ಬಜೆಟ್ ಅತ್ಯಂತ ನಿರಾಶಾದಾಯಕ – ಮಂಜುನಾಥ ಭಂಡಾರಿ

Friday, March 4th, 2022
Manjunatha Bhandary

ಮಂಗಳೂರು  : ಈ ವರ್ಷದ ರಾಜ್ಯ ಬಜೆಟ್ ಅತ್ಯಂತ ನಿರಾಶಾದಾಯಕವಾಗಿದೆ. ಗ್ರಾಮ ಪಂಚಾಯತಿಗೆ ಕೊಡುವಂತಹ ಅನುದಾನ ಹಾಗೂ ಗ್ರಾಮ ಪಂಚಾಯತಿ ಸದಸ್ಯರ ಗೌರವಧನ ಮತ್ತು ಇತರ ಭತ್ಯೆಗಳನ್ನು ಹೆಚ್ಚಿಸಬೇಕೆಂದು ಚುನಾಯಿತ ಪ್ರತಿನಿಧಿಗಳಾದ ನಾವು ಸರಕಾರದ ಮುಂದಿಟ್ಟ ಬೇಡಿಕೆಯನ್ನು ನಿರ್ಲಕ್ಷಿಸಿದ್ದಕ್ಕೆ ಅತ್ಯಂತ ಬೇಸರವಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಮಾರ್ಗಸೂಚಿಯಂತೆ ಶೈಕ್ಷಣಿಕ ಕ್ಷೇತ್ರದಲ್ಲಿ ಯಾವುದೇ ಮಹತ್ವದ ಘೋಷಣೆಯಾಗಿಲ್ಲ ಹಾಗೂ ಈಗಾಗಲೇ ಇದ್ದ ಸರಕಾರಿ ಕಾಲೇಜುಗಳನ್ನು ನಡೆಸಲು ಸಾಧ್ಯವಾಗದ ಸರಕಾರ ಹಳೆಯ ಸರಕಾರಿ ಇಂಜಿನಿಯರಿಂಗ್ ಕಾಲೇಜುಗಳ ಹೆಸರನ್ನು ಕರ್ನಾಟಕ […]

ರಾಜ್ಯ ಬಜೆಟ್ ನಲ್ಲಿ ಕಾಫಿ ಸಮಸ್ಯೆಗೆ ಸೂಕ್ತ ಪರಿಹಾರ ಕಲ್ಪಿಸುವುದಾಗಿ ಮುಖ್ಯಮಂತ್ರಿ ಭರವಸೆ

Friday, February 14th, 2020
CM

ಮಡಿಕೇರಿ : ಬೆಂಗಳೂರಿನ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಗುರುವಾರ ಬೆಂಗಳೂರಿನ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಆಯೋಜಿತ 2020-21ನೇ ಸಾಲಿನ ಆಯ-ವ್ಯಯ ಮೇಲಿನ ಪೂರ್ವಭಾವಿ ಚಚೆ೯ಯಲ್ಲಿ ಕನಾ೯ಟಕ ಬೆಳೆಗಾರರ ಒಕ್ಕೂಟದ ಪ್ರಮುಖರು ಪಾಲ್ಗೊಂಡು ಕಾಫಿ ಬೆಳೆಗಾರರ ಸಮಸ್ಯೆಗೆ ಬಜೆಟ್ ನಲ್ಲಿ ಸೂಕ್ತ ಪರಿಹಾರ ನೀಡುವಂತೆ ಮನವಿ ಮಾಡಿದರು. ಕಾಫಿ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಮುಖ್ಯಮಂತ್ರಿಗಳಿಗೆ ಕೂಲಂಕುಶವಾಗಿ ಮನವರಿಕೆ ಮಾಡಿಕೊಡಲಾಯಿತು. ಕನಾ೯ಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಯು.ಎಂ.ತೀರ್ಥ ಮಲ್ಲೇಶ್ ಕಾಫಿ ಬೆಳೆಗಾರರ ಹಲವಾರು ಬೇಡಿಕೆಗಳನ್ನು ಮುಖ್ಯಮಂತ್ರಿಗಳ […]

ರಾಜ್ಯ ಬಜೆಟ್‍ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಕೊಡುಗೆಗಳು

Thursday, March 16th, 2017
State budget

ಮಂಗಳೂರು  :- ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಬುಧವಾರ ಮಂಡಿಸಿದ ರಾಜ್ಯ ಬಜೆಟ್‍ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಹಲವಾರು ಪ್ರಮುಖ ಕೊಡುಗೆಗಳು ದೊರಕಿವೆ; 50 ಕೋಟಿ ರೂ. ವೆಚ್ಚದಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ರಾಜ್ಯ ಹೆದ್ದಾರಿ-67ರ ಮಂಗಳೂರು-ಅತ್ರಾಡಿ ರಸ್ತೆಯಲ್ಲಿ 2.5 ಕಿ.ಮೀ. ಉದ್ದ ರಸ್ತೆಯ ಅಭಿವೃದ್ಧಿ ( ಕಾವೂರು-ಮರಕಡ ಮಹಾನಗರಪಾಲಿಕೆ ಗಡಿಯಿಂದ ಕೆಂಜಾರು ವಿಮಾನ ನಿಲ್ದಾಣದ ಪ್ರವೇಶ ದ್ವಾರದವರೆಗೆ ಚತುಷ್ಫಥ ರಸ್ತೆ). ಮಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ವಿಸ್ತರಣೆಗೆ 286 ಎಕರೆ ಭೂಸ್ವಾಧೀನಕ್ಕಾಗಿ ಭಾರತ ವಿಮಾನ ನಿಲ್ದಾಣ […]

ರಾಜ್ಯ ಬಜೆಟ್ : ಗ್ರಾಮೀಣ ಅಭಿವೃದ್ಧಿಯ ಜೊತೆಗೆ ನಗರ ಅಭಿವೃದ್ಧಿಗೆ ವಿಶೇಷ ಆದ್ಯತೆ

Thursday, February 24th, 2011
ರಾಜ್ಯ ಬಜೆಟ್

ಬೆಂಗಳೂರು : ರಾಜ್ಯ ಸರಕಾರದ ಆಡಳಿತಾವದಿಯ ಎರಡೂವರೆ ವರ್ಷದ ಅವದಿಯಲ್ಲಿ ಸತತವಾಗಿ ಆರನೇ ಬಾರಿಗೆ  ಬಜೆಟ್ ಮಂಡಿಸಿದ ಕರ್ನಾಟಕದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅನ್ನದಾತನ ಹೊಲದಲ್ಲಿ ಚಿನ್ನದ ಹೊಳೆಯನ್ನೇ ಹರಿಸಿದ್ದಾರೆ. ದಕ್ಷಿಣ ಭಾರತದ ಏಕೈಕ ಬಿಜೆಪಿ ಸರ್ಕಾರ ಎಂದಿಗೂ ಅನ್ನದಾತರ ಪರ ಎಂದ ಸಿಎಂ, ರೈತರ ನಾಡಗೀತೆ ‘ನೇಗಿಲ ಹಿಡಿದು.. ಉಳುವ ಯೋಗಿಯ..’ ಸಾಲುಗಳನ್ನು ಹೇಳಿದರು. ನಂತರ ಕೋಟಿ ವಿದ್ಯೆಗಳಿಗಿಂತ ಮೇಟಿ ವಿದ್ಯೆಯೆ ಮೇಲು ಎನ್ನುತ್ತಾ ಆಯವ್ಯಯ ಪತ್ರವನ್ನು ಸದನದಲ್ಲಿ ಮಂಡಿಸಿದರು. ಕೃಷಿ ಬಜೆಟ್ ಮಂಡಿಸಿದ ಬಳಿಕ  […]