದ ಮಾತ್ರ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯವಿದೆ ಎದು […]