ಕಟೀಲು ದೇವಸ್ಥಾನದ ಆಡಳಿತ ಮೊಕ್ತೇಸರರ ಮನೆಗೆ ಮುಸುಕುಧಾರಿಗಳಿಂದ ದಾಳಿ
Tuesday, October 4th, 2016ಮಂಗಳೂರು: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ವಾಸುದೇವ ಅಸ್ರಣ್ಣ ಅವರ ಮನೆಗೆ ಸೋಮವಾರ ತಡರಾತ್ರಿ ಎಂಟು ಮಂದಿ ಮುಸುಕುಧಾರಿಗಳ ತಂಡ ನುಗ್ಗಿ ಸುಮಾರು 55 ಲಕ್ಷ ರೂ. ಮೌಲ್ಯದ ನಗನಾಣ್ಯ ದೋಚಿ ಪರಾರಿಯಾದ ಘಟನೆ ನಡೆದಿದೆ. ಕಟೀಲು ದೇವಸ್ಥಾನದಲ್ಲಿ ರಾತ್ರಿ ಹುಲಿವೇಷಗಳ ವಿಶೇಷ ಪೂಜೆ ಹಾಗೂ ಕುಣಿತವಿದ್ದ ಕಾರಣ ರಾತ್ರಿ 12.10 ಕ್ಕೆ ವಾಸುದೇವ ಅಸ್ರಣ್ಣ ದೇವಸ್ಥಾನದ ಪಕ್ಕವೇ ಇರುವ ಮನೆಗೆ ದುಷ್ಕರ್ಮಿಗಳು ಬಂದಿದ್ದಾರೆ. ಮನೆಯಲ್ಲಿ ತಾಯಿ, ಪತ್ನಿ, ಸೊಸೆ, ಮಗಳು, ಅವರ ಮಕ್ಕಳು ಇದ್ದರು […]