ರಾಮಾಯಣ-ಮಹಾಭಾರತ-ಪಂಚತಂತ್ರ ಪರೀಕ್ಷಾ ಪ್ರಮಾಣ ಪತ್ರ ವಿತರಣೆ

Saturday, March 14th, 2020
ramayana

ಮೂಡುಬಿದಿರೆ : ನಮ್ಮ ದೇಶದಲ್ಲಿರುವ ಸಂಪ್ರದಾಯ, ಸಂಸ್ಕೃತಿ, ಸಂಸ್ಕಾರಗಳು ಬೇರೆಲ್ಲಿಯೂ ಕಾಣಲು ಸಾಧ್ಯವಿಲ್ಲ. ಇದೆಲ್ಲದಕ್ಕೂ ಮೂಲಾಧಾರ ನಮ್ಮ ರಾಮಯಣ ಮಹಾಭಾರತ ಗ್ರಂಥಗಳು ಎಂದು ಆಳ್ವಾಸ್ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಂಯೋಜಕ ಹಾಗೂ ಯಕ್ಷಕವಿ ಪ್ರೋ ಪವನ ಕಿರಣ್‌ಕೆರೆ ಹೇಳಿದರು. ಇವರು ಆಳ್ವಾಸ್ ಕಾಲೇಜಿನ ಪದವಿ ಸಂಸ್ಕೃತ ವಿಭಾಗ ಆಯೋಜಿಸಿದ 2019-20ನೇ ಸಾಲಿನ ರಾಮಾಯಣ-ಮಹಾಭಾರತ-ಪಂಚತಂತ್ರ ಪರೀಕ್ಷಾ ಪ್ರಮಾಣ ಪತ್ರ ವಿತರಣೆ ಮತ್ತು ಉಪನ್ಯಾಸ ಕಾರ‍್ಯಕ್ರಮದಲ್ಲಿ ಮಾತನಾಡಿದರು. ಈ ಗ್ರಂಥಗಳು ನೀಡಿರುವ ಸಂದೇಶಗಳು ಸರ್ವಕಾಲಿಕವಾದವುಗಳು. ವಿದ್ಯಾರ್ಥಿಗಳು ರಾಮಾಯಣ ಮಹಾಭಾರತ ಓದುವುದರಿಂದ […]

ಗೋಹಂತಕರಿಗೆ ಬೆಂಬಲ ಕೊಡುವುವರಿಗೆ ದೇವಸ್ಥಾನಕ್ಕೆ ಪ್ರವೇಶ ನೀಡಬಾರದು: ಶರಣ್ ಪಂಪ್ ವೆಲ್

Friday, October 12th, 2018
sharan-pampwell

ಮಂಗಳೂರು: ಪ್ರಪಂಚದಲ್ಲಿ ಜನ ಗೋವಿಗೆ ವಿಶೇಷವಾದ ಗೌರವ ಕೊಡ್ತಾರೆ. ಗೋವನ್ನು ಭಾರತೀಯರು ದೇವರೆಂದು ಪೂಜಿಸುತ್ತಾರೆ. ಗೋವು ದೇವತೆ ಮಾತ್ರ ಅಲ್ಲ ದೇಶದ ಆರ್ಥಿಕ ಅಭಿವೃದ್ಧಿಗೂ  ವಿಶೇಷ ಸ್ಥಾನವನ್ನು ಪಡೆದಿದೆ ಎಂದು ಬಜರಂಗದಳ ಮುಖಂಡ ಶರಣ್ ಪಂಪ್ ವೆಲ್ ಹೇಳಿದ್ದಾರೆ. ಸಚಿವ ಯು.ಟಿ.ಖಾದರ್ ವಿರುದ್ದ ಪರೋಕ್ಷವಾಗಿ ಮಾತಿನ ದಾಳಿ ಮಾಡಿದ ಅವರು ಗೋಹಂತಕರಿಗೆ ಬೆಂಬಲ ಕೊಡುವುವರಿಗೆ ದೇವಸ್ಥಾನಕ್ಕೆ ಪ್ರವೇಶ ನೀಡಬಾರದು ಮತ್ತು ಅಂಥವರಿಗೆ ದೇವಸ್ಥಾನದ ಕಾರ್ಯಕ್ರಮಗಳಿಗೆ ಆಹ್ವಾನ ನೀಡಬಾರದು ಎಂದು ಹೇಳಿದ್ದಾರೆ. ಸ್ಮಾರ್ಟ್ ಸಿಟಿ ಹಣ ಕಸಾಯಿಖಾನೆಗೆ‌ ಮೀಸಲಿಟ್ಟ ವಿಚಾರಕ್ಕೆ ಸಂಬಂಧಿಸಿ […]

ವಾಲ್ಮೀಕಿ ರಾಮಾಯಣದ ತತ್ವಾದರ್ಶಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಅಗತ್ಯವಿದೆ : ಪಾಲೆಮಾರ್‌

Wednesday, October 12th, 2011
Krishan Palemar

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಆಡಳಿತ, ದ.ಕ. ಜಿಲ್ಲಾ ಪಂಚಾಯತ್‌, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ದ.ಕ. ವಾಲ್ಮೀಕಿ ನಾಯಕ ಅಸೋಸಿಯೇಶನ್‌ ಸಂಯುಕ್ತ ಆಶ್ರಯದಲ್ಲಿ ಜಿ.ಪಂ. ಸಭಾಂಗಣದಲ್ಲಿ ಮಂಗಳವಾರ ಮಹರ್ಷಿ ವಾಲ್ಮೀಕಿ ಜನ್ಮ ದಿನಾಚರಣೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ. ಪಾಲೆಮಾರ್‌ ಅವರು ಉದ್ಘಾಟಿಸಿದರು. ವಾಲ್ಮೀಕಿ ಮಹರ್ಷಿ ಅವರು ರಾಮಾಯಣ ಗ್ರಂಥದಲ್ಲಿ ಸಾತ್ವಿಕ ಸಮಾಜ ನಿರ್ಮಾಣ ಹಾಗೂ ರಾಮ ರಾಜ್ಯದ ಕನಸನ್ನು ಬಿತ್ತಿದ್ದಾರೆ. ಮುಂದಿನ ಪೀಳಿಗೆಗೆ […]