ಮಂಗಳೂರು : ಉರ್ವ ಮಾರಿಯಮ್ಮ ದೇವಸ್ಥಾನದಲ್ಲಿ ಮಾರ್ಚ್05, ಗುರುವಾರ ಕೋಡಿಕಲ್ ಬ್ರಹ್ಮಶ್ರೀ ಸುಬ್ರಹ್ಮಣ್ಯ ತಂತ್ರಿಯವರ ಪೌರೋಹಿತ್ಯದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಚಂಡಿಕಾಯಾಗ ನಡೆಯಿತು. ಮೊಗವೀರ ಸಮಾಜದ ಬಂಧುಗಳು ಹಾಗೂ ಗ್ರಾಮದ ಭಕ್ತಾದಿಗಳು ಚಂಡಿಕಾಯಾಗದ ಪೂರ್ಣಾಹುತಿಯಲ್ಲಿ ಪಾಲ್ಗೊಂಡು ಪುನೀತರಾದರು. ಈ ಸಂದರ್ಭದಲ್ಲಿ ನಡೆದ ಧಾರ್ಮಿಕ ಸಭೆಯನ್ನು ಲ್ಯಾಂಡ್ ಲಿಂಕ್ಸ್ ಮಾಲಕರಾದ ಪ್ರದೀಪ್ ಪಾಲೇಮಾರ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಶ್ರೀ ಮಾರಿಯಮ್ಮ ದೇವರು ಸರ್ವ ಭಕ್ತಾದಿಗಳ ಬೇಡಿಕೆಗಳನ್ನು ಈಡೇರಿಸಿ, ಸನ್ಮಂಗಳವನ್ನುಂಟುಮಾಡಲಿ ಎಂದು ಪ್ರಾರ್ಥಿಸಿದರು. ಕಾಂಚನ್ ಹುಂಡೈಮಾಲಕರಾದ ಪ್ರಸಾದ […]
ಮಂಗಳೂರು : ಮಂಗಳೂರಿನ ಇತಿಹಾಸ ಪ್ರಸಿದ್ಧ ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದ ವರ್ಷಾವಧಿ ಮಹಾಪೂಜೆಯು ಸೋಮವಾರ ಮತ್ತು ಮಂಗಳವಾರ ಎರಡು ದಿನಗಳ ಕಾಲ ಅತೀ ವಿಜೃಂಭಣೆಯಿಂದ ಜರಗಿತು. ಮೊದಲ ದಿನ ರಾತ್ರಿ ಮಾರಿಯಮ್ಮ ಕ್ಷೇತ್ರದ ವಿಶೇಷ ಸಂಪ್ರದಾಯವಾದ ಹಾಲು ಉಕ್ಕಿಸುವ ಪೂಜೆಯೊಂದಿಗೆ ಆರಂಭವಾದ ಉತ್ಸವವು ಎರಡನೇ ದಿನದಂದು ಇಲ್ಲಿನ ಪರಂಪರೆಯಂತೆ ನೈವೇದ್ಯ ಬಲಿ, ರಾಶಿಪೂಜೆ, ಮಾರಿ ಉಚ್ಚಿಷ್ಠ, ಮೊದಲಾದ ಸಾಂಪ್ರದಾಯಿಕ ವಿಧಿ ವಿಧಾನದೊಂದಿಗೆ ನಡೆಯಿತು. ವರ್ಷಾವಧಿ ಮಹೋತ್ಸವಕ್ಕೆ ಫೆ.11ರಂದು ಪ್ರಸಾದ ಹಾರಿಸುವ ಮೂಲಕ ಈ ಬಾರಿಯ ಚಾಲನೆ […]