ಮಂಗಳೂರು : ಬೋರ್‌ವೆಲ್ ಕೊಳವೆಗೆ ಬಿದ್ದ ಮಕ್ಕಳನ್ನು ರಕ್ಷಿಸಲು ಬಂದಿದೆ ರೋಬೋಟ್
Friday, June 7th, 2019ಮಂಗಳೂರು : ಬೇಸಿಗೆಯಲ್ಲಿ ನೀರಿನ ಕೊರತೆ ನಿರ್ಮಾಣವಾಗುತ್ತಿದ್ದಂತೆ ಬೋರ್‌ವೆಲ್ ಕೊರೆಸುವುದು ಸರ್ವೇಸಾಮಾನ್ಯ. ಇಂದು ಬೇಕಾಬಿಟ್ಟಿ ಕೊಳವೆಬಾವಿ ಕೊರೆಸುವುದಕ್ಕೆ ತಡೆ ಒಡ್ಡುವ ಕಾನೂನುಗಳಿದ್ದರೂ ಅಧಿಕಾರಿಗಳ ಕಣ್ಣುತಪ್ಪಿಸಿ ಅಲ್ಲಲ್ಲಿ ಕೊಳವೆಬಾವಿ ತೋಡಿಸುತ್ತಾರೆ. ಕೆಲವಾರು ಬಾರಿ ದುರದೃಷ್ಟವಶಾತ್ ಕೊರೆಸಿದ ಬೋರ್‌ವೆಲ್‌ನಲ್ಲಿ ನೀರು ದೊರೆಯುವುದಿಲ್ಲ. ಈ ಸಮಯದಲ್ಲಿ ಆ ಬೋರ್‌ವೆಲ್ ಮುಚ್ಚುವ ಯಾವುದೇ ಕೆಲಸಕ್ಕೆ ಮಾಲೀಕರು ತೊಡಗುವುದಿಲ್ಲ. ಇಂತಹ ಕೊಳವೆಬಾವಿಗಳಿಗೆ ಸಣ್ಣಮಕ್ಕಳು ಬಲಿಯಾಗುವುದನ್ನು ನಾವು ಮಾಧ್ಯಮಗಳಲ್ಲಿ ಕೇಳಿದ್ದೇವೆ. ಇಂತಹ ಸಂದರ್ಭದಲ್ಲಿ ಈ ಮಕ್ಕಳನ್ನು ರಕ್ಷಿಸುವ ಸರಿಯಾದ ಸಾಧನಗಳು ಇರದೆ ಪರದಾಡುವಂತಾಗುತ್ತದೆ. ಈ ಸಮಸ್ಯೆಯನ್ನು ಮನಗಂಡ […]