ಬೆಂಗಳೂರಿನ ಕಾಂತರಾಜ್ ಮತ್ತು ತಂಡದವರಿಂದ ಪುಷ್ಪಾಲಂಕಾರ ಸೇವೆ

Thursday, December 6th, 2018
decoration

ಧರ್ಮಸ್ಥಳ: ಬೆಂಗಳೂರಿನ ಕಾಂತರಾಜ್ ಮತ್ತು ಬಳಗದವರು ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂದರ್ಭದಲ್ಲಿ ಗುರುವಾರ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನ, ಹೆಗ್ಗಡೆಯವರ ನಿವಾಸ (ಬೀಡು) ಹಾಗೂ ದೇವಸ್ಥಾನದ ಒಳಾಂಗಣವನ್ನು ಪುಷ್ಪಾಲಂಕಾರ ಮಾಡಿ ಸೇವೆಯಿಂದ ಧನ್ಯತೆಯನ್ನು ಹೊಂದಿದರು. ಸುಮಾರು ನಾಲ್ಕು ಲಕ್ಷ ರೂಪಾಯಿ ಮೌಲ್ಯದ ವಿವಿಧ ಅಲಂಕಾರಿಕ ಹೂ ಗಳನ್ನು ಬೆಂಗಳೂರಿನಿಂದ ತಂದು ಗುರುವಾರ ಅಲಂಕಾರ ಸೇವೆಯನ್ನು ಸಮರ್ಪಿಸಿದರು. ಇವರ ಜೊತೆ ರವಿ, ರಮೇಶ್, ಮತ್ತು ಮಂಜು ಹಾಗೂ ಇತರ ಭಕ್ತಾದಿಗಳು ಸಹಕರಿಸಿದರು.

ಗಾಂಜಾ ಹೊಂದಿದ್ದ ಆರೋಪಿಗಳಿಬ್ಬರ ಸೆರೆ

Friday, July 20th, 2018
ganja-case

ಮಂಗಳೂರು: ಗಾಂಜಾವನ್ನು ಹೊಂದಿದ್ದ ಆರೋಪಿಗಳಿಬ್ಬರನ್ನು ಮಂಗಳೂರು ಹೊರವಲಯದ ಅಲೈಗುಡ್ಡೆ ಎಂಬಲ್ಲಿ ಬಜ್ಪೆ ಠಾಣಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬೆಂಗಳೂರು ರಾಜಾಜಿನಗರದ ರವಿ ಅಲಿಯಾಸ್ ಟಿಕ್ಕಿರವಿ(34) ಮತ್ತು ಗುರುಪುರ ಅಲೈಗುಡ್ಡೆ ಗುರುನಗರ ನಿವಾಸಿ ಸಂದೀಪ್ (32) ಬಂಧಿತ ಆರೋಪಿಗಳು. ಬಂಧಿತರಿಂದ 5500 ರೂ. ಮೌಲ್ಯದ 55 ಗ್ರಾಂ ಗಾಂಜಾ, ಆಲ್ಟೋಕಾರು ಮತ್ತು ಹೋಂಡಾ ಆ್ಯಕ್ಟಿವಾ ಸ್ಕೂಟರನ್ನು ವಶಪಡಿಸಿಕೊಳ್ಳಲಾಗಿದೆ. ಬಜಪೆ ಠಾಣಾ ನಿರೀಕ್ಷಕ ಪರಶಿವಮೂರ್ತಿ ಅವರು ಗಸ್ತು ತಿರುಗುತ್ತಿದ್ದ ವೇಳೆ ಬಂದ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು […]

ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ವಂಚನೆ..ಆರೋಪಿ ಸೆರೆ!

Saturday, July 7th, 2018
arrested

ಪುತ್ತೂರು: ಯುವತಿಯನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಆಕೆಯಿಂದ ಹಣ ಪಡೆದು, ದೈಹಿಕ ಸಂಪರ್ಕ ಬೆಳೆಸಿ ವಂಚಿಸಿದ ಪ್ರಕರಣಕ್ಕೆ ಸಂಬಂಧಟ್ಟಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪುತ್ತೂರು ಹಾರಾಡಿ ನಿವಾಸಿ ರಿಕ್ಷಾ ಚಾಲಕ ರವಿ ಎಂಬಾತ ಬಂಧಿತ ಆರೋಪಿ. ಈತ ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮದ ಯುವತಿಯೋರ್ವಳನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಆಕೆಯಿಂದ ಕಿವಿ ಓಲೆ ಹಾಗೂ ಬೇರೆ ಬೇರೆ ಸಂದರ್ಭದಲ್ಲಿ ಒಟ್ಟು 70,000 ರೂಪಾಯಿಯನ್ನು ಪಡೆದಿದ್ದ. ಜೊತೆಗೆ 2018ರ ಎಪ್ರಿಲ್ 12ರಂದು ತನ್ನ ಮನೆಯನ್ನು ತೋರಿಸುವುದಾಗಿ ಹೇಳಿ ಪುತ್ತೂರು […]

ವೃದ್ಧನ ಮೃತದೇಹವನ್ನು ಹೆಗಲ ಮೇಲೆ ಹೊತ್ತು ಮನೆಗೆ ತಲುಪಿಸಿದ ಪೊಲೀಸರು!

Monday, March 5th, 2018
mangaluru

ಮಂಗಳೂರು: ಕುಸಿದು ಬಿದ್ದು ಸಾವನ್ನಪ್ಪಿದ ವೃದ್ಧನ ಮೃತದೇಹವನ್ನು ಪೊಲೀಸರೇ ಮನೆಗೆ ತಲುಪಿಸಿ ಮಾನವೀಯತೆ ಮೆರೆದಿರುವ ಘಟನೆ ಪುತ್ತೂರು ತಾಲೂಕು ಕೊಯಿಲ ಗ್ರಾಮದ ಗುಲ್ಗೋಡಿ ಎಂಬಲ್ಲಿ ನಡೆದಿದೆ. ತರಿಕೆರೆಯ ಜಂಬದಹಳ್ಳಿಯ ಪಳನಿಸ್ವಾಮಿ (80)ಕುಸಿದು ಬಿದ್ದು ಸಾವನ್ನಪ್ಪಿದ್ದರು. ಊರಿನಲ್ಲಿ ದೈವದ ನೇಮ ಇದ್ದ ಕಾರಣ ಶವ ಹೊರಲು ಗ್ರಾಮಸ್ಥರು ಯಾರೂ ಮುಂದೆ ಬಾರದ್ದಕ್ಕೆ ಅಸಹಾಯಕವಾಗಿದ್ದ ಕುಟುಂಬಕ್ಕೆ ಪೊಲೀಸರು ನೆರವಾದರು. ಪುತ್ತೂರು ಠಾಣೆಯ ಪಿಎಸ್ಐ ಪ್ರಕಾಶ್, ಎಎಸ್ಐ ರವಿ, ಹೋಂಗಾರ್ಡ್ ಸಂದೇಶ್ ಅವರು ವೃದ್ಧನ ಮೃತದೇಹವನ್ನು ಹೊತ್ತು ಮನೆ ತಲುಪಿಸಿದರು.