ಆ್ಯಂಬುಲೆನ್ಸ್ ಗೆ ದಾರಿಬಿಟ್ಟು ಕೊಡದೆ ಸತಾಯಿಸಿದ ಕಾರು ಚಾಲಕನ ಬಂಧನ

Thursday, January 20th, 2022
Monish

ಮಂಗಳೂರು : ನಗರದಿಂದ ಭಟ್ಕಳಕ್ಕೆ ಗಂಭೀರ ಸ್ಥಿತಿಯಲ್ಲಿದ್ದ ರೋಗಿಯನ್ನು ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸ್ ಗೆ ದಾರಿಬಿಟ್ಟು ಕೊಡದೆ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ಮೋನಿಶ್ ಎಂದು ಗುರುತಿಸಲಾಗಿದೆ. ಮಂಗಳೂರು ಉತ್ತರ ಸಂಚಾರಿ ಠಾಣೆಯಲ್ಲಿ ಯು ಎಸ್ 279 ಐಪಿಸಿ ಮತ್ತು 184 ಐಎಂವಿ ಆಕ್ಟ್ ಪ್ರಕಾರ ಪ್ರಕರಣ ದಾಖಲಾಗಿದೆ. ಇದೇ ಕಾರಿನ ಚಾಲಕನು ಉಡುಪಿಯಿಂದ ಮಂಗಳೂರಿಗೆ ಬರುತ್ತಿದ್ದ ಆ್ಯಂಬುಲೆನ್ಸ್‌ಗೆಕಿರುಕುಳ ನೀಡಿದ್ದಾನೆ ಎಂಬ ಆರೋಪವೂ ವ್ಯಕ್ತವಾಗಿದೆ. ನಗರದ ಫಾದರ್ ಮುಲ್ಲರ್ ಆಸ್ಪತ್ರೆಯಿಂದ ರೋಗಿಯನ್ನು ಬುಧವಾರ […]

ಆಟೋರಿಕ್ಷಾ ಮುಂಬದಿ ಕವಚದ ಮೇಲೆ ಹಸಿರು ಬಣ್ಣದ ಪಟ್ಟಿ ಕಡ್ಡಾಯ

Friday, February 5th, 2021
yellow Auto

ಮಂಗಳೂರು : ಮಂಗಳೂರು ಗ್ರಾಮಾಂತರ ಪ್ರದೇಶಗಳಿಂದ ಮಂಗಳೂರು ನಗರ ವ್ಯಾಪ್ತಿಯೊಳಗೆ ತುರ್ತು ಸಂದರ್ಭದಲ್ಲಿ, ರೋಗಿಗಳನ್ನು ಹಾಗೂ ವಯೋ ವೃದ್ಧರನ್ನು ವೈದ್ಯಕೀಯ ತಪಾಸಣೆಗಾಗಿ ಕರೆದುಕೊಂಡು ಬಂದು ಹೋಗುವಾಗ ಮತ್ತು ನಗರದೊಳಗೆ ಪ್ರಯಾಣಿಕರನ್ನು ಅವರು ಹೇಳಿರುವ ಸ್ಥಳಗಳಿಗೆ ತಲುಪಿಸುವಂತಹಾ ಆಟೋರಿಕ್ಷಾಗಳನ್ನು ಸುಲಭವಾಗಿ ಗುರುತಿಸುವ ಸಲುವಾಗಿ ಈಗಾಗಲೇ ನಿರ್ಣಯಿಸಿರುವಂತೆ ಆಟೋರಿಕ್ಷಾ ಮುಂಬದಿ ಕವಚದ ಮೇಲೆ ಹಸಿರು ಬಣ್ಣದ ಪಟ್ಟಿ (ಬಜಾಜ್ ಗ್ರೀನ್) ಕಡ್ಡಾಯವಾಗಿ ಬಳಿದು ಪ್ರದರ್ಶಿಸಬೇಕೆಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ನಿರ್ದೇಶಿಸಿದೆ ಎಂದು ಮಂಗಳೂರು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದೆ.

‘ಝೀರೋ ಟ್ರಾಫಿಕ್’ ಮೂಲಕ ಪುತ್ತೂರಿನಿಂದ ಬೆಂಗಳೂರು ವೈದೇಹಿ ಆಸ್ಪತ್ರೆಗೆ ರೋಗಿಯನ್ನು ತಲುಪಿಸಿದ ಆಂಬುಲೆನ್ಸ್

Wednesday, December 2nd, 2020
suhana

ಪುತ್ತೂರು: ‘ಝೀರೋ ಟ್ರಾಫಿಕ್’  ಮೂಲಕ  ಪುತ್ತೂರಿನ ಆಸ್ಪತ್ರೆಯಿಂದ  ಶ್ವಾಸಕೋಶದ ಶಸ್ತ್ರಚಿಕಿತ್ಸೆಗಾಗಿ ಬೆಂಗಳೂರಿನ ಆಂಬುಲೆನ್ಸ್ ಮೂಲಕ 4. 20 ನಿಮಿಷದಲ್ಲಿ ಬೆಂಗಳೂರು ವೈದೇಹಿ ಆಸ್ಪತ್ರೆಗೆ ರೋಗಿಯನ್ನು ತಲುಪಿಸಲಾಗಿದೆ. ಬೆಳಗ್ಗೆ 11 ಗಂಟೆಗೆ ಪುತ್ತೂರು ಮಹಾವೀರ ಆಸ್ಪತ್ರೆಯಿಂದ ‘ಝೀರೋ ಟ್ರಾಫಿಕ್’ ಆಂಬುಲೆನ್ಸ್ ಪ್ರಯಾಣ ಆರಂಭಿಸಿತು. ವಿವಿಧ ಠಾಣಾ ಪೊಲೀಸರು, ಸಂಘ ಸಂಸ್ಥೆಗಳ ಕಾರ್ಯಕರ್ತರು ಸುಗಮ ಸಂಚಾರಕ್ಕೆ ಸಹಕರಿಸಿದರು ವಿಟ್ಲದ “ಡಿ ಗ್ರೂಪ್”ಆಂಬ್ಯುಲೆನ್ಸ್ ಬೆಂಗಾವಲಾಗಿ ಮುಂಭಾಗದಿಂದ ತೆರಳಿ ಸಹಕರಿಸಿತು. ಆಂಬುಲೆನ್ಸ್ ಬೆಂಗಳೂರು ವೈದೇಹಿ ಆಸ್ಪತ್ರೆ ತಲುಪಿದ ತಕ್ಷಣವೇ ಸುಹಾನಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆಯ […]

ಕೋವಿಡ್ ರೋಗಿಗಳನ್ನು ವಾಪಾಸ್ ಕಳುಹಿಸುವಂತಿಲ್ಲ: ಖಾಸಗೀ ಆಸ್ಪತ್ರೆಗಳಿಗೆ ಉಸ್ತುವಾರಿ ಸಚಿವರ ನಿರ್ದೇಶನ 

Monday, July 20th, 2020
hospital

ಮಂಗಳೂರು :  ಖಾಸಗೀ ಆಸ್ಪತ್ರೆಗಳು ತಮ್ಮಲ್ಲಿಗೆ ಬಂದ ಕೋರೋನಾ ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡದೆ ಯಾವುದೇ ಕಾರಣಕ್ಕೂ ವಾಪಾಸು ಕಳುಹಿಸುವಂತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದ್ದಾರೆ. ಅವರು ಸೋಮವಾರ ನಗರದ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನಲ್ಲಿ ಕೋರೋನಾ ರೋಗಿಗಳ ನಿರ್ವಹಣೆ ಕುರಿತು ಸಭೆ ನಡೆಸಿ, ಬಳಿಕ ಮಾಹಿತಿ ನೀಡಿದರು. ದಕ್ಷಿಣ ಕನ್ನಡ ಜಿಲ್ಲೆಯು ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಮುಂದುವರಿದಿದೆ. ಹೀಗಿರುವಾಗ, ಕೋವಿಡ್ ಸೋಂಕಿತರು ಅಥವಾ ಇತರೆ ಯಾವುದೇ ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ […]