ಕೇಂದ್ರ ಸರಕಾರದ ಬೆಲೆಯೇರಿಕೆ ವಿರುದ್ದ ಕುಂಬಳೆಯಲ್ಲಿ ಕಾಂಗ್ರೆಸ್ಸ್ ಪ್ರತಿಭಟನೆ
Tuesday, January 12th, 2016ಕುಂಬಳೆ: ನರೇಂದ್ರಮೋದಿಯವರ ನೇತೃತ್ವದ ಕೇಂದ್ರ ಸರಕಾರ ನೀಡಿರುವ ಆಶ್ವಾಸನೆಗಳನನು ಹುಸಿಗೊಳಿಸಿ ಜನದ್ರೋಹ ಕಾರ್ಯತಂತ್ರಗಳನ್ನು ಹೆಣೆದು ಜನ ಸಾಮಾನ್ಯರ ಬದುಕನ್ನು ಹತಾಶೆಗೆ ತಳ್ಳುತ್ತಿದೆಯೆಂದು ಜಿಲ್ಲಾ ಕಾಂಗ್ರೆಸ್ಸ್ ಉಪಾಧ್ಯಕ್ಷ ಹಕೀಂ ಕುನ್ನಿಲ್ ಅಭಿಪ್ರಾಯ ವ್ಯಕ್ತಪಡಿಸಿದರು. ಮಂಡಲ ಕಾಂಗ್ರೆಸ್ಸ್ ನೇತೃತ್ವದಲ್ಲಿ ಕೇಂದ್ರ ಸರಕಾರದ ಬೆಲೆಯೇರಿಕೆ ಕ್ರಮಗಳ ವಿರುದ್ದ ಮಂಗಳವಾರ ಕುಂಬಳೆ ಅಂಚೆ ಕಚೇರಿಗೆ ನಡೆಸಿದ ಪ್ರತಿಭಟನೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಮೋದಿ ಜನರನ್ನು ಮರುಳುಗೊಳಿಸುವ ಹೇಳಿಕೆಗಳನ್ನಷ್ಟೇ ನೀಡುತ್ತಿದ್ದಾರೆ. ಕಾರ್ಯಕ್ಷಮತೆಯ ಯಾವುದೇ ಯೋಜನೆಗಳನ್ನು ಜನ ಸಾಮಾನ್ಯರಿಗೆ ನೀಡುವಲ್ಲಿ ವಿಫಲವಾಗಿದೆಯೆಂದು ಅವರು ಟೀಕಿಸಿದರು. ಮಂಡಲ […]