ಯುವಕನ ಅಶ್ಲೀಲ ಚಿತ್ರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕುವುದಾಗಿ ಯುವತಿಯಿಂದ ಬೆದರಿಕೆ

Friday, November 13th, 2020
Sakshi

ಮಂಗಳೂರು :  ಯುವತಿಯೊಬ್ಬಳ ಮಾತಿಗೆ ಮರುಳಾಗಿ ಮಂಗಳೂರಿನ ಯುವಕನೊಬ್ಬ ತನ್ನ ಅಶ್ಲೀಲ ಭಂಗಿಯ ಚಿತ್ರಗಳನ್ನು ಆಕೆಗೆ ಕಳುಹಿಸಿದ್ದು, ಆಕೆ ಹಣ ಕೊಡದಿದ್ದರೆ ಸೋಷಿಯಲ್ ಮೀಡಿಯಾದಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದಾಳೆ . ಸಾಕ್ಷಿರಾಜ್ ಎಂಬ ಯುವತಿ ಮಂಗಳೂರಿನ ಯುವಕನೋರ್ವನಿಗೆ ಇದೇ ವರ್ಷದ ಆಗಸ್ಟ್ನಲ್ಲಿ ಪರಿಚಯವಾಗಿದ್ದಳು. ಪರಿಚಯವಾದ ಇವರಿಬ್ಬರು ಮೆಸೆಂಜರ್ನಲ್ಲಿ ಸಂಪರ್ಕದಲ್ಲಿದ್ದು, ಆಕೆ ಈತನಿಗೆ ಅಶ್ಲೀಲ ಭಂಗಿಯ ಫೋಟೊ ಕಳುಹಿಸುತ್ತಿದ್ದಳಂತೆ. ಜೊತೆಗೆ ಖರ್ಚಿಗೆಂದು ಈತನ ಬಳಿ ಹಣ ಕೇಳಿ ಫೋನ್ ಪೇ ಮೂಲಕ ಪಡೆಯುತ್ತಿದ್ದಳಂತೆ. ಇತ್ತೀಚೆಗೆ ಈಕೆ ತನ್ನದೇ ಅಶ್ಲೀಲ ಭಂಗಿಯನ್ನು […]

ಕುಕ್ಕೆ ಸುಬ್ರಹ್ಮಣ್ಯ ಮಠದ ಬಳಿ ಬೆಂಗಳೂರು ಮೂಲದ ಯುವಕ ಆತ್ಮಹತ್ಯೆ

Sunday, October 18th, 2020
Ranganath

ಸುಬ್ರಹ್ಮಣ್ಯ : ಕುಕ್ಕೆ ಸುಬ್ರಹ್ಮಣ್ಯ ದ ಉತ್ತರಾದಿ ಮಠದ ಬಳಿ ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ಮದ್ಯಾಹ್ನ ಸಂಭವಿಸಿದೆ. ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಬೆಂಗಳೂರು ಮೂಲದ ರಂಗನಾಥ್ (25) ಎಂದು ಗುರುತಿಸಲಾಗಿದೆ. ಈತ ವಾರದ ಹಿಂದೆ ಮನೆ ಬಿಟ್ಟು ಸುಬ್ರಹ್ಮಣ್ಯಕ್ಕೆ ಬಂದಿದ್ದ ಎಂದು ತಿಳಿದು ಬಂದಿದೆ. ಈತನ ಆತ್ಮಹತ್ಯೆ ಗೆ ಕಾರಣ ಏನೆಂದು ತಿಳಿದು ಬಂದಿಲ್ಲ. ಮೃತ ದೇಹವನ್ನು ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ಯಲಾಗಿದೆ. ಘಟನಾ ಸ್ಥಳಕ್ಕೆ ಸುಬ್ರಹ್ಮಣ್ಯ ಪೋಲಿಸರು ಭೇಟಿ ನೀಡಿ […]

65 ವರ್ಷದ ದಲಿತ ವೃದ್ಧನ ಮೇಲೆ ಹಲ್ಲೆಗೈದು, ಮೂತ್ರ ಕುಡಿಸಿ ವಿಕೃತಿ ಮೆರೆದ ಯುವಕ

Tuesday, October 13th, 2020
amar

ಲಕ್ನೋ: ಮಗನ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿದಕ್ಕೆ ಪೊಲೀಸರಿಗೆ ದೂರು ನೀಡಿದ 65 ವರ್ಷದ ದಲಿತ ವೃದ್ಧನ ಮೇಲೆ ಹಲ್ಲೆಗೈದು, ಬಲವಂತವಾಗಿ ಮೂತ್ರ ಕುಡಿಸಿ ವಿಕೃತಿ ಮೆರೆದ ಘಟನೆ ಉತ್ತರಪ್ರದೇಶದ ಲಲಿತಪುರ ಗ್ರಾಮದ ರೊಡಾ ಎಂಬಲ್ಲಿ ನಡೆದಿದೆ. ಮೂತ್ರ ಕುಡಿಸಿದ  ಆರೋಪಿಯನ್ನು ಸೋನು ಯಾದವ್ ಎಂದು ಗುರುತಿಸಲಾಗಿದೆ. ಈತ ಕೆಲ ದಿನಗಳ ಹಿಂದೆ ವೃದ್ಧನ ಮಗನ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿದ್ದನು. ಹೀಗಾಗಿ ತಂದೆ- ಮಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಸೋನು ವಿರುದ್ಧ ದೂರು ದಾಖಲಿಸಿದ್ದರು. ದೂರು ದಾಖಲಾಲಾದ  […]

ಮುಖ್ಯಮಂತ್ರಿಯಾಗ ಬೇಕು ಎಂದು ಗೆಳೆಯರಲ್ಲಿ ಹೇಳಿಕೊಂಡಿದ್ದ ಯುವಕ, ಆತ್ಮಹತ್ಯೆಗೆ ಶರಣು

Thursday, October 8th, 2020
Youth Hangs

ಬೆಂಗಳೂರು : ಮುಖ್ಯಮಂತ್ರಿಯಾಗ ಬೇಕು ಎಂದು ಗೆಳೆಯರಲ್ಲಿ ಹೇಳಿಕೊಂಡಿದ್ದ ಯುವಕನೊರ್ವ ಕನಸು ಈಡೇರುವುದಿಲ್ಲ ಎಂದು ಜಿಗುಪ್ಸೆಗೊಂಡು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಜಯನಗರದ 4ನೇ ಹಂತದಲ್ಲಿ ಬುಧವಾರ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಶಶಾಂಕ್‌ (22) ಮೃತ ದುರ್ದೈವಿ. ತನ್ನ ಬಾಡಿಗೆ ಕೊಠಡಿಯಲ್ಲಿ ಬೆಳಗ್ಗೆ ಶಶಾಂಕ್‌ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೆಲ ಹೊತ್ತಿನ ಬಳಿಕ ಆತನ ಸ್ನೇಹಿತರು ಕೊಠಡಿಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಒಂದೂವರೆ ತಿಂಗಳ ಹಿಂದೆ ತನ್ನೂರಿನಿಂದ ಉದ್ಯೋಗ […]

ಹಳೆಯ ಕಟ್ಟಡದ ಗೋಡೆ ಕುಸಿದು ಬಿದ್ದು ಯುವಕ ಮೃತ್ಯು, ಇಬ್ಬರಿಗೆ ಗಂಭೀರ ಗಾಯ

Sunday, August 30th, 2020
wall colapse

ಬಂಟ್ವಾಳ : ಹಳೆಯ ಕಟ್ಟಡದ ಗೋಡೆ ಕುಸಿದು ಬಿದ್ದ ಪರಿಣಾಮ ಸ್ಥಳದಲ್ಲಿದ್ದ ಯುವಕ ಮೃತಪಟ್ಟು, ಬಾಲಕ ಸೇರಿದಂತೆ ಇಬ್ಬರು ಗಾಯಗೊಂಡ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಅಮ್ಮುಂಜೆ ಎಂಬಲ್ಲಿ ನಡೆದಿದೆ. ಅಮ್ಮುಂಜೆ ಗ್ರಾಮದ ಮಾದಕೋಡಿ ಎಂಬಲ್ಲಿ ಘಟನೆ ನಡೆದಿದ್ದು, ಬಂಟ್ವಾಳ ತಾಲೂಕಿನ ಶಂಭೂರು ಗ್ರಾಮದ ಗುಡ್ಡೆ ಮನೆ ನಿಲಯ್ಯ ಪೂಜಾರಿ ಎಂಬವರ ಪುತ್ರ ಜನಾರ್ಧನ ಅಂಚನ್ (35) ಮೃತಪಟ್ಟಿದ್ದಾರೆ. ಉಳಿದಂತೆ ಬಾಲಕ ವೃಷಭ (11) ಹಾಗೂ ಸೂರಜ್ (20) ಘಟನೆ ಯಲ್ಲಿ ಅಲ್ಪಸ್ವಲ್ಪ ಗಾಯಗೊಂಡು […]

ಕಿನ್ನಿಗೋಳಿಯ ಯುವಕ ಕುವೈಟ್‌ನ ಸಾಲ್ಮಿಯಾ ಬೀಚ್‌ನಲ್ಲಿ ನೀರು ಪಾಲು

Sunday, July 19th, 2020
Mohammed Anish

ಮಂಗಳೂರು : ಕಿನ್ನಿಗೋಳಿಯ ಯುವಕನೊಬ್ಬ ಕುವೈಟ್‌ನ ಸಾಲ್ಮಿಯಾ ಬೀಚ್‌ನಲ್ಲಿ ಮುಳುಗುತ್ತಿದ್ದ ಅಪರಿಚಿತ ವ್ಯಕ್ತಿಯೋರ್ವನ ರಕ್ಷಣೆ ಮಾಡಲು ಮುಂದಾದಾಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಶನಿವಾರ ಸಂಜೆ  ನಡೆದಿದೆ. ಮೃತ ವ್ಯಕ್ತಿಯನ್ನು ಮಂಗಳೂರು ಹೊರವಲಯದ ಕಿನ್ನಿಗೋಳಿ ನಿವಾಸಿ ಮೊಹಮ್ಮದ್ ಅನೀಸ್ (28) ಎಂದು ಗುರುತಿಸಲಾಗಿದೆ. ಭಾರತೀಯ ಕಾಲಮಾನ 8.30 ಕ್ಕೆ ಕುವೈಟ್ ರಾಷ್ಟ್ರದ ಸಾಲ್ಮಿಯಾ ಬೀಚ್‌ನಲ್ಲಿ ಅನೀಸ್ ತನ್ನ ಸ್ನೇಹಿತರ ಜೊತೆಗೂಡಿ ಈಜಲು‌ ತೆರಳಿದ್ದು ಸಮುದ್ರ ಪಾಲಾಗುತ್ತಿದ್ದ ಈಜಿಪ್ಟ್‌ನ ಅಪರಿಚಿತ ಯುವಕನ ರಕ್ಷಣೆಗೆ ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಅನೀಸ್‌ ನೀರಿನಲ್ಲಿ ಮುಳುಗಿದ್ದು […]

ಕಾರ್ಮಿಕರು ತೋಡಿದ ಗುಂಡಿಗೆ ಬಿದ್ದ ಕರುವನ್ನು ರಕ್ಷಿಸಿದ ಸ್ಥಳೀಯ ಯುವಕರು

Thursday, July 16th, 2020
nikhil-poojary

ಮಂಗಳೂರು : ತಣ್ಣೀರುಬಾವಿ ಬೀಚ್ ಗೆ ಹೋಗುವ ರಸ್ತೆ ಬದಿಯಲ್ಲಿ ಗುತ್ತಿಗೆ ಕಾರ್ಮಿಕರು ತೋಡಿದ ಗುಂಡಿಗೆ ಕರುವೊಂದು ಬಿದ್ದ ಕರು ವೊಂದನ್ನು ಸ್ಥಳೀಯ ಯುವಕರ  ಗುಂಪೊಂದು ರಕ್ಷಿಸಿದೆ. ಅದೇ ರಸ್ತೆಯಲ್ಲಿ ಪ್ರಯಾಣಿಸುತಿದ್ದ ನಿಖಿಲ್ ಪೂಜಾರಿ ನೀರು ತುಂಬಿದ ಹೊಂಡಕ್ಕೆ ಇಳಿದು ಒದ್ದಾಡುತ್ತಿದ್ದ ಕರುವನ್ನು ಮೇಲೆಕೆತ್ತಿ ರಕ್ಷಣೆ ಮಾಡಿದ್ದಾರೆ. ಪ್ರಾಣಪಾಯದಲ್ಲಿದ್ದ ಕರುವನ್ನು ರಕ್ಷಿಸಿ, ಜೀವ ಉಳಿಸಿದ್ದಾರೆ. ನಿಖಿಲ್ ಪೂಜಾರಿಗೆ ಸ್ಥಳೀಯ ಯುವಕರು, ಅಗ್ನಿಶಾಮಕ ದಳದವರು ಸಹಕರಿಸಿದ್ದಾರೆ. ನೀರು ತುಂಬಿದ ಗುಂಡಿಯಲ್ಲಿ ಮುಳುಗಿದ್ದ ಕರುವಿಗೆ ಮರು ಜೀವಕೊಟ್ಟ ನಿಖಿಲ್ ಪೂಜಾರಿ ಹಾಗು ಸಹಕರಿಸಿದ ಸ್ಥಳೀಯ […]

ಅಣ್ಣನ ಮಗಳನ್ನು ಪ್ರೀತಿಸುತ್ತಿದ್ದ ಯುವಕನನ್ನು ಗುಂಡಿಟ್ಟು ಹತ್ಯೆ ಮಾಡಿದ ಚಿಕ್ಕಪ್ಪ

Thursday, July 16th, 2020
hasan murder

ಹಾಸನ: ಯುವತಿಯೊಬ್ಬಳನ್ನು ಒಂದು ಬಾರಿ ಅಪಹರಿಸಿ ಬುದ್ದಿ ಮಾತು ಹೇಳಿದ್ದರು ಕೇಳದೆ ಎರಡನೇ ಬಾರಿ ಅಪಹರಣಕ್ಕೆ ಯತ್ನಿಸಿದಾಗ  30 ವರ್ಷದ ಯುವಕನನ್ನು ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಆಲೂರು ತಾಲೂಕಿನ ಸೊಪ್ಪಿನಹಳ್ಳಿಯಲ್ಲಿ ನಡೆದಿದೆ. ಮಧು (30) ಮೃತಪಟ್ಟ ವ್ಯಕ್ತಿಯಾಗಿದ್ದಾನೆ. ಮಧು ಸೊಪ್ಪಿನಹಳ್ಳಿಯ ನಿವಾಸಿಯಾಗಿದ್ದು, ಇದೇ ಗ್ರಾಮದ ಮತ್ತೊಬ್ಬ ನಿವಾಸಿ ರೂಪೇಶ್ ಹತ್ಯೆ ಮಾಡಿದ ಆರೋಪಿಯಾಗಿದ್ದಾನೆ. ಮೃತಪಟ್ಟ ಮಧು ಆರೋಪಿ ರೂಪೇಶ್ ಅಣ್ಣನ ಮಗಳನ್ನು ಪ್ರೀತಿಸಿದ್ದು, ಕೆಲ ತಿಂಗಳ ಹಿಂದಷ್ಟೇ ಆಕೆಯನ್ನು ಅಪಹರಿಸಿ ಬೆಂಗಳೂರಿಗೆ ಕರೆದೊಯ್ದಿದ್ದ ಎಂದು ಹೇಳಲಾಗುತ್ತಿದೆ. ಈ ಸಂಬಂಧ […]

ಎಂಟು ಜನ ಗಾಂಜಾ ವ್ಯಸನಿಗಳ ತಂಡದಿಂದ ಯುವಕರ ಮೇಲೆ ತಲವಾರು ಹಲ್ಲೆ

Tuesday, July 14th, 2020
Bajilakeri Gangwar

ಮಂಗಳೂರು : ನಗರದ ಬಜಿಲಕೇರಿಯಲ್ಲಿ ಜುಲೈ 13 ರ ಸೋಮವಾರ ತಡರಾತ್ರಿ  ಸುಮಾರು ಎಂಟು ಜನರ ತಂಡವೊಂದು ಯುವಕನ ಮೇಲೆ ದಾಳಿ ಮಾಡಿದೆ, ಮಾರಕ ಆಯುಧ ಹೊಂದಿದ್ದ ಗ್ಯಾಂಗ್ ಮೂವರು ಯುವಕರ ಮೇಲೆ ಹಲ್ಲೆ ನಡೆಸಿದೆ. ಕ್ಷುಲ್ಲಕ ಕಾರಣಗಳಿಂದ ಈ ದಾಳಿ ನಡೆದಿದೆ ಎಂದು ವರದಿಯಾಗಿದೆ. ಗಾಯಗೊಂಡ ಮೂವರು ಇಲ್ಲಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪೊಲೀಸರು ಅಪರಾಧ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಗ್ಯಾಂಗ್ ಕೃತ್ಯ ನಡೆಸಿದ್ದ ಸ್ಥಳದಲ್ಲಿನ ಮನೆ ಮುಂದಿನ ವಸ್ತುಗಳನ್ನು ಹಾನಿಗೊಳಿಸಿದೆ. ಯುವಕರು ಗಾಂಜಾ […]

ನ್ಯಾಯದ ನಿರೀಕ್ಷೆ ಮೂಡಿದೆ : ಮುನೀರ್ ಕಾಟಿಪಳ್ಳ

Wednesday, July 2nd, 2014
Muneer Katipalla

ಮಂಗಳೂರು : ಎರಡು ತಿಂಗಳ ನಿರಂತರ ಹೋರಾಟದ ನಂತರ ಸರಕಾರ ರಾಜೇಶ್ ಪೂಜಾರಿ ಕೊಲೆ ಪ್ರಕರಣದ ಮರು ತನಿಖೆಗೆ ಆದೇಶಿಸಿದೆ. ಸರಕಾರದ ಈ ನಿರ್ಧಾರದಿಂದ ಪ್ರಕರಣದಲ್ಲಿ ನ್ಯಾಯದ ನಿರೀಕ್ಷೆ ಮೂಡಿದೆ ಎಂದು ಆಙಈ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದ್ದಾರೆ. ರಾಜೇಶ್ ಪೂಜಾರಿ ಕೊಲೆ ಪ್ರಕರಣದ ಆರೋಪಿಗಳು ಎಂದು ಮಲ್ಲೂರು ಗ್ರಾಮದ ಹುಸೈನ್, ಇಮ್ರಾನ್, ಇರ್ಷಾದ್ ಎಂಬ ಅಮಾಯಕ ಯುವಕರ ಬಂಧನವಾದಾಗಲೇ ಸಂಬಂಧಪಟ್ಟ ಜನಪ್ರತಿನಿಧಿಗಳನ್ನು ಕಂಡು ನ್ಯಾಯಕ್ಕಾಗಿ ಆಗ್ರಹಿಸಲಾಗಿತ್ತು. ಆನಂತರ ನಿರಂತರವಾಗಿ ಹೋರಾಟಗಳನ್ನು ನಡೆಸಿ ಮರು ತನಿಖೆಗೆ ಒತ್ತಾಯಿಸಲಾಗಿತ್ತು. […]