ರಾಷ್ಟ್ರೀಯ ಪೌರತ್ವ ನೋಂದಣಿ ದುರುದ್ದೇಶ ಪೂರಿತ; ಆರೋಪ
Tuesday, December 10th, 2019ಮಡಿಕೇರಿ : ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಂಡಿಸಿರುವ ರಾಷ್ಟ್ರೀಯ ಪೌರತ್ವ ನೋಂದವಣಿ ಮಸೂದೆಯು ಅನಗತ್ಯ, ದುರುದ್ದೇಶಪೂರಿತ ಮತ್ತು ಮುಸ್ಲಿಂ ಸಮಾಜವನ್ನು ನೇರವಾಗಿ ಆಕ್ರಮಿಸುವ ಸಂವಿಧಾನ ವಿರೋಧಿ ನಡೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಎಂ.ಎ.ಉಸ್ಮಾನ್ ಆರೋಪಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಈಗಾಗಲೇ ಅಸ್ಸಾಂನಲ್ಲಿ 1300 ಕೋಟಿ ರೂಪಾಯಿ ಖರ್ಚುಮಾಡಿ ಪೌರತ್ವ ನೋಂದಣಿ ಯೋಜನೆ ಜಾರಿ ಮಾಡಿದ್ದರಿಂದ 19 ಲಕ್ಷ ಮಂದಿ ಅತಂತ್ರರಾಗಿದ್ದು, ಇವರನ್ನು ಏನು ಮಾಡಬೇಕೆಂಬ ತೀರ್ಮಾನಕ್ಕೆ ಬರಲು ಈವರೆಗೂ […]